NEWS

Maharashtra: ನಿನ್ನೆ ಬಹಿಷ್ಕಾರ, ಇಂದು ಸ್ವೀಕಾರ! MVA ಬಣದ ಶಾಸಕರಿಂದ ಇಂದು ಪ್ರಮಾಣವಚನ

ವಿರೋಧ ಪಕ್ಷಗಳ ನೂತನ ಶಾಸಕರು ಪ್ರಮಾಣವಚನ ಸ್ವೀಕಾರ ದೆಹಲಿ: ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು (oath taking ceremony) ಇವಿಎಂ ವಿರುದ್ದ ಹೋರಾಟದ ಕಾರಣವಾಗಿ ಪಕ್ಷವು ಶನಿವಾರ (ಡಿ.07) ಬಹಿಷ್ಕರಿಸಿತ್ತು. ಶಿವಸೇನೆಯ ಯುಬಿಟಿ ನಾಯಕ ಆದಿತ್ಯ ಠಾಕ್ರೆ (Aditya Thackeray) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇವಿಎಂಗಳ ಮೇಲೆ ಪಕ್ಷಕ್ಕೆ ಅನುಮಾನವಿದ್ದು, ಚುನಾವಣಾ ಫಲಿತಾಂಶವು ರಾಜ್ಯದ ಜನರ ಆದೇಶವಲ್ಲ, ಬದಲು ಇವಿಎಂ ಮತ್ತು ಚುನಾವಣಾ ಆಯೋಗದ ಆದೇಶವಾಗಿದೆ ಎಂದು ಹೇಳಿದ್ದರು. ಇದೀಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (MVA) ಸದಸ್ಯರು ಭಾನುವಾರ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸಿ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನದಂದೇ ಪ್ರತಿಪಕ್ಷದ ಸದಸ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಿದ್ದರು. ಇದನ್ನೂ ಓದಿ: ಬೆಂಕಿಗಾಹುತಿಯಾಗಿದ್ದ ನೊಟ್ರೆ ಡೇಮ್ ಆರಾಧನ ಮಂದಿರ 5 ವರ್ಷಗಳ ಬಳಿಕ ಲೋಕಾರ್ಪಣೆ ಇಂದು (ಭಾನುವಾರ) ಕಾಂಗ್ರೆಸ್‌ನ ನಾನಾ ಪಟೋಲೆ, ವಿಜಯ್ ವಾಡೆತ್ತಿವಾರ್ ಮತ್ತು ಅಮಿತ್ ದೇಶಮುಖ್, ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವ್ಹಾದ್ ಮತ್ತು ಶಿವಸೇನೆಯ (ಯುಬಿಟಿ) ಆದಿತ್ಯ ಠಾಕ್ರೆ ಸೇರಿದಂತೆ ಹಲವರು ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಕೆ! ಏತನ್ಮಧ್ಯೆ, ಹಿಂದಿನ ವಿಧಾನಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಬಿಜೆಪಿ ನಾಯಕ ಮತ್ತು ಕೊಲಾಬಾ ಶಾಸಕ ರಾಹುಲ್ ನಾರ್ವೇಕರ್ ಅವರು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಸಮ್ಮುಖದಲ್ಲಿ , ಶ್ರೀ ನಾರ್ವೇಕರ್ ಅವರು ಭಾನುವಾರ (ಡಿಸೆಂಬರ್ 8, 2024) ಸ್ಪಿಕರ್‌ ಹುದ್ದೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ, ಹಿರಿಯ ಮುಖಂಡ ಚಂದ್ರಕಾಂತ ಪಾಟೀಲ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು. ಇವಿಎಂ ಹೋರಾಟವನ್ನು ವಿಧಾನಸಭೆಗೆ ಕೊಂಡೊಯ್ದ ಶಿವಸೇನೆ ಯುಬಿಟಿ ಶನಿವಾರ ಶಿವಸೇನೆ ಪಕ್ಷದ ಗೆದ್ದ ನಾಯಕರು ಪ್ರಮಾಣ ವಚನವನ್ನು ಸಂಪೂರ್ಣವಾಗಿ ಬಹಿಷ್ಕರಿಸಿದದರು. ಈ ವೇಳೆ “ ನಾವು ನಮ್ಮ (ಶಿವಸೇನೆ ಯುಬಿಟಿ) ಗೆದ್ದ ಶಾಸಕರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಇದು ಜನಾದೇಶವಾಗಿದ್ದರೆ, ಜನರು ಸಂತೋಷದಿಂದ ಇದನ್ನು ಆಚರಿಸುತ್ತಿದ್ದರು, ಆದರೆ ಜನರು ಈ ವಿಜಯವನ್ನು ಎಲ್ಲಿಯೂ ಆಚರಿಸಲಿಲ್ಲ. ಇವಿಎಂ ಬಗ್ಗೆ ನಮಗೆ ಅನುಮಾನವಿದ್ದು, ಇವಿಎಂ ಬಳಕೆಯಿಂದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ಆದಿತ್ಯ ಠಾಕ್ರೆ ಅವರು ಆರೋಪಿಸಿದ್ದರು. “ಇದು (ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ) ಸಾರ್ವಜನಿಕರ ಆದೇಶವಲ್ಲ, ಇದು ಇವಿಎಂ ಮತ್ತು ಭಾರತದ ಚುನಾವಣಾ ಆಯೋಗದ ಆದೇಶವಾಗಿದೆ” ಎಂದು ಅವರು ಹೇಳಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.