NEWS

IND vs WI: 6,6,6,6,6 ವೇಗದ ಅರ್ಧಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ ಬ್ಯಾಟರ್! RCB ಆಟಗಾರ್ಥಿ ಆರ್ಭಟಕ್ಕೆ ಬೆಚ್ಚಿ ಬಿದ್ದ ವಿಂಡೀಸ್

ರಿಚಾ ಘೋಷ್ ಮುಂಬೈ: ಭಾರತ ಹಾಗೂ ವೆಸ್ಟ್ ಇಂಡೀಸ್ ಮಹಿಳಾ (India vs West Indies Women’s Team) ತಂಡಗಳ ನಡುವಿನ 3 ಹಾಗೂ ಕೊನೆಯ ಟಿ-20 ಪಂದ್ಯ ಮುಂಬೈನಲ್ಲಿ (Mumbai) ನಡೆಯುತ್ತಿದೆ. ಕಳೆದ 2 ಪಂದ್ಯಗಳ ಪೈಕಿ ತಲಾ ಒಂದೊಂದು ಪಂದ್ಯ ಗೆದ್ದಿರುವ ಉಭಯ ತಂಡಗಳು ಇಂದಿನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಸ್ಮೃತಿ ಮಂದಾನ ನಾಯಕತ್ವದ ಟೀಂ ಇಂಡಿಯಾ ಮಹಿಳಾ ತಂಡದ ಪರವಾಗಿ ಆರಂಭದಿಂದಲೂ ನಾಯಕಿ ಸ್ಮೃತಿ ಮಂದಾನ ಅಬ್ಬರದ ಬ್ಯಾಟಿಂಗ್ ನಡೆಸಿದರು ಅವರು 47 ಎಸೆತಗಳಲ್ಲಿ 77 ರನ್ ಗಳಿಸಿ ವಿಂಡೀಸ್ ಬೌಲರ್‌ಗಳ ಬೆಂಡೆತ್ತಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಚಂಡಾಡಿದರು. ವಿಶ್ವ ದಾಖಲೆ ನಿರ್ಮಿಸಿದ ರಿಚಾ ಘೋಷ್ ಹೌದು, ಮೂರನೇ ಟಿ-20 ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರು ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು. ಅವರು ತಮ್ಮ ಅಮೋಘ ಇನ್ನಿಂಗ್ಸ್ನಲ್ಲಿ ಕೇವಲ 18 ಎಸೆತಗಳಲ್ಲಿ 50 ರನ್ ಸಿಡಿಸಿ ದಾಖಲೆ ಬರೆದರು. ಭಾರತದ ಪರವಾಗಿ ಅತೀ ವೇಗದ ಅರ್ಧಶತಕ ಸಿಡಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಪತ್ರರಾದರು. ಇದನ್ನೂ ಓದಿ: Ravichandran Ashwin: ಅಶ್ವಿನ್ ಟೆಸ್ಟ್ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿಯಾಗಲೂ ಆತನೇ ಕಾರಣ? ವೇಗದ ಅರ್ಧಶತಕ ದಾಖಲಿಸಿದ ರಿಚಾ ಇನ್ನೂ ಇದಕ್ಕೂ ಮೊದಲು ಆಸ್ಟ್ರೇಲಿಯಾದ ಫೋಬೆ ಲಿಚ್‌ಫೀಲ್ಡ್ ಮತ್ತು ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಕೂಡ 18 ಎಸೆತಗಳಲ್ಲೇ ಅರ್ಧ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದರು. ಸದ್ಯ ಈ ಇಬ್ಬರು ಆಟಗಾರ್ತಿಯರ ದಾಖಲೆ ಸರಿಗಟ್ಟುವ ಮೂಲಕ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಆಟಗಾರ್ತಿಯರ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿದರು. 21 ಎಸೆತದಲ್ಲಿ 54 ರನ್ ಅಂತಿಮವಾಗಿ ರಿಚಾ ಘೋಷ್ ಅವರು 21 ಎಸೆತಗಳಿಂದ 54 ರನ್ ಗಳಿಸಿ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ ಸಿಡಿಸಿ ಮಿಂಚಿದರು. ಇನ್ನೂ ಇವರ ಈ ಅಮೇಘ ಆಟದ ನೆರವಿನಿಂದ ಅಂತಿಮ ಟಿ-20 ಇನ್ನಿಂಗ್ಸ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 217 ರನ್ ಗಳಿಸಿತು. ಮಾತ್ರವಲ್ಲ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ತನ್ನ ಅತ್ಯಧಿಕ ಸ್ಕೋರ್ ಮಾಡಿದ ದಾಖಲೆ ಬರೆಯಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.