NEWS

ICC Hall Of Fame: ಐಸಿಸಿ ಹಾಲ್ ಆಫ್​ ಫೇಮ್​ಗೆ ಭಾರತದ ಮಹಿಳಾ ಕ್ರಿಕೆಟರ್! ಎಬಿಡಿ, ಕುಕ್​ಗೂ ಸಿಕ್ತು ಶ್ರೇಷ್ಠ ಗೌರವ

ಐಸಿಸಿ ಹಾಲ್ ಆಫ್ ಫೇಮ್​​ಪಟ್ಟಿ ಸೇರಿದ 3 ಮಾಜಿ ಕ್ರಿಕೆಟಿಗರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬುಧವಾರ ಮೂವರು ದಿಗ್ಗಜ ಕ್ರಿಕೆಟಿಗರನ್ನ ಹಾಲ್​ ಆಫ್​ ಫೇಮ್​ ( Hall Of Fame)ಪಟ್ಟಿಗೆ ಸೇರಿಸಿದೆ. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ ಕೀಪರ್ ಎಬಿ ಡಿವಿಲಿಯರ್ಸ್ (AB de Villiers), ಇಂಗ್ಲೆಂಡ್‌ನ ಮಾಜಿ ಆರಂಭಿಕ ಆಟಗಾರ ಅಲಸ್ಟೈರ್ ಕುಕ್ (Alastair Cook) ಮತ್ತು ಭಾರತದ ಮಾಜಿ ಸ್ಪಿನ್ನರ್ ನೀತು ಡೇವಿಡ್ (Neetu David) ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಭಾರತದ ಪರ ಈಗಾಗಲೇ ವೀನೂ ಮಂಕಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ರಾಹುಲ್ ದ್ರಾವಿಡ್, ಡಯಾನಾ ಎಡುಲ್ಜಿ, ವೀರೇಂದ್ರ ಸೆಹ್ವಾಗ್ ಈಗಾಗಲೇ ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದೀಗ ಆ ಪಟ್ಟಿಗೆ ನೀತು ಸೇರಿಕೊಂಡಿದ್ದಾರೆ. ICC ಹಾಲ್ ಆಫ್ ಫೇಮ್ ಅನ್ನು ಜನವರಿ 2009 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ನ ಶತಮಾನೋತ್ಸವದ ಆಚರಣೆಯ ಭಾಗವಾಗಿ ಪ್ರಾರಂಭಿಸಲಾಯಿತು. ಅಂದಿನಿಂದ ಅನೇಕ ಶ್ರೇಷ್ಠ ಆಟಗಾರರನ್ನು ಗೌರವಿಸಲಾಗಿದೆ. ಎಬಿ ಡಿ ವಿಲಿಯರ್ಸ್ ಡಿವಿಲಿಯರ್ಸ್ ತಮ್ಮ ವೃತ್ತಿ ಜೀವನದಲ್ಲಿ 114 ಟೆಸ್ಟ್ ಪಂದ್ಯಗಳಲ್ಲಿ 8,765 ರನ್, 228 ODIಗಳಲ್ಲಿ 9,577 ರನ್ ಮತ್ತು 78 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1,672 ರನ್ ಗಳಿಸಿದ್ದಾರೆ. ವಿಕೆಟ್ ಕೀಪಿಂಗ್​ನಲ್ಲಿ 463 ಕ್ಯಾಚ್‌ಗಳು ಮತ್ತು 17 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಡಿವಿಲಿಯರ್ಸ್ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. “ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿರುವುದು ಹಾಗೂ ಈ ರೀತಿಯಾಗಿ ಗುರುತಿಸಲ್ಪಡುವ ಆಯ್ದ ಕ್ರಿಕೆಟಿಗರ ಲಿಸ್ಟ್​ನಲ್ಲಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ” ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಇದನ್ನೂ ಓದಿ: 147 ವರ್ಷಗಳಲ್ಲಿ ಇದೇ ಮೊದಲು! ಟೆಸ್ಟ್​ ಕ್ರಿಕೆಟ್​ನಲ್ಲಿ ಯಾವ ತಂಡದಿಂದಾಗದ ದಾಖಲೆ ಬರೆಯಲು ಭಾರತ ಸಜ್ಜು! ಅಲಸ್ಟೈರ್ ಕುಕ್ ಅಲಸ್ಟೈರ್ ಕುಕ್ 2006 ರಿಂದ 2018 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು, ಇಂಗ್ಲೆಂಡ್ ತಂಡದ ಶ್ರೇಷ್ಠ ಟೆಸ್ಟ್​ ಆಟಗಾರನಾಗಿದ್ದಾರೆ. ಅವರು 161 ಟೆಸ್ಟ್, 92 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 12,472 ರನ್, ಏಕದಿನದಲ್ಲಿ 3,204 ರನ್ ಮತ್ತು ಟಿ20ಯಲ್ಲಿ 61 ರನ್ ಗಳಿಸಿದ್ದಾರೆ. 38 ಅಂತಾರಾಷ್ಟ್ರೀಯ ಶತಕಗಳ ಜೊತೆಗೆ 76 ಅರ್ಧಶತಕಗಳನ್ನು ಗಳಿಸಿದ್ದಾರೆ. ಕುಕ್ ಪ್ರತಿಕ್ರಿಯಿಸಿ, ಹಾಲ್ ಆಫ್ ಫೇಮ್​​ಗೆ ಸೇರ್ಪಡೆಯಾಗುತ್ತಿರುವುದು ನನಗೆ ಆಶ್ಚರ್ಯಕರವಾಗಿದೆ. ಏಕೆಂದರೆ ನೀವು ಸೇರುತ್ತಿರುವ ದಿಗ್ಗಜರ ಪಟ್ಟಿಯನ್ನು ನೋಡಿದಾಗ, ಇದಕ್ಕೆ ಸೇರ್ಪಡೆಗೊಳ್ಳುವುದು ದೊಡ್ಡ ಗೌರವ ಎಂದೆನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ನಾನು ಇಂಗ್ಲಿಷ್ ಶರ್ಟ್ ಧರಿಸಿದಾಗ ಸಾಧ್ಯವಾದಷ್ಟು ಉತ್ತಮವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನಾನು ಅತ್ಯುತ್ತಮ 20 ವರ್ಷ ಕ್ರಿಕೆಟ್ ಆಡಿದ್ದೇನೆ. ಗಾಯರಹಿತವಾಗಿ ಉಳಿಯಲು, ಕೆಲವು ಶ್ರೇಷ್ಠ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಹಲವು ಏರಿಳಿತಗಳನ್ನ ಕಂಡಿದ್ದೇನೆ. ಹಾಗಾಗಿ ಈ ಗೌರವ ಹಂಚಿಕೊಳ್ಳಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ ಎಂದು ಕುಕ್ ತಿಳಿಸಿದ್ದಾರೆ. 180 ವಿಕೆಟ್ ಪಡೆದಿರುವ ನೀತು ಡೇವಿಡ್ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ ನೀತು ಡೇವಿಡ್ 10 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್ ಹಾಗೂ 97 ಏಕದಿನ ಪಂದ್ಯಗಳಲ್ಲಿ 141 ವಿಕೆಟ್ ಪಡೆದಿದ್ದಾರೆ. ಅವರು 2006 ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪರ ತಮ್ಮ ಕೊನೆಯ ಪಂದ್ಯವಾಡಿದ್ದರು. ಐಸಿಸಿ ಹಾಲ್ ಆಫ್ ಫೇಮ್‌ಗೆ ಪ್ರವೇಶಿಸಿರುವ ಬಗ್ಗೆ ಮಾತನಾಡಿದ ನೀತು, ಈ ಲಿಸ್ಟ್​ನಲ್ಲಿ ಸೇರುವ ಅವಕಾಶ ಪಡೆದಿರುವುದು ನಿಜವಾಗಿಯೂ ದೊಡ್ಡ ಗೌರವ ಎಂದು ಹೇಳಿದ್ದಾರೆ. ಈ ಮಟ್ಟಕ್ಕೆ ತಲುಪಿರುವುದು ತನಗೆ ವಿಶೇಷವಾದ ಪ್ರಯಾಣವಾಗಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಹಾಲ್ ಆಫ್ ಫೇಮರ್ ಆಗಿ ಗುರುತಿಸಿಕೊಳ್ಳುವುದು ತುಂಬಾ ರೋಮಾಂಚನಕಾರಿ ಅನುಭವ ನೀಡುತ್ತಿದೆ. ಇದಕ್ಕೆಲ್ಲಾ ಕಾರಣರಾದ ಬಿಸಿಸಿಐ, ಕೋಚ್, ಸಹಾ ಆಟಗಾರರು,ಕುಟುಂಬ ಮತ್ತು ಸ್ನೇಹಿತರಿಗೆ ದನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.