NEWS

Udhayanidhi Stalin: ಉತ್ತರದಲ್ಲಿ ಸ್ಥಳೀಯ ಭಾಷೆಗಳ ಚಿತ್ರಗಳಿಗಿಂತ ಹಿಂದಿ ಭಾಷೆಯೇ ಹೆಚ್ಚು ಪ್ರಾಬಲ್ಯ; ಉದಯ ನಿಧಿ ಸ್ಟಾಲಿನ್

ಉದಯನಿಧಿ ಸ್ಟಾಲಿನ್‌ ಕೇರಳದ ಹೊರ್ಟಸ್ ಸಾಹಿತ್ಯೋತ್ಸವದಲ್ಲಿ ದಕ್ಷಿಣ ಭಾರತದ ಚಲನಚಿತ್ರ (Film) ಉದ್ಯಮದ ಬಗ್ಗೆ ಮಾತನಾಡಿದ ತಮಿಳುನಾಡು (Tamilnadu) ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ (Udhayanidhi Stalin), ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ದಕ್ಷಿಣದ ಯಾವುದೇ ಚಿತ್ರಗಳು ಪ್ರಸಿದ್ಧಿಯನ್ನು ಪಡೆದುಕೊಂಡಿಲ್ಲ ಏಕೆಂದರೆ ಹಿಂದಿ ಭಾಷೆಗೆ ಅಲ್ಲಿ ಹೆಚ್ಚು ಪ್ರಾಧಾನ್ಯತೆ ಇದೆ ಎಂದು ತಿಳಿಸಿದ್ದಾರೆ. ಹಿಂದಿ ಚಲನಚಿತ್ರಳಿಂದಲೇ ಎಲ್ಲ ಭಾಷೆಗಳ ಮೇಲೆ ಹಿಡಿತ ಭಾಷೆಯನ್ನು ರಕ್ಷಿಸುವಲ್ಲಿ ಚಲನಚಿತ್ರಗಳ ಪಾತ್ರದ ಬಗ್ಗೆ ತಿಳಿಸಿದ ಸ್ಟಾಲಿನ್, ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರರಂಗವು ಉತ್ತರದಲ್ಲಿ ಹೇಗೆ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿತು ಮತ್ತು ರೋಮಾಂಚಕ ಚಲನಚಿತ್ರ ಉದ್ಯಮಗಳಾಗಿ ಉಳಿದುಕೊಂಡಿವೆ ಎಂದು ತಿಳಿಸಿದ್ದು, ಕೇವಲ ಹಿಂದಿ ಚಲನಚಿತ್ರಗಳು ಮಾತ್ರ ಬಾಲಿವುಡ್‌ನಲ್ಲಿ ವ್ಯಾಪಕ ಗಮನ ಸೆಳೆಯುತ್ತಿವೆ ಎಂದು ತಿಳಿಸಿದ್ದಾರೆ. ಇತರ ಭಾಷೆಗಳ ಚಲನಚಿತ್ರಗಳು ಅಲ್ಲಿ ಹಿಂದಿಯಷ್ಟು ಪ್ರಾಬಲ್ಯ ಸಾಧಿಸಿಲ್ಲ. ಹಿಂದಿಯೇ ಎಲ್ಲಾ ಭಾಷೆಗಳ ಮೇಲೆ ಹಿಡಿತ ಸಾಧಿಸಿದೆ ಎಂದು ವಾದಿಸಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಹಿಂದಿಯದ್ದೇ ಪ್ರಾಬಲ್ಯ ದ್ರಾವಿಡ ಚಳವಳಿಯ ಮೂಲ ಮತ್ತು ಭಾಷಾ ಮತ್ತು ಸಾಂಸ್ಕೃತಿಕ ಹೋರಾಟಗಳನ್ನು ವ್ಯಾಪಕವಾಗಿ ವಿವರಿಸಿದ ಅವರು, ದ್ರಾವಿಡ ಚಳವಳಿಯು ಹಿಂದಿ ಪ್ರಾಬಲ್ಯವನ್ನು ಹೇಗೆ ವಿರೋಧಿಸಿತು ಮತ್ತು ಉತ್ತರದ ರಾಜ್ಯಗಳಲ್ಲಿ ಹಿಂದಿ ಹೇಗೆ ಸ್ಥಳೀಯ ಭಾಷೆಗಳ ಮೇಲೆ ಪ್ರಾಬಲ್ಯ ಸಾಧಿಸಿದೆ ಎಂಬುದರ ಕುರಿತು ಮಾತನಾಡಿದರು. ಇದನ್ನೂ ಓದಿ: Lakshmi Hebbalkar: ‘ಬೆಂಗಳೂರು, ಉಡುಪಿಯಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಕಮೀಷನ್ ಅಂಗಡಿ!’ ಸಚಿವೆ ರಾಜೀನಾಮೆಗೆ ಶೋಭಾ ಕರಂದ್ಲಾಜೆ ಆಗ್ರಹ ಮಲಯಾಳಂ ಚಿತ್ರಗಳೆಂದರೆ ನನಗೆ ಇಷ್ಟ (ದಿವಂಗತ ಡಿಎಂಕೆ ನಾಯಕ) ಎಂ ಕರುಣಾನಿಧಿ ಅವರ ಪ್ರಸಿದ್ಧ ಚಲನಚಿತ್ರ ಪರಾಶಕ್ತಿ ತಮಿಳು ಸಿನಿಮಾ ಪ್ರಪಂಚದ ಪರದೆಯ ಭಾಷೆಯನ್ನು ಮರುರೂಪಿಸಿತು ಎಂದು ಇದೇ ಸಂದರ್ಭದಲ್ಲಿ ಉದಯನಿಧಿ ತಿಳಿಸಿದ್ದಾರೆ. ಅಂತೆಯೇ, ನಾವು ಕೇರಳದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮವನ್ನು ಹೊಂದಿದ್ದೇವೆ. ನಿಜವಾಗಿ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ತಯಾರಾದ ಮಲಯಾಳಂ ಸಿನಿಮಾಗಳು ನನಗೆ ತುಂಬಾ ಇಷ್ಟ. ಅದೇ ರೀತಿ ತೆಲುಗು ಮತ್ತು ಕನ್ನಡ ಚಿತ್ರೋದ್ಯಮಗಳು ಕೂಡ ಉತ್ತಮ ಪ್ರದರ್ಶನ ನೀಡುತ್ತಿವೆ ಎಂದರು. ಉತ್ತರದಲ್ಲಿ ಆಕರ್ಷಕ ಚಲನಚಿತ್ರ ಉದ್ಯಮವಿಲ್ಲ ದಕ್ಷಿಣ ಭಾರತದಲ್ಲಿರುವಂತೆ ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ಬೇರೆ ಯಾವುದೇ ಭಾಷೆಯಲ್ಲಿ ಇಂತಹದ್ದೇ ಆಕರ್ಷಕ ಚಲನಚಿತ್ರ ಉದ್ಯಮವಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇಲ್ಲ ಎಂದು ತಿಳಿಸಿದ ಉದಯನಿಧಿ, ಉತ್ತರ ಭಾರತದ ರಾಜ್ಯಗಳಲ್ಲಿ ಮಾತನಾಡುವ ಬಹುತೇಕ ಎಲ್ಲಾ ಭಾಷೆಗಳು ಹಿಂದಿಗೆ ದಾರಿ ಮಾಡಿಕೊಟ್ಟಿವೆ. ಇದರ ಪರಿಣಾಮವಾಗಿ, ಅವರ ಬಳಿ ಕೇವಲ ಹಿಂದಿ ಚಿತ್ರಗಳಿವೆ - ಬಾಲಿವುಡ್ - ಮತ್ತು ಮುಂಬೈ ಈಗ ಹಿಂದಿ ಚಲನಚಿತ್ರಗಳನ್ನು ಮಾತ್ರ ವ್ಯಾಪಕವಾಗಿ ನಿರ್ಮಿಸುತ್ತಿದೆ. ಮರಾಠಿ ಚಿತ್ರಗಳಲ್ಲ, ಭೋಜ್‌ಪುರಿ ಅಲ್ಲ; ಬಾಲಿವುಡ್‌ಗೆ ಹೋಲಿಸಿದರೆ ಬಿಹಾರಿ, ಹರ್ಯಾನ್ವಿ ಮತ್ತು ಗುಜರಾತಿ ಚಲನಚಿತ್ರೋದ್ಯಮಗಳು ಕಡಿಮೆ ಗಮನವನ್ನು ಸೆಳೆಯುತ್ತಿವೆ ಎಂದು ಉದಯನಿಧಿ ತಿಳಿಸಿದ್ದಾರೆ. ಹಿಂದಿ ನಮ್ಮ ಸಂಸ್ಕೃತಿ ಹಾಗೂ ಗುರುತನ್ನು ನಾಶಪಡಿಸುತ್ತದೆ ನಾವು ನಮ್ಮ ಭಾಷೆಯನ್ನು ರಕ್ಷಿಸಲು ವಿಫಲವಾದರೆ, ಹಿಂದಿ ನಮ್ಮ ಸಂಸ್ಕೃತಿಯನ್ನು ಆಕ್ರಮಿಸಿಕೊಳ್ಳುತ್ತದೆ ಮತ್ತು ನಮ್ಮ ಗುರುತನ್ನು ನಾಶಪಡಿಸುತ್ತದೆ. ಅದಕ್ಕಾಗಿಯೇ ನಾವು ಹಿಂದಿ ವಿರೋಧಿ ಚಳವಳಿಯನ್ನು ಮುನ್ನಡೆಸಿದ್ದೇವೆ, ಆದಾಗ್ಯೂ ನಮಗೆ ಹಿಂದಿ ಭಾಷೆಯ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಸಹ ಡಿಎಂಕೆ ನಾಯಕ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.