NEWS

IND vs NZ: ಟೆಸ್ಟ್​ ಸರಣಿಗೂ ಮುನ್ನವೇ ಕಿವೀಸ್​ಗೆ ಆಘಾತ! ವಿಲಿಯಮ್ಸನ್​ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಸರಣಿಯಿಂದ ಔಟ್!

ನ್ಯೂಜಿಲ್ಯಾಂಡ್ ತಂಡ ಭಾರತ (India vs New Zealand) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈಗಾಗಲೇ ಮಾಜಿ ನಾಯಕ, ಬ್ಯಾಟಿಂಗ್ ಆಧಾರಸ್ಥಂಭವಾಗಿದ್ದ ಕೇನ್ ವಿಲಿಯಮ್ಸನ್​ (Kane Williamson) ತಂಡದಿದಂ ಹೊರ ಬಿದ್ದಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ. ತಂಡದ ಬಲಗೈ ವೇಗದ ಬೌಲರ್ ಬೆನ್ ಸಿಯರ್ಸ್ (Ben Sears) ಮೊಣಕಾಲು ಗಾಯದಿಂದಾಗಿ ಮುಂಬರುವ ಭಾರತ ವಿರುದ್ಧದ ಮೂರು ಟೆಸ್ಟ್ ಸರಣಿಯಿಂದ ಆಟಗಾರ ಹೊರಗುಳಿದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅಕ್ಟೋಬರ್ 16 ರಂದು ಪ್ರಾರಂಭವಾಗಲಿದೆ. ಮೊಣಕಾಲು ನೋವು ನ್ಯೂಜಿಲೆಂಡ್​ನ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಸಿಯರ್ಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಅವರು ಭಾರತಕ್ಕೆ ತಡವಾಗಿ ಆಗಮಿಸಿದ್ದರು. ಈಗ ಅವರಿಗೆ ಮೊಣಕಾಲು ಗಾಯವಾಗಿದೆ ಎಂದು ಸ್ಕ್ಯಾನ್ ಗಳು ಬಹಿರಂಗಪಡಿಸಿವೆ. ವೈದ್ಯರ ಸಲಹೆಯ ನಂತರ, ಅವರನ್ನ ಸರಣಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಅವರ ಉತ್ತಮ ಚಿಕಿತ್ಸೆ ಮತ್ತು ಪುನಶ್ಚೇತನದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಿವೀಸ್ ಬೋರ್ಡ್ ತಿಳಿಸಿದೆ. 100ರನ್​ ಹೊಡೆಸಿಕೊಂಡಿದ್ದವನಿಗೆ ಟೆಸ್ಟ್ ಕ್ಯಾಪ್? ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದ ವೇಗದ ಬೌಲರ್ ಬೆನ್ ಸಿಯರ್ಸ್ ಅವರ ಬದಲಿ ಆಟಗಾರನನ್ನು ನ್ಯೂಜಿಲೆಂಡ್ ತಂಡ ಆಯ್ಕೆ ಮಾಡಿದೆ. ಭಾರತ ಪ್ರವಾಸದಲ್ಲಿ ಸರಣಿಯಲ್ಲಿ ಭಾಗವಹಿಸಲು ಜೇಕಬ್ ಡಫಿ ಅವರನ್ನು ಕರೆ ನೀಡಲಾಗಿದ್ದು, ಅವರು ಬುಧವಾರ ಭಾರತಕ್ಕೆ ತೆರಳಲಿದ್ದಾರೆ. ಡಫಿ ಕಳೆದ ವರ್ಷ ಇಂದೋರ್ನಲ್ಲಿ ಭಾರತದ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದಿದ್ದರು. ಆದರೆ 100 ರನ್ ಬಿಟ್ಟುಕೊಟ್ಟು ಹೆಚ್ಚು ಸುದ್ದಿಯಾಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯ 30ರ ಹರೆಯದ ಜೇಕಬ್ ಡಫಿ ಅಂತರಾಷ್ಟ್ರೀಯ ಮಟ್ಟದ ರೆಡ್ ಬಾಲ್ ಕ್ರಿಕೆಟ್ ಆಡದಿದ್ದರೂ 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಜೇಕಬ್ ಇಲ್ಲಿಯವರೆಗೆ 102 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 172 ಇನ್ನಿಂಗ್ಸ್‌ಗಳಲ್ಲಿ ಅವರು 32.64 ಸರಾಸರಿಯಲ್ಲಿ 299 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಕ್ಕಾಗಿ ಅವರು 143 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ 1351 ರನ್ ಗಳಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ನಾಳೆ ಅಂದರೆ ಬುಧವಾರ, ಅಕ್ಟೋಬರ್ 16 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್/ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (WK), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ ಭಾರತ ತಂಡ: ರೋಹಿತ್ ಶರ್ಮಾ (c), ಜಸ್ಪ್ರೀತ್ ಬುಮ್ರಾ (ವಿಸಿ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (WK), ಧ್ರುವ ಜುರೆಲ್ (WK), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.