NEWS

T20 World Cup: ಇಂಗ್ಲೆಂಡ್​ಗೆ ಆಘಾತಕಾರಿ ಸೋಲುಣಿಸಿದ ವೆಸ್ಟ್ ಇಂಡೀಸ್! ಸತತ 3 ಪಂದ್ಯ ಗೆದ್ರೂ ಟೂರ್ನಿಯಿಂದ ಹೊರ ಬಿದ್ದ ಆಂಗ್ಲಪಡೆ!

ಸೆಮಿಫೈನಲ್ ಪ್ರವೇಶಿಸಿದ ವೆಸ್ಟ್ ಇಂಡೀಸ್ ದುಬೈ: ಕೆಲವೊಮ್ಮೆ ವಿಶ್ವಕಪ್​ನಂತಹ (T20 World Cup) ಟೂರ್ನಿಗಳಲ್ಲಿ ತಂಡಗಳು ಮಾಡುವ ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸತತ ಮೂರು ಪಂದ್ಯಗಳಲ್ಲಿ ಗೆದ್ದರೂ ಇಂಗ್ಲೆಂಡ್ (England) ತಂಡ ವಿಶ್ವಕಪ್​ನಿಂದ ಹೊರಬಿದ್ದಿದೆ. ವೆಸ್ಟ್​ ಇಂಡೀಸ್ (West Indies)​ ವಿರುದ್ಧ ಸೋಲಿನೊಂದಿಗೆ ಟೂರ್ನಿಯಲ್ಲಿ 3ನೇ ಸ್ಥಾನಕ್ಕೆ ಕುಸಿದು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್ ಹಾಗೂ ಇಂಗ್ಲೆಂಡ್ ಲೀಗ್​ನಲ್ಲಿ ತಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ, ನೆಟ್​ ರನ್​ರೇಟ್​ನಲ್ಲಿ ಇಂಗ್ಲೆಂಡ್ ಉಳಿದ 2 ತಂಡಗಳಿಗಿಂತ ಹಿಂದೆ ಬಿದ್ದಿದ್ದು, ಟೂರ್ನಿಯಿಂದ ಹೊರ ಬೀಳುವುದಕ್ಕೆ ಕಾರಣವಾಗಿದೆ. ಬ್ಯಾಟಿಂಗ್ ವೈಫಲ್ಯ ಮಂಗಳವಾರ ನಡೆದ ಸೆಮಿಫೈನಲ್​ ನಿರ್ಧರಿಸುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 141ರನ್​ಗಳಿಸಿತ್ತು. ನ್ಯಾಟ್​ ಸೀವರ್​ ಬ್ರಂಟ್​ 50 ಎಸೆತಗಳಲ್ಲಿ 5 ಬೌಂಡರಿ ಸಹಿತ 57 ರನ್​ಗಳಿಸಿದರು. ನಾಯಕಿ ಹೀದರ್ ನೈಟ್ 13 ಎಸೆತಗಳಲ್ಲಿ 21ರನ್​ಗಳಿಸಿದರು. ಉಳಿದ ಯಾವ ಬ್ಯಾಟರ್​ಗಳು 20ರ ಗಡಿ ದಾಟಲಿಲ್ಲ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ವೆಸ್ಟ್ ಇಂಡೀಸ್ ಪರ ಹೇಲಿ ಮ್ಯಾಥ್ಯೂಸ್​ 35ಕ್ಕೆ 2, ಅಫಿ ಫ್ಲೆಚರ್ 21ಕ್ಕೆ 3 ವಿಕೆಟ್ ಪಡೆದರೆ, ದಿಯಾಂಡ್ರೆ ಡಟ್ಟಿನ್ 16ಕ್ಕೆ 1 ವಿಕೆಟ್ ಪಡೆದು ಮಿಂಚಿದರು. 142ರ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 18 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 142 ರನ್​ಗಳಿಸಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇದನ್ನೂ ಓದಿ: ಆ ಒಂದು ನಿರ್ಧಾರದಿಂದ ಕೊಹ್ಲಿ, ಸಚಿನ್, ಧೋನಿಯನ್ನೇ ಹಿಂದಿಕ್ಕಿ 1450 ಕೋಟಿ ಒಡೆಯನಾದ ಮಾಜಿ ಕ್ರಿಕೆಟರ್ ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕಿ ಹೇಲಿ ಮ್ಯಾಥ್ಯೂಸ್ ಹಾಗೂ ಕಿಯಾನ ಜೋಸೆಫ್​ ಮೊದಲ ವಿಕೆಟ್​ಗೆ 102 ರನ್​ಗಳ ಜೊತೆಯಾಟ ನೀಡಿದರು. ಜೋಸೆಫ್ 38 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 52 ರನ್​ಗಳಿಸಿದರೆ, ಮ್ಯಾಥ್ಯೂಸ್ 38 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ 50 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ದಿಯಾಂಡ್ರ ಡಟ್ಟಿನ್ 19 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 27ರನ್​ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇಂಗ್ಲೆಂಡ್ ಪರ ಸಾರಾ ಗ್ಲೆನ್ 20ಕ್ಕೆ1, ಸೋಫೀ ಎಕ್ಲೆನ್​ಸ್ಟೋನ್ 21ಕ್ಕೆ1, ಸೀವರ್ ಬ್ರಂಟ್ 33ಕ್ಕೆ 1 ವಿಕೆಟ್​ ಪಡೆದರು. ಇಂಗ್ಲೆಂಡ್ ವಿಶ್ವಕಪ್​ನಿಂದ ಹೊರ ಬೀಳಲು ಕಾರಣ ಇಂಗ್ಲೆಂಡ್ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಬಾಂಗ್ಲಾದೇಶದ ವಿರುದ್ಧ 21ರನ್, ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್​ ಹಾಗೂ ಸ್ಕಾಟ್ಲೆಂಡ್​ ವಿರುದ್ಧ10 ವಿಕೆಟ್ ಜಯ ಸಾಧಿಸಿತ್ತು. ಆರೆ ದಕ್ಷಿಣ ಆಫ್ರಿಕಾ ವಿರುದ್ಧ 125ರನ್​ಗಳ ಗುರಿಯನ್ನ 20ನೇ ಓವರ್​ನಲ್ಲಿ ತಲುಪಿದ್ದು, ಹಾಗೂ ಬಾಂಗ್ಲಾದೇಶದ ವಿರುದ್ಧ ಕೇವಲ 118ರನ್​ಗಳಿಸಿದ್ದು, ತಂಡಕ್ಕೆ ರನ್​ ರೇಟ್ ಲೆಕ್ಕಾಚಾರದಲ್ಲಿ ದೊಡ್ಡ ಹೊಡೆತ ನೀಡಿತು. ಇದೇ ಕಾರಣದಿಂದ 3 ಪಂದ್ಯ ಗೆದ್ದರೂ ಟೂರ್ನಿಯಿಂದ ಲೀಗ್ ಹಂತದಲ್ಲೇ ಹೊರ ಬೀಳಲು ಕಾರಣವಾಯಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.