NEWS

IND vs NZ: ಭಾರತಕ್ಕೆ ತವರಿನಲ್ಲೇ ವೈಟ್​ವಾಶ್​ ಮಾಡಿದ ನ್ಯೂಜಿಲ್ಯಾಂಡ್​​ ಯಶಸ್ಸಿನ ಹಿಂದೆ ಶ್ರೀಲಂಕಾ ಲೆಜೆಂಡ್! ಕಿವೀಸ್​ ಬೌಲರ್​ನಿಂದಲೇ ಬಹಿರಂಗ

ಅಜಾಜ್ ಪಟೇಲ್ ನವದೆಹಲಿ: ನ್ಯೂಜಿಲ್ಯಾಂಡ್ (New Zealand) ತಂಡ ಭಾರತಕ್ಕೆ (India) ಬಂದು, ಟೆಸ್ಟ್ ಸರಣಿಯನ್ನ ವೈಟ್​ವಾಶ್ (Whitewash) ಮಾಡಿ ವಿಶ್ವದಾಖಲೆ (World Record) ನಿರ್ಮಿಸಿದೆ. ತವರಿನಿಲ್ಲಿ ಸತತ 18 ಟೆಸ್ಟ್ ಸರಣಿ ಜಯಿಸಿ ಅಜೇಯವಾಗಿ ಮೆರೆಯುತ್ತಿದ್ದ ಟೀಮ್ ಇಂಡಿಯಾಗೆ ಭಾರೀ ಮುಖಭಂಗ ಉಂಡುಮಾಡಿದೆ. ಕಳೆದ ಎರಡು ದಶಕಗಳಿಂದ ಭಾರತದ ಪ್ರಮುಖ ಅಸ್ತ್ರವಾಗಿದ್ದ ಸ್ಪಿನ್​ ಬೌಲಿಂಗ್​ ಅನ್ನ ತಿರುಗುಭಾಣವಾಗಿ ಮಾಡಿಕೊಂದು ಭಾರತವನ್ನ ಕಾಡಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿದೆ. ಆದರೆ ಈ ಗೆಲುವಿನ ಹಿಂದೆ ಯಾರಿದ್ದಾರೆ, ಭಾರತದ ಪತನಕ್ಕೆ ಕಾರಣವಾದ ಲೆಜೆಂಡರಿ ಬೌಲರ್​ ಯಾರು ಎಂಬುದು ಬಹಿರಂಗವಾಗಿದೆ. ಭಾರತ ತಂಡದ ವಿರುದ್ಧ ಅದ್ಭುತ ಯಶಸ್ಸು ಕಂಡ ಎಡಗೈ ಸ್ಪಿನ್ ಬೌಲರ್‌ಗಳ ಹಿಂದಿರುವ ಶಕ್ತಿ ಯಾರೆಂಬುದನ್ನ ಸ್ವತಃ ಕಿವೀಸ್ ಸ್ಪಿನ್​ ಬೌಲರ್ ಅಜಾಜ್ ಪಟೆಲ್ ಬಹಿರಂಗಗೊಳಿಸಿದ್ದಾರೆ. ಕಳೆದ 6 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದ ಅಜಾಜ್, ಕೊನೆಯ ಟೆಸ್ಟ್​ನಲ್ಲಿ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದು ಐತಿಹಾಸಿ ಸರಣಿ ಜಯ ಸಾಧಿಸಲು ನೆರವಾಗಿದ್ದರು. ವಾಂಖೆಡೆಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ವಿದೇಶಿ ಬೌಲರ್ ಎಂಬ ದಾಖಲೆ ಬರೆದಿರುವ ಐಜಾಜ್ ಪಟೇಲ್, ಭಾರತ ಪ್ರವಾಸಕ್ಕೂ ಮುನ್ನ ತಾವೂ ಯಾರೊಂದಿಗೆ ತಯಾರಿ ನಡೆಸಿದ್ದೆವು ಎಂಬುದನ್ನ ನ್ಯೂಸ್ 18 ಗೆ ತಿಳಿಸಿದ್ದಾರೆ. ಎಜಾಜ್ ಮತ್ತು ಸ್ಯಾಂಟ್ನರ್​ ವಿಶೇಷವಾಗಿ ವಿರಾಟ್‌ಗಾಗಿ ಹೇಗೆ ಪ್ಲಾನ್ ಮಾಡಿಕೊಂಡಿದ್ದೇಗೆ ಎಂಬುದನ್ನ ಬಹಿರಂಗಗೊಳಿಸಿದ್ದಾರೆ. ಇದನ್ನೂ ಓದಿ: ಆಸೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ರೋಹಿತ್​ ಡೌಟ್! ಈತನಿಗೆ ಕ್ಯಾಪ್ಟನ್ಸಿ, ಹೀಗಿರಲಿದೆ ಪ್ಲೇಯಿಂಗ್11 ಲಂಕಾದ ಲೆಜೆಂಡ್​ ಸ್ಪಿನ್ನರ್​ನಿಂದ ಭಾರತಕ್ಕೆ ಸೋಲು ನೆಟ್‌ವರ್ಕ್‌18ನೊಂದಿಗೆ ಮಾತನಾಡಿದ ಎಜಾಜ್ ಪಟೇಲ್, ಶ್ರೀಲಂಕಾದ ಮಾಜಿ ಸ್ಪಿನ್ನರ್ ರಂಗನಾ ಹೆರಾತ್ ಅವರ ಸಲಹೆಯಿಂದ ನನ್ನ ಬೌಲಿಂಗ್ ಸುಧಾರಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 400 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ರಂಗನಾ, ಎಜಾಜ್ ಮತ್ತು ಸ್ಯಾಂಟ್ನರ್‌ಗೆ ಭಾರತದ ಪ್ರವಾಸಕ್ಕೂ ಮುನ್ನ ಪ್ರಮುಖ ತಂತ್ರಗಾರಿಕೆಗಳನ್ನ ನೀಡಿದ್ದರು. ಅದರಲ್ಲಿ ಪ್ರಮುಖವಾದದ್ದು ಹೆಚ್ಚು ಟರ್ನಿಂಗ್ ಆಗುವ ಪಿಚ್‌ನಲ್ಲಿ ಚೆಂಡನ್ನು ನೇರವಾಗಿ ಬೌಲ್ ಮಾಡುವ ಕಲೆ ಹಾಗೂ ಚೆಂಡಿನ ಹೊಳೆಯುವ ಭಾಗವನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಹೆರಾತ್ ಕಿವೀಸ್ ಸ್ಪಿನ್ನರ್​ಗಳಿಗೆ ಸಾಕಷ್ಟು ಸಲಹೆಗಳನ್ನ ನೀಡಿದ್ದರು. ಇದರಿಂದಾಗಿ ಎಜಾಜ್ ವಿರಾಟ್, ಸರ್ಫರಾಜ್, ಗಿಲ್ ಅವರಂತಹ ಬಲಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಎಜಾಜ್ ಅವರು ಸರಿಯಾದ ಸ್ಥಳದಲ್ಲಿ ನಿರಂತರವಾಗಿ ಚೆಂಡನ್ನು ಹಾಕಲು ಮತ್ತು ಗಂಟೆಗೆ 90 ಮೀ ಕಿವೇಗದಲ್ಲಿ ಬೌಲ್ ಮಾಡಲು ಸಾಕಷ್ಟು ಅಭ್ಯಾಸ ಮಾಡಿದ್ದರಂತೆ. ಈ ಸರಣಿಯಲ್ಲಿ 3 ವಿಭಿನ್ನ ಪಿಚ್‌ಗಳು ಮತ್ತು 3 ವಿಭಿನ್ನ ಪಂದ್ಯಗಲಾಗಿರಲಿವೆ ಎಂಬ ಅರಿವು ನಮಗಿತ್ತು. ಏಷ್ಯಾದ ಟೆಸ್ಟ್ ಪಂದ್ಯಗಳು ಸದಾ ವಿಭಿನ್ನವಾಗಿರುತ್ತದೆ. ಹಾಗಾಗಿ ನಾವು ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದೆವು, ಅವು ಚೆನ್ನಾಗಿ ವರ್ಕ್ ಆದವು ಎಂದು ತಿಳಿಸಿದ್ದಾರೆ. ಏಷ್ಯಾದಲ್ಲಿ ಪಂಟರ್! ಎಜಾಜ್ ಪಟೇಲ್ ಟೆಸ್ಟ್​ ವೃತ್ತಿ ಜೀವನದಲ್ಲಿ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 29.25 ರ ಸರಾಸರಿಯಲ್ಲಿ ಮತ್ತು 3.25 ರ ಎಕಾನಮಿಯಲ್ಲಿ 85 ವಿಕೆಟ್​ಗಳನ್ನ ಪಡೆದಿದ್ದಾರೆ. ಇದರಲ್ಲಿ 5 ಟೆಸ್ಟ್ ಪಂದ್ಯಗಳನ್ನ ಮಾತ್ರ ಏಷ್ಯಾದಿಂದ ಹೊರಗೆ ಆಡಿದ್ದು, ಇದರಲ್ಲಿ ಕೇವಲ 4 ವಿಕೆಟ್ ಪಡೆದಿದ್ದಾರೆ. ಉಳಿದ 81 ವಿಕೆಟ್ ಏಷ್ಯಾದ ಸ್ಪಿನ್​ ಪಿಚ್​ಗಳಲ್ಲಿ ಬಂದಿವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.