NEWS

Congress: ನಾನು ಬಲಗೈ ಸಮುದಾಯಕ್ಕೆ ಸೇರಿದವನು, ನನಗೆ ಸಚಿವ ಸ್ಥಾನ ನೀಡಲೇಬೇಕು! ಕಾಂಗ್ರೆಸ್ ಹಿರಿಯ ಶಾಸಕನ ಆಗ್ರಹ

ಪ್ರಾತಿನಿಧಿಕ ಚಿತ್ರ ಕೋಲಾರ: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಸಚಿವಾಕಾಂಕ್ಷಿಗಳ ಪಟ್ಟಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸದ್ಯ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗುತ್ತಿದೆ. ಹಾಗಾಗಿ ಸಚಿವ ಸಂಪುಟ (Cabinet) ವಿಸ್ತರಣೆ ಮಾತುಗಳು ಕೂಡ ಕೇಳಿ ಬರುತ್ತಿವೆ. ಇತ್ತೀಚೆಗೆ ಡಿಕೆ ಶಿವಕುಮಾರ್ (DK Shivakumar) ಅವರು ಕೂಡ ಸಂಪುಟ ವಿಸ್ತರಣೆಯ ಮಾತುಗಳನ್ನಾಡಿದ್ದರು. ಇದಾದ ಬಳಿಕ ಪುಟ್ಟರಂಗಶೆಟ್ಟಿಯವರು ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಕಾಂಗ್ರೆಸ್‌ನ ಇನ್ನೋರ್ವ ಹಿರಿಯ ಶಾಸಕ (Senior Congress MLA) ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ! ಹೌದು, ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸಚಿವ ಸ್ತಾನ ನೀಡುವಂತೆ ಒತ್ತಾಯಿಸಿದರು. ಸಚಿವ ಸ್ಥಾನಕ್ಕಾಗಿ ಪರಿಶಿಷ್ಟ ಜಾತಿ ಬಲಗೈ ಅಸ್ತ್ರ ಪ್ರಯೋಗಿಸಿದ ನಾರಾಯಣಸ್ವಾಮಿ ಅವರು, ನಾನೊಬ್ಬ ಬಲಗೈ ಸಮಾಜದ ಶಾಸಕ, ಮೂರು ಬಾರಿ ಗೆದ್ದಿದ್ದೇನೆ. ಏಪ್ರಿಲ್-ಮೇ ನಂತರ ಸಚಿವ ಸಂಪುಟ ವಿಸ್ತರಣೆ ಆಗಬಹುದು ಆಗ ನನಗೆ ಸಚಿವ ಸ್ಥಾನ ಸಿಗಲಿದೆ ಎಂದರು. ಇದನ್ನೂ ಓದಿ: Siddaramaiah: ಬಳ್ಳಾರಿ ಜಿಲ್ಲೆಗೆ ಜನಾರ್ಧನರೆಡ್ಡಿ ಕಳಂಕ ತಂದಿದ್ದಾರೆ! ಸಂಡೂರು ಅಭಿನಂದನಾ ಸಮಾವೇಶದಲ್ಲಿ ಸಿಎಂ ವಾಗ್ದಾಳಿ ಜಾತಿ ಅಸ್ತ್ರ ಪ್ರಯೋಗಿಸಿದ ಕೈ ಶಾಸಕ ಮುಂದುವರೆದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನನಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ನಾನು ಒತ್ತಾಯ ಮಾಡಿದ್ದೇನೆ, ಕಾದು ನೋಡುತ್ತೇನೆ. 50 ವರ್ಷದಿಂದ ಕೋಲಾರದ ಬಲಗೈ ಸಮಾಜಕ್ಕೆ ಸಚಿವ ಸ್ತಾನ ಸಿಕ್ಕಿಲ್ಲ ಎಂದು ಸಚಿವ ಸ್ಥಾನದ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು. 2.5 ವರ್ಷಕ್ಕೆ ಸಚಿವ ಸ್ಥಾನ ಕೊಡ್ತೀನಿ ಅಂದಿದ್ರು! ಜನಪರ ಕಾಳಜಿ, ಜನಪರ ಹೋರಾಟ ಹಾಗೂ ಕೋಲಾರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಆಕಾಂಕ್ಷೆ ಹೊಂದಿದ್ದೇನೆ. ನನಗೆ ಅವಕಾಶ ಕೊಟ್ಟರೆ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ, 2.5 ವರ್ಷಗಳ ನಂತ್ರ ಸಚಿವ ಸ್ಥಾನ ಕೊಡ್ತೀವಿ ಅಂತ ಹೇಳಿದ್ರು ಅದರಂತೆ ನನಗೆ ಸಚಿವ ಸ್ಥಾನ ಕೊಡಬೇಕು. ನನಗೆ ನಂಬಿಕೆ ಇದೆ ನನಗೆ ಸಚಿವ ಸ್ಥಾನ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ವರದಿ: ರಘು MLA SN Narayanaswamy requested the high command to make a minister ರಾಜ, ನ್ಯೂಸ್18 ಕನ್ನಡ, ಕೋಲಾರ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.