NEWS

Women Health: ಶುಗರ್ ಇರುವ ಮಹಿಳೆಯರು ಪ್ರೆಗ್ನೆಂಟ್​ ಆಗಬಹುದಾ? ಇದ್ರಿಂದ ಮಗುವಿಗೆ ತೊಂದರೆ ಆಗುತ್ತಾ?

ಸಾಂದರ್ಭಿಕ ಚಿತ್ರ ತಾಯಿಯಾಗುವುದು (Mother) ಪ್ರತಿಯೊಬ್ಬ ಮಹಿಳೆಯ ಕನಸು. 9 ತಿಂಗಳ ಗರ್ಭಾವಸ್ಥೆ (Pregnancy) ಪ್ರತಿಯೊಂದು ಮಹಿಳೆಗೂ ಸವಾಲುಗಳಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ಆಹಾರ (Food) ಪದ್ಧತಿಯ ಜೊತೆಗೆ, ವಿಶೇಷ ಕಾಳಜಿ ವಹಿಸಬೇಕಾದ ಅವಶ್ಯಕತೆ ಸಹ ಇರುತ್ತದೆ. ಏಕೆಂದರೆ ಈ ಅವಧಿಯು ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಬದಲಾಗುತ್ತಿರುವ ಹವಾಮಾನ (Weather) ಮತ್ತು ಅದರೊಂದಿಗೆ ಹೆಚ್ಚುತ್ತಿರುವ ಮಾಲಿನ್ಯ ಗರ್ಭಿಣಿ ಮಹಿಳೆ (Pregnant Women) ಮತ್ತು ಆಕೆಯ ಹೊಟ್ಟೆಯಲ್ಲಿರುವ ಮಗುವಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಇದಷ್ಟೇ ಅಲ್ಲದೇ ಇತ್ತೀಚೆಗೆ ಅಧ್ಯಯನವೊಂದು ಕಲ್ಲಿದ್ದಲು ಅಥವಾ ಮರದಂತಹ ಘನ ಇಂಧನವನ್ನು ಅಡುಗೆ ಮತ್ತು ಆಹಾರ ಬಿಸಿಮಾಡಲು ಬಳಸುವುದರಿಂದ ಗರ್ಭಾವಸ್ಥೆಯಲ್ಲಿ ಮಧುಮೇಹದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ತಿಳಿಸಿದೆ. ಚೀನಾದ ಜುನಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು 4,338 ಮಹಿಳೆಯರ ಮೇಲೆ ಅಧ್ಯಯನ ನಡೆಸಿತ್ತು. ಈ ಎಲ್ಲಾ ಮಹಿಳೆಯರ ಸರಾಸರಿ ವಯಸ್ಸು 27 ವರ್ಷವಾಗಿತ್ತು. ಇವರಲ್ಲಿ 302 ಮಹಿಳೆಯರು ಜಿಡಿಎಂ ಹೊಂದಿದ್ದರು. ಅಂದರೆ ಇದು ಮಾಲಿನ್ಯದಿಂದ ಹೆಚ್ಚುತ್ತಿರುವ ಅಪಾಯವಾಗಿದೆ. ಇದರ ಹೊರತಾಗಿ ಇನ್ನೂ ಹಲವು ಅಂಶಗಳೂ ಇವೆ. IANS ಈ ವಿಷಯದ ಬಗ್ಗೆ ಸ್ತ್ರೀರೋಗತಜ್ಞರ ಅಭಿಪ್ರಾಯವನ್ನು ಪಡೆದಿದ್ದು, ತಾಯಿಯಲ್ಲಿ ಅನಿಯಂತ್ರಿತ ಮಧುಮೇಹ, ಧೂಮಪಾನ, ಅಧಿಕ ರಕ್ತದೊತ್ತಡದಿಂದ ಭ್ರೂಣದ ಬೆಳವಣಿಗೆಗೆ ಅಡ್ಡಿಯುಂಟಾಗಬಹುದು. ಇದಕ್ಕೆ ಆನುವಂಶಿಕ ಕಾರಣಗಳು ಕೂದ ಆಗಿದೆ ಎಂದು ತಿಳಿಸಿದೆ. ತಾಯಿಗೆ ಮಧುಮೇಹವಿದ್ದರೆ ಮಗುವಿಗೆ ಅಪಾಯನಾ? ಈ ವಿಚಾರದ ಬಗ್ಗೆ ಹಿರಿಯ ಸ್ತ್ರೀರೋಗ ತಜ್ಞೆ ಹಾಗೂ ಪ್ರಿಸ್ಟಿನ್ ಕೇರ್ ನ ಸಹ ಸಂಸ್ಥಾಪಕಿ ಡಾ.ಗರಿಮಾ ಸಾಹ್ನಿ ಅವರು, ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯು ಹಲವು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಒಬ್ಬ ತಾಯಿಗೆ ಮಧುಮೇಹವಿದ್ದರೆ ಇದರಿಂದ ಮಗು ತುಂಬಾ ದೊಡ್ಡದಾಗಿ ಬೆಳೆಯಬಹುದು ಅಥವಾ ಜನಿಸಿದ ನಂತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಮತ್ತೊಂದು ಅಂಶವೆಂದರೆ ಪೋಷಣೆಯ ಕೊರತೆ. ತಾಯಿಯು ಸಮತೋಲಿತ ಆಹಾರವನ್ನು ತೆಗೆದುಕೊಳ್ಳದಿದ್ದರೆ, ಮಗು ಸರಿಯಾಗಿ ಬೆಳೆಯಲು ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಇದರಿಂದ ಮಗುವಿನ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ. ಇದನ್ನೂ ಓದಿ: ಹೊಸದಾಗಿ ಮದುವೆ ಆಗಿದ್ಯಾ? ಹಾಗಾದ್ರೆ ತಿಳಿದಿರಲಿ ಈ ಸೀಕ್ರೆಟ್​ಗಳು! ಗರ್ಭಾವಸ್ಥೆಯಲ್ಲಿ ಧೂಮಪಾನ ಮತ್ತು ಆಲ್ಕೋಹಾಲ್ ಅಡ್ಡಪರಿಣಾಮ ಇದಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಮಗುವಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಒತ್ತಡವೂ ಒಂದು ದೊಡ್ಡ ಸಮಸ್ಯೆಯಾಗಿದೆ. ಒತ್ತಡವು ಮಗುವಿನ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ತಾಯಿಯಲ್ಲಿ ಒತ್ತಡ ಹೆಚ್ಚಾದರೆ ಮಗುವಿನ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಯಾವುದೇ ಸೋಂಕು ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆ ಗರ್ಭಿಣಿಯರನ್ನು ಕಾಡುತ್ತಿದ್ದರೆ ಇದರಿಂದ ಮಗುವಿನ ಸಾಮಾನ್ಯ ಬೆಳವಣಿಗೆಗೂ ಕಷ್ಟವಾಗುತ್ತದೆ. ಮಧುಮೇಹ ಹೆಚ್ಚಾದರೆ ಗರ್ಭಪಾತ ಆಗುತ್ತಾ? ಇನ್ನೂ ಆನುವಂಶಿಕ ಅಂಶಗಳ ವಿಚಾರವಾಗಿ ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆ (ಆರ್)ನ ಭ್ರೂಣದ ಔಷಧ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ.ಮೌಲ್ಶ್ರೀ ಗುಪ್ತಾ ಮಾತನಾಡಿದ್ದು, ಭ್ರೂಣದ ಬೆಳವಣಿಗೆಯು ಒಂದು ಗಂಭೀರವಾದ ಪ್ರಕ್ರಿಯೆ. ಇದು ಮಗುವಿನ ಬೆಳವಣಿಗೆಯನ್ನು ರೂಪಿಸುವ ಸಂಕೀರ್ಣ ಪ್ರಕ್ರಿಯೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಅನಿಯಂತ್ರಿತ ಮಧುಮೇಹ ಹೆಚ್ಚಾದರೆ ಗರ್ಭಪಾತ ಮತ್ತು ಜನ್ಮ ದೋಷಗಳ ಅಪಾಯವನ್ನು ಹೆಚ್ಚಿಸಬಹುದು. ಉದಾಹರಣೆಗೆ ಹೃದಯ ಸಮಸ್ಯೆಗಳು ಮತ್ತು ನರ ಮಂಡಲದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಹಣ್ಣಷ್ಟೇ ಅಲ್ಲ, ಬಾಳೆ ಹೂವಿನಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು! ಅಧಿಕ ರಕ್ತದೊತ್ತಡವು ಜರಾಯುವಿನ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಇದು ಭ್ರೂಣಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ಇತರ ಸಮಸ್ಯೆಗಳಿಗೂ ಕಾರಣವಾಗಬಹುದು. ಗರ್ಭಿಣಿ ಮಹಿಳೆ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಜೊತೆಗೆ ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮ ಮಾಡಬೇಕು. ಆಗಾಗ ಅಲ್ಟ್ರಾಸೌಂಡ್ ಸ್ಕ್ಯಾನ್ ಸೇರಿದಂತೆ ನಿಯಮಿತ ತಪಾಸಣೆಗಳ ಮೂಲಕ ಮಗುವಿನ ಗಾತ್ರ, ತೂಕ ಮತ್ತು ಒಟ್ಟಾರೆ ಆರೋಗ್ಯವನ್ನು ಪರಿಶೀಲಿಸಬೇಕು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.