NEWS

Annamalai : ನಟಿ ತ್ರಿಶಾ ಜೊತೆ ವಿಜಯ್ ಫೋಟೋ ಲೀಕ್​, ದಳಪತಿಯ ಬೆಂಬಲಕ್ಕೆ ನಿಂತ ಅಣ್ಣಾಮಲೈ ಹೇಳಿದ್ದೇನು?

ದಳಪತಿ ವಿಜಯ್ (Thalapathy Vijay) ಮತ್ತು ತ್ರಿಶಾ ಕೃಷ್ಣನ್ (trisha Krishnan) ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂಬ ವದಂತಿ ಬಹಳಷ್ಟು ಸಮಯದಿಂದ ಸುದ್ದಿಯಾಗಿತ್ತು. ಕಳೆದ ವರ್ಷ ವಿಜಯ್ ಸಂಗೀತಾ ಡಿವೋರ್ಸ್ ಆಗುತ್ತೆ ಎಂದಾಗಲೂ ತ್ರಿಶಾ ಹೆಸರು ಕೇಳಿ ಬಂದಿತ್ತು. ತ್ರಿಶಾ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ GOAT ನಟನೊಂದಿಗೆ ಮಿರರ್ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದು ಈಗ ಮತ್ತೆ ಈ ಸುದ್ದಿ ವೈರಲ್ ಆಗಿದೆ. ಇತ್ತೀಚೆಗೆ ಕೀರ್ತಿ ಸುರೇಶ್ (Keerthy Suresh) ಮತ್ತು ಆಂಟೋನಿ ತಟ್ಟಿಲ್ ಅವರ ಮದುವೆಯಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ (Wedding) ಇಬ್ಬರೂ ಒಟ್ಟಿಗೆ ಭಾಗಿಯಾಗಿದ್ದಾರೆ . ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ವಿಜಯ್ ಹಾಗು ತ್ರಿಶಾ ಒಟ್ಟಿಗೆ ಗೋವಾಕ್ಕೆ ಪ್ರಯಾಣಿಸಿದ್ದು ಈಗ ಭಾರೀ ಸುದ್ದಿಯಾಗಿದೆ. ಇದೀಗ ಈ ಸುದ್ದಿ ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿದ್ದಾರೆ ಅಣ್ಣಾಮಲೈ. ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಮಾತನಾಡಿ ವಿಜಯ್ ಮತ್ತು ತ್ರಿಶಾ ಅವರಿಗೆ ಅರಿವಿಗೆ ಬಾರದಂತೆ ರಾಜ್ಯ ಗುಪ್ತಚರ ವಿಭಾಗ ಫೋಟೊಗಳನ್ನು ತೆಗೆದು ಹರಿಬಿಟ್ಟಿದೆ ಎಂದು ಹೇಳಿದ್ದಾರೆ. ವಿಜಯ್ ಮದುವೆಗೆ ಯಾರ ಜೊತೆ ಬೇಕಾದರೂ ಹೋಗಬಹುದು. ಅದು ಅವರ ವೈಯಕ್ತಿಕ ಆಯ್ಕೆ.. ಆದರೆ ಆ ಫೋಟೋ ತೆಗೆದು ವೈರಲ್‌ ಮಾಡಿದವರು ಯಾರು?” ವಿಜಯ್ ಈಗ ರಾಜಕೀಯಕ್ಕೆ ಬಂದ ಹಿನ್ನೆಲೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯ ಮಾಹಿತಿ ತಂತ್ರಜ್ಞಾನ ಘಟಕಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Upendra: `ಎ’ ಸಿನಿಮಾದಲ್ಲಿ ನಟಿಸಿದ್ದ ಬಾಲಕ ಈಗ ಹೇಗಿದ್ದಾರೆ ಗೊತ್ತಾ? ನೋಡಿ ಶಾಕ್‌ ಆದ ಉಪ್ಪಿ! ಇದು ನಿಮ್ಮ (ಡಿಎಂಕೆ) ರಾಜಕೀಯ ಸಂಸ್ಕೃತಿಯ ಮಟ್ಟವೇ? ಡಿಎಂಕೆ ಜನರನ್ನು ಗೌರವಿಸುವುದು ಹೀಗೆಯೇ? ಜನರು ಎಲ್ಲಿ ಬೇಕಾದರೂ ಹೋಗುತ್ತಾರೆ. ಈ ವೇಳೆ ಅವರು ಮದುವೆಗೆ ತೆರಳಿದ್ದರು. ಆದರೆ ನೀವು ಫೋಟೋಗಳನ್ನು ಸಹ ಸೆರೆಹಿಡಿಯುತ್ತೀರಿ ಮತ್ತು ಸೋರಿಕೆ ಮಾಡುತ್ತೀರಿ ಎಂದು ಅಣ್ಣಾಮಲೈ ಡಿಎಂಕೆ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ನಟರೊಂದಿಗೆ ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನದ ಪ್ರಯಾಣಿಕರ ಮ್ಯಾನಿಫೆಸ್ಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. Thalapathy Vijay Anna In My Favourite Actress Keerthy Suresh Marriage Function 💍🎉❤️. @KeerthyOfficial Shared A Fan Girl Moment Pic In Her ID. #Thalapathy69 #ThalapathyVijay #KeerthySuresh #KeerthySureshMarriage #Keerthysureshwedding #Trisha #Thalapathy #Vijay #BabyJohn pic.twitter.com/M8v0mRj94p ವೈರಲ್ ಫೋಟೋಗಳಲ್ಲಿ ಇಬ್ಬರು ಸ್ಟಾರ್ಗಳು ವಿಮಾನ ಹತ್ತುವ ಮೊದಲು ಭದ್ರತಾ ತಪಾಸಣೆ ಮಾಡಿಸಿಕೊಳ್ಳುವುದು ಕಂಡು ಬಂದಿತ್ತು. ಪಟ್ಟಿಗಳಿದ್ದ ನೀಲಿ ಶರ್ಟ್‌ ಧರಿಸಿದ್ದ ವಿಜಯ್ ಜೊತೆ ತ್ರಿಶಾ ಸರಳವಾದ ಬಿಳಿ ಟಿ-ಶರ್ಟ್ ಅನ್ನು ಧರಿಸಿದ್ದರು. ಪ್ಯಾಸೆಂಜರ್ಸ್ ಲಿಸ್ಟ್ ನೋಡಿದರೆ ಅವರು ಗೋವಾದಲ್ಲಿ ಕೀರ್ತಿ ಸುರೇಶ್ ಅವರ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಒಟ್ಟಿಗೆ ಹೋಗಿದ್ದು ಕನ್ಫರ್ಮ್ ಆಗಿತ್ತು. ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿಗೆ ಈ ಖ್ಯಾತ ಡೈರೆಕ್ಟರ್ ಜೊತೆ ಕೆಲಸ ಮಾಡೋ ಆಸೆ! ಕಾರಣ ಏನ್ ಗೊತ್ತಾ? ನಟ 23 ವರ್ಷಗಳ ದಾಂಪತ್ಯದ ನಂತರ ಪತ್ನಿ ಸಂಗೀತಾಗೆ ವಿಚ್ಛೇದನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ತೆರೆಯ ಮೇಲೆ ಎಷ್ಟು ಚೆನ್ನಾಗಿ ನಟಿಸಿ ಜನರ ಮನ ಗೆಲ್ಲುತ್ತಾರೋ ಅದೇ ರೀತಿ ಸಂಗೀತಾ ಅವರನ್ನೂ ವಿಜಯ್ ಮೆಚ್ಚಿಸಿದ್ದಾರೆ. ಮೊದಲ ಭೇಟಿಯಲ್ಲಿಯೇ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.