NEWS

Actor Darshan: ಕೋರ್ಟ್ ಜಂಜಾಟ ಮುಗೀತು, ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್! ಮೈಸೂರಿನ ಫಾರಂ ಹೌಸ್‌ಗೆ ತೆರಳಿದ 'ಕಾಟೇರ'!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Case) ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್ (Actor Darshan)​ ಜಾಮೀನು ಪಡೆದ ಖುಷಿಯಲ್ಲಿದ್ದಾರೆ. ಬೆನ್ನು ನೋವು ಅಂತ ಆಸ್ಪತ್ರೆಯಲ್ಲ ಒಂದೂವರೆ ತಿಂಗಳು ಚಿಕಿತ್ಸೆ ಪಡೆದ ದರ್ಶನ್, ರೆಗ್ಯುಲರ್​ ಬೇಲ್ (Bail) ಸಿಕ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ರು. ಮನೆಗೆ ಹೋದ ದರ್ಶನ್​ಗೆ ಮೈಸೂರಿನ ತುಡಿತ ಹೆಚ್ಚುತ್ತಿತ್ತು. ಮೈಸೂರಿಗೆ (Mysuru) ತೆರಳಲು ನಟ ದರ್ಶನ್​ಗೆ ನಿನ್ನೆ ರಾತ್ರಿ (ಡಿ.19) ಕೋರ್ಟ್​ ಅನುಮತಿ ನೀಡ್ತಿದ್ದಂತೆ ನಟ ದರ್ಶನ್, ಬೆಳಗ್ಗೆಯೇ ಮೈಸೂರಿಗೆ ಹಾರಿದ್ದಾರೆ. ಕೋರ್ಟ್ ಜಂಜಾಟ ಮುಗಿದ ಬಳಿಕ ನಟ ದರ್ಶನ್​, ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರಂ​ ಹೌಸ್ ನಲ್ಲಿ ರಿಲ್ಯಾಕ್ಸ್ ಮಾಡ್ತಿದ್ದಾರೆ. ಫಾರಂ​ ಹೌಸ್ ನಲ್ಲಿ ದರ್ಶನ್​ ವಿಶ್ರಾಂತಿ ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ದರ್ಶನ್, ವಿನೀಶ್ ಕ್ಯಾಟವೇರಿ ಫಾರಂ ಹೌಸ್​ನಲ್ಲಿ ನಟ ದರ್ಶನ್ ರೆಸ್ಟ್ ಮಾಡ್ತಿದ್ದಾರೆ. ಈ ಫಾರಂ ಹೌಸ್​ನಲ್ಲಿ ನಟ ದರ್ಶನ್ ಕೆಲ ಪ್ರಾಣಿಗಳನ್ನು ಸಾಕಿದ್ದಾರೆ. ದರ್ಶನ್ ಇಲ್ಲಿಯೇ ಹೆಚ್ಚಾಗಿ ಇರಲು ಇಷ್ಟಪಡುತ್ತಿದ್ರು. ಆಗಾಗ ಫಾರಂ ಹೌಸ್​ಗೆ ಭೇಟಿ ನೀಡ್ತಿದ್ರು. ದಾಸನ ಜೊತೆ ಧನ್ವಿರ್​! ಮೈಸೂರಿನ ಫಾರಂ ಹೌಸ್​ಗೆ ನಟ ದರ್ಶನ್ ಜೊತೆಯೇ ನಟ ಧನ್ವಿರ್ ಕೂಡ ಇದ್ದಾರೆ. ದಾಸ ಜೈಲಿಗೆ ಹೋದಾಗಿನಿಂದಲೂ ಕಾನೂನು ಹೋರಾಟದಲ್ಲಿ ನಟ ಧನ್ವಿರ್ ಕೂಡ ಕೈ ಜೋಡಿಸಿದ್ರು. ದರ್ಶನ್ ಬೇಲ್​ಗೆ ಶ್ಯೂರಿಟಿ ಕೊಟ್ಟಿದ್ದಾರೆ. ತಮ್ಮನಂತೆ ನಟ ದರ್ಶನ್​ಗೆ ಬೆಂಬಲವಾಗಿ ನಿಂತಿದ್ದಾರೆ. ಗೇಟ್ ಬಂದ್ ಮಾಡಿಸಿದ ದರ್ಶನ್! ಮಾಧ್ಯಮದ ಕ್ಯಾಮೆರಾ ಕಂಡು ಗೇಟ್ ಕಿಂಡಿಯನ್ನೇ ದರ್ಶನ್​ ಮುಚ್ಚಿಸಿದ್ದಾರೆ. ಹೊರಗಡೆಯ ಗೇಟ್ ಬಳಿ ಯಾವುದೇ ವಿಶ್ಯೂವಲ್ ಸಿಗದಂತೆ ಬಂದ್ ಮಾಡಿಸಿದ್ರು. ಫಾರಂ ಹೌಸ್ ನ ಹೊರ ಭಾಗದಿಂದ ಯಾವುದೇ ಚಿತ್ರೀಕರಣ ಮಾಡದಂತೆ ದರ್ಶನ್ ತೋಟದ ಸಿಬ್ಬಂದಿಗಳು ಗೇಟ್ ಬಂದ್ ಮಾಡಿದ್ರು. ನಟ ದರ್ಶನ್ ಮೈಸೂರಿಗೆ ಹೋಗಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಎಚ್ 57 ರ ನ್ಯಾಯಾಲಯ ನಟ ದರ್ಶನ್​ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿದೆ. ಜನವರಿ 5ರ ವರೆಗೂ ಮೈಸೂರಿಗೆ ಹೋಗಲು ಕೋರ್ಟ್ ಅನುಮತಿ ನೀಡಿದೆ. ನಾಳೆಯಿಂದ ಜನವರಿ 5 ರ ವರೆಗೂ ಯಾವಾಗ ಬೇಕಾದರೂ ಮೈಸೂರಿಗೆ ಹೋಗಿ ಬರಬಹುದಿದೆ. ಅಮ್ಮನನ್ನು ನೋಡ್ಬೇಕು ಅಂತಿದ್ದಾರೆ ದರ್ಶನ್! ನನ್ನ ತಾಯಿಗೆ ಹುಷಾರಿಲ್ಲದ ಕಾರಣ ಮೈಸೂರಿಗೆ ತೆರಳಿ ಅವರನ್ನು ನೋಡ್ಬೇಕು. ಜೊತೆಗೆ ಸಾಕು ಪ್ರಾಣಿಗಳ ನೋಡಬೇಕಿದ್ದು, ಮೈಸೂರಿಗೆ ಹೋಗಲು ಅನುಮತಿ ನೀಡುವಂತೆ ದರ್ಶನ್ ಮನವಿ ಮಾಡಿದ್ರು.​ ಮೈಸೂರಿನ ಆಸ್ಪತ್ರೆಯಲ್ಲಿ ಸೆಕೆಂಡ್ ಒಪಿನೀಯನ್ ಪಡೆಯಬೇಕು ಅಂತ ದರ್ಶನ್ ಪರ ವಕೀಲರು ನಾಲ್ಕು ವಾರಗಳ ಕಾಲ ಅವಕಾಶ ಕೊಡುವಂತೆ ಮನವಿ ಮಾಡಿದ್ರು. ಎರಡು ವಾರಗಳ ಕಾಲ ಅನುಮತಿ‌ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದಕ್ಕೆ ಎಸ್ ಪಿ ಪಿ ಕೂಡ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: Actor Darshan: ಮೈಸೂರಿಗೆ ಹೋಗಲು ದರ್ಶನ್​ಗೆ ಸಿಕ್ಕೇ ಬಿಡ್ತು ಪರ್ಮೀಷನ್​! ಎಷ್ಟು ದಿನ ಅಲ್ಲೇ ಇರ್ತಾರೆ ದಾಸ? ಜ.10ರಂದು ಕೋರ್ಟ್​ಗೆ ಹಾಜರಾಗಲು ಸೂಚನೆ ನಟ ದರ್ಶನ್ ಅವರಿಗೆ ಜನವರಿ 10ರಂದು ಕೋರ್ಟ್​ಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಪೊಲೀಸರು ವಶಕ್ಕೆ ಪಡೆದಿದ್ದ ಸ್ಕಾರ್ಫಿಯೋ ಕಾರನ್ನು ಕೂಡ ವಾಪಸ್ ನೀಡುವಂತೆ ಸೂಚನೆ ನೀಡಲಾಗಿದೆ. ಸ್ಕಾರ್ಫಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಲಾಗಿತ್ತು. ಇದನ್ನ ಪೊಲೀಸರು ವಶಪಡಿಸಿಕೊಂಡಿದ್ದರು. (ವರದಿ: ಆನಂದ್​, ನ್ಯೂಸ್​18 ಕನ್ನಡ ಮೈಸೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.