NEWS

OTT Shows For Music: ಮ್ಯೂಸಿಕ್​ ಲವರ್ಸ್​ಗೆ OTTಯಲ್ಲಿ ಕಾದಿದೆ ಭರ್ಜರಿ ಶೋಗಳು; ಇನ್ನೇಕೆ ತಡ ಈ ಒಟಿಟಿ ಫ್ಲ್ಯಾಟ್‌‌‌ಫಾರ್ಮ್‌‌‌ನಲ್ಲಿ ನೋಡಿ!

ಶ್ರೇಯಾ ಚೌಧರಿ ಮತ್ತು ರಿತ್ವಿಕ್ ಭೌಮಿಕ್ ಅಭಿನಯದ ಮ್ಯೂಸಿಕ್‌ ಡ್ರಾಮಾ (Music Drama), ಬಂದಿಶ್ ಬ್ಯಾಂಡಿಟ್ಸ್ (Bandish Bandits) ಸೀಸನ್ 1, 2020 ರಲ್ಲಿ ಬಿಡುಗಡೆಯಾಯಿತು. ಸಂಗೀತ ಪ್ರಿಯರಿಗೆ ಸಖತ್‌ಇಷ್ಟವಾಯ್ತು. ಶಂಕರ್ ಎಹ್ಸಾನ್ ಲಾಯ್, ಜಾವೇದ್ ಅಲಿ, ಅರ್ಮಾನ್ ಮಲಿಕ್ ಮತ್ತು ಜೊನಿತಾ ಗಾಂಧಿಯವರ ಹಾಡುಗಳು ಇದ್ದವು. ಬಂದಿಶ್ ಬ್ಯಾಂಡಿಟ್ಸ್ ಅಭಿಮಾನಿಗಳನ್ನು ಮೂರು ವರ್ಷಗಳ ಕಾಲ ಕಾಯುವಂತೆ ಮಾಡಿದ ನಂತರ, ತಯಾರಕರು ಅಂತಿಮವಾಗಿ ಎರಡನೇ ಸೀಸನ್ (Bandish Bandits sEason 2) ಅನ್ನು ಘೋಷಿಸಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಇನ್‌ಸ್ಟಾ ಪೇಜ್‌ನಲ್ಲಿ ಹೊಸ ಸೀಸನ್‌ನ ಟ್ರೈಲರ್‌ ಹಂಚಿಕೊಂಡಿದೆ. ಬಂದಿಶ್ ಬ್ಯಾಂಡಿಟ್ಸ್ ಡಿಸೆಂಬರ್ 13ರಂದು ಅಮೆಜಾನ್‌ ಪ್ರೈಂನಲ್ಲಿ ಲಭ್ಯವಿರಲಿದೆ. ಇದನ್ನೂ ಓದಿ: Manchu Family: ತಂದೆ ವಿರುದ್ಧವೇ ದೂರು ದಾಖಲಿಸಿದ ಖ್ಯಾತ ನಟ! ಚರ್ಚೆ ವಿಷಯವಾಯ್ತು ಸೆಲೆಬ್ರಿಟಿ ಫ್ಯಾಮಿಲಿಯ ಒಳ ಜಗಳ ಬಂದಿಶ್ ಬ್ಯಾಂಡಿಟ್ ಸೀಸನ್ 2 ರ ಮೊದಲು OTT ನಲ್ಲಿ ಈ ಮ್ಯೂಸಿಕ್‌ ಡ್ರಾಮಾಗಳನ್ನ ಮಿಸ್‌ ಮಾಡದೇ ನೋಡಿ. ಖಲ್ಬಲಿ ರೆಕಾರ್ಡ್ಸ್ (Khalbali Records) (2024) IMDb ರೇಟಿಂಗ್: 6.8/10 ಈ ಆಕರ್ಷಕ ಸಿರೀಸ್‌ನಲ್ಲಿ ತಂದೆ-ಮಗನ ಸಂಗೀತ ಜುಗಲ್‌ಬಂಧಿ ಇದೆ. ಯಶಸ್ಸು ಮತ್ತು ಮ್ಯೂಸಿಕ್‌‌ ಸಮ್ಮಿಶ್ರಣ ಇದೆ. ರಾಮ್ ಕಪೂರ್, ಸಲೋನಿ ಬಾತ್ರಾ, ಮತ್ತು ಇಪಿಆರ್ ಸೇರಿದಂತೆ ಅನೇಜ ಮುಖ್ಯ ಕಲಾವಿದರು ಇದ್ದಾರೆ. ಕಾರ್ಯಕ್ರಮವು ಅಮಿತ್ ತ್ರಿವೇದಿ ಮತ್ತು ಆಜಾದಿ ರೆಕಾರ್ಡ್ಸ್‌ನಂತಹ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಇದು ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಚಮಕ್ (2023) IMDb ರೇಟಿಂಗ್: 6.9/10 ಚಮಕ್ ಗ್ಲಾಮರ್ ಸಂಗೀತ ಪ್ರಪಂಚದ ಬಗ್ಗೆ ಇದೆ. ಈ ಸರಣಿಯು ಸಂಗೀತಗಾರರ ಜೀವನವದ ಕುರಿತಾಗಿ ಇದೆ. ಪರಮವೀರ್ ಚೀಮಾ, ಇಶಾ ತಲ್ವಾರ್, ಮನೋಜ್ ಪಹ್ವಾ, ಮತ್ತು ಮೋಹಿತ್ ಮಲಿಕ್ ಸೇರಿದಂತೆ ಅನೇಕರು ಇದ್ದಾರೆ. ಚಮಕ್ ಸಂಗೀತದ ದೃಶ್ಯಕ್ಕೆ ಹೊಸ ದೃಷ್ಟಿಕೋನ ನೀಡಿದ್ದಾರೆ. ಸೋನಿ ಲಿವ್ ನಲ್ಲಿ ವಿಕ್ಷಿಸಬಹುದು. ಬ್ರೋಕನ್ ಬಟ್‌ ಬ್ಯೂಟಿಫುಲ್ (2018) IMDb ರೇಟಿಂಗ್: 8.6/10 ವಿಕ್ರಾಂತ್ ಮಾಸ್ಸೆ ಮತ್ತು ಹರ್ಲೀನ್ ಸೇಥಿ ನಟಿಸಿರುವ ಬ್ರೋಕನ್ ಬಟ್‌ ಬ್ಯೂಟಿಫುಲ್ ಸಿರೀಸ್‌, ಕಥೆ ಹೇಳುವಲ್ಲಿ ಮಾಸ್ಟರ್‌ಕ್ಲಾಸ್ ಆಗಿದೆ. ಹೃದಯ ವಿದ್ರಾವಕ ಪ್ರೇಮಗೀತೆ “ತೇರಿ ಹೋಗೈಯಾನ್” ನಿಂದ ಸಮಕಾಲೀನ ಪಾಪ್ ಪೀಸ್ “ಓ ಸಾಜ್ನಾ” ವರೆಗೆ, ಪ್ರತಿ ಟ್ರ್ಯಾಕ್ ಕೂಡಸಖತ್‌ ಅನುಭವ ನೀಡಲಿದೆ. ಅಮಲ್ ಮತ್ತು ಅರ್ಮಾನ್ ಮಲಿಕ್ ಅವರ “ಶಮೀನ್” ಮತ್ತು ಅನುಷಾ ಮಣಿಯವರ “ಬೌರಿಯಾ” ಕೂಡ ಸಖತ್‌ ಆಗಿವೆ. ALTBalajiಯಲ್ಲಿ ವೀಕ್ಷಿಸಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.