NEWS

Pushpa 2: ಸಂಧ್ಯ ಥಿಯೇಟರ್ ಕಾಲ್ತುಳಿತದಲ್ಲಿ ಮೃತಪಟ್ಟ ರೇವತಿ ಮಗನ ಭೇಟಿ ಮಾಡಿದ ಪುಷ್ಪ 2 ಡೈರೆಕ್ಟರ್! ಕೊಟ್ಟಿದ್ದೆಷ್ಟು ಲಕ್ಷ?

ಸುಕುಮಾರ್ ಪುಷ್ಪ 2 (Pushpa 2) ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಸಿನಿಮಾ (Cinema) ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದ್ದು ಭಾರೀ ಸುದ್ದಿಯಾಗಿದೆ. ಈ ನಡುವೆ ಹೈದರಾಬಾದ್​ನಲ್ಲಿ ಸಂಧ್ಯ ಥಿಯೇಟರ್​ನಲ್ಲಿ (Sandhya Theater) ಸಂಭವಿಸಿದ ಕಾಲ್ತುಳಿತದ ಘಟನೆ ಭಾರೀ ಸುದ್ದಿಯಾಗಿದೆ. ಅಲ್ಲು ಅರ್ಜುನ್ ಅವರನ್ನು ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳಾ ಅಭಿಮಾನಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಅವರ ಮಗ ಗಂಭೀರ ಸ್ಥಿತಿಯಲ್ಲಿದ್ದಾನೆ. ಈ ಘಟನೆಗೆ ಸಂಬಂಧಿಸಿ ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಅರೆಸ್ಟ್ ಆಗಿ ರಿಲೀಸ್ ಆಗಿದ್ದರು. ಅವರ ತಂದೆ ಅಲ್ಲು ಅರವಿಂದ್ ಅವರು ಇತ್ತೀಚೆಗೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದರು. ಈಗ ಪುಷ್ಪ 2 ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ಈಗ ರೇವತಿ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ರೇವತಿ ಅವರ 9 ವರ್ಷದ ಮಗ ಶ್ರೀ ತೇಜ್​ನನ್ನು ಭೇಟಿ ಮಾಡಿದ್ದಾರೆ. ಶ್ರೀತೇಜ್ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದನು. ಡಿಸೆಂಬರ್ 4ರಂದು ನಡೆದ ಶೋ ವೇಳೆ ಈ ಘಟನೆ ನಡೆದಿತ್ತು. ಸದ್ಯ ನಿರ್ದೇಶಕ ಸುಕುಮಾರ್ ಅವರು ಬಾಲಕನನ್ನು ಭೇಟಿ ಮಾಡಿದ್ದಾರೆ. ಇಂಡಿಯಾ ಟುಡೆ ಪ್ರಕಾರ ಸುಕುಮಾರ್ ಅವರು ಡಿಸೆಂಬರ್ 9ರಂದು ಬಾಲಕನನ್ನು ಹೋಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಅವರು ಕುಟುಂಬದ ಜೊತೆಗೆ ಬಾಲಕನ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಬಾಲಕನ ತಂದೆ ಜೊತೆಗೂ ಅವರು ಮಾತನಾಡಿದ್ದಾರೆ. ಘಟನೆಯ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಕುಟುಂಬಕ್ಕೆ 5 ಲಕ್ಷ ಸಹಾಯಧನವನ್ನೂ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ನಿರ್ದೇಶಕ ಸುಕುಮಾರ್ ಅವರ ವಕ್ತಾರರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಸುಕುಮಾರ್ ಅವರು ಶ್ರೀ ತೇಜ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಶ್ರೀತೇಜ್ ತಂದೆಗೆ 5 ಲಕ್ಷ ಕೊಟ್ಟಿದ್ದಾರೆ ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ. ನಿರ್ದೇಶಕ ಸುಕುಮಾರ್ ಅವರ ವಕ್ತಾರರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಸುಕುಮಾರ್ ಅವರು ಶ್ರೀ ತೇಜ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಶ್ರೀತೇಜ್ ತಂದೆಗೆ 5 ಲಕ್ಷ ಕೊಟ್ಟಿದ್ದಾರೆ ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: Pushpa 2: ಕಿಸಿಕ್ ಫುಲ್ ಸಾಂಗ್ ಔಟ್! ಅಲ್ಲು ಜೊತೆ ಶ್ರೀಲೀಲಾ ಮಸ್ತ್ ಸ್ಟೆಪ್ ಸಂಧ್ಯ ಥಿಯೇಟರ್ ಕಾಲ್ತುಳಿತದ ಘಟನೆ ಡಿಸೆಂಬರ್ 4ರಂದು ಹೈದರಾಬಾದ್​​ನ ಸಂಧ್ಯ ಥಿಯೇಟರ್​ನಲ್ಲಿ ಪುಷ್ಪ 2 ಪ್ರೀಮಿಯರ್ ಶೋ ಇದ್ದ ಕಾರಣ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಅಲ್ಲು ಅರ್ಜುನ್ ಅಭಿಮಾನಿ ಮೃತಪಟ್ಟಿದ್ದರು. 35 ವರ್ಷದ ಮೊಗುಡಂಪಲ್ಲಿ ರೇವತಿ ಹಾಗೂ ಅವರ ಮಗ ಶ್ರೀ ತೇಜ್ ಉಸಿರಾಡಲಾಗದೆ ತೊಂದರೆ ಅನುಭವಿಸಿದ್ದರು. ಇದನ್ನೂ ಓದಿ: UI Movie: ಯುಐ ಮೂವಿ ಒಳಗೆ ಇನ್ನೊಂದು ಮೂವಿ ಇದ್ಯಾ? ಇದು ನಿಜಾನಾ? ಭಾರೀ ಕಾಲ್ತುಳಿತದ ಪರಿಣಾಮ ರೇವತಿ ಮೃತಪಟ್ಟಿದ್ದರು. ಪೊಲೀಸರು ಸಿಪಿಆರ್ ಮಾಡಿ ಆಸ್ಪತ್ರೆಗೆ ಕೊರೆದೊಯ್ದರೂ ಸಂಧ್ಯ ಮೃತಪಟ್ಟಿದ್ದರು. ಅವರ ಮಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಸದ್ಯ ಬಾಲಕ ಶ್ರೀತೇಜ್​​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಪುಷ್ಪ ಸಿನಿಮಾದ ಓಟ ಇನ್ನೂ ನಿಂತಿಲ್ಲ. ರಿಲೀಸ್ ಆಗಿ 2 ವಾರ ಕಳೆದ ಮೇಲೆ ಕೂಡಾ ಸಿನಿಮಾಗೆ ಭಾರೀ ರೆಸ್ಪಾನ್ಸ್ ಬರುತ್ತಲೇ ಇದೆ. ವಿಶೇಷವಾಗಿ ಹಿಂದಿ ಬೆಲ್ಟ್​ನಲ್ಲಿ ಪುಷ್ಪ 2 ಸಿನಿಮಾಗೆ ಭಾರೀ ರೆಸ್ಪಾನ್ಸ್ ಬಂದಿದ್ದು, ತುಂಬಾ ಚೆನ್ನಾಗಿ ಕೆಲಕ್ಷನ್ ಮಾಡುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.