NEWS

Channapatna: ನಿಖಿಲ್ ಗೆಲುವಿನ ಸೂಚನೆ ಕೊಟ್ಟಳಾ ಕೋಟೆ ಮಾರಮ್ಮ? ದೇವಿ ಬಲಗಡೆಯಿಂದ ಬಿತ್ತು ಹೂವು!

ಕೋಟೆ ಮಾರಮ್ಮನಿಗೆ ಪೂಜೆ ಸಲ್ಲಿಸಿದ ಹೆಚ್‌ಡಿಕೆ ಚನ್ನಪಟ್ಟಣ: ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಗೆಲ್ಲುತ್ತಾರೋ? ಸಿಪಿ ಯೋಗೇಶ್ವರ್ (CP Yogeshwar) ಗೆಲ್ಲುತ್ತಾರೋ? ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By Election) ಗೆದ್ದು, ಶಾಸಕರಾಗೋದು ಯಾರು? ಈ ಪ್ರಶ್ನೆಗೆ ಉತ್ತರ ಕೊಡುವುದು ಆ ಕ್ಷೇತ್ರದ ಮತದಾರರು. ಆದರೆ ಇದೀಗ ಜೆಡಿಎಸ್ ಬಿಜೆಪಿ (JDS BJP) ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಸೂಚನೆ ಸಿಕ್ಕಿದೆಯಂತೆ. ಹೌದು, ಚನ್ನಪಟ್ಟಣ ನಗರದ ಕೋಟೆ ಮಾರಮ್ಮ ದೇವಿ (Kote Maramma Devi) ದೇಗುಲಕ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಭೇಟಿ ನೀಡಿದ್ದ ವೇಳೆ, ಅವರಿಗೆ ಪುತ್ರನ ಗೆಲುವಿನ ಬಗ್ಗೆ ಸೂಚನೆ ಸಿಕ್ಕಿದ್ಯಂತೆ. ದೇವಿ ಬಲಗಡೆಯಿಂದ ಹೂವು ಕರುಣಿಸಿ, ಆಶೀರ್ವಾದ ಮಾಡಿದ್ದಾಳಂತೆ! ಬಲಗಡೆಯಿಂದ ಹೂವು ಕೊಟ್ಟ ಕೋಟೆ ಮಾರಮ್ಮ ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಇಂದು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ಮಾಡಿದ್ರು. ಈ ವೇಳೆ ನಗರದಲ್ಲಿರುವ ಕೋಟೆ ಮಾರಮ್ಮ ದೇಗುಲಕ್ಕೆ ಹೆಚ್‌ಡಿಕೆ ಭೇಟಿ ನೀಡಿದ್ರು. ಈ ವೇಳೆ ಪುತ್ರನ ಪರವಾಗಿ ಹೆಚ್‌ಡಿಕೆ ಪ್ರಾರ್ಥನೆ ಸಲ್ಲಿಸಿ, ಪೂಜೆ ನೆರವೇರಿಸಿದ್ರು. ಆಗ ಮಾರಮ್ಮ ದೇವಿ ವಿಗ್ರಹದ ಬಲಭಾಗದಿಂದ ಹೂವು ಬಿದ್ದಿದೆ. ನಿಖಿಲ್ ಗೆಲುವಿನ ಸೂಚನೆ ನೀಡಿದಳಾ ಮಾರಮ್ಮ ದೇವಿ? ನಿಖಿಲ್ ಪರ ಹೆಚ್‌ಡಿಕೆ ಪೂಜೆ ಸಲ್ಲಿಸಿದ್ರು. ಮಂಗಳಾರತಿ ವೇಳೆ ಕೋಟೆ ಮಾರಮ್ಮನ ವಿಗ್ರಹದ ಬಲ ಭಾಗದಿಂದ ಹೂವು ಕೆಳಕ್ಕೆ ಬಿದ್ದಿದ್ಯಂತೆ. ಕೋಟೆ ಮಾರಮ್ಮನ ಅಪ್ಪಣೆ ಕಂಡು ಕುಮಾರಸ್ವಾಮಿ ಸಂತಸಪಟ್ಟಿದ್ದಾರೆ. ಹೆಚ್‌ಡಿಕೆ ಜೊತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹಾಗೂ ಬೆಂಬಲಿಗರು ಇದ್ದು, ಇದು ನಿಖಿಲ್ ಕುಮಾರಸ್ವಾಮಿ ಗೆಲುವಿನ ಸೂಚನೆ ಅಂತ ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: HD Deve Gowda-Siddaramaiah: ಮುಖ್ಯಮಂತ್ರಿಗಿರುವ ಗರ್ವದ ಸೊಕ್ಕನ್ನು ಮುರಿಯಬೇಕು! ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ ದೇವೇಗೌಡರು ‘ಅಪೂರ್ವ ಸಹೋದರ’ರ ಬಗ್ಗೆ ಲೇವಡಿ ಡಿಕೆ ಬ್ರದರ್ಸ್‌ಗೆ ಅಪೂರ್ವ ಸಹೋದರರು ಅಂತ ಲೇವಡಿ ಮಾಡಿದ ಗೌಡರು, ಇವಾಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ಒಬ್ಬ ಅಭ್ಯರ್ಥಿಯನ್ನು, ನಾನು ಅವರ ಹೆಸರು ಹೇಳೋದಿಲ್ಲ, ನಾನು‌ ಹೆಸರು ಹೇಳಿದ್ರೆ ನಾನು ವೆಂಟಿಲೇಟರ್‌ನಲ್ಲೂ ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದ್ರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ಕೈಯೂ ನಡಗಲ್ಲ ಅಂತ ದೇವೇಗೌಡರು ಹೇಳಿದ್ರು. ಎತ್ತಿನಹೊಳೆ ನೀರು ಬಂದ್ರೆ ದೀರ್ಘದಂಡ ನಮಸ್ಕಾರ ಮಾಡ್ತೀನಿ ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ದೀರ್ಘದಂಡವಾಗಿ ನಮಸ್ಕಾರ ಮಾಡ್ತೀನಿ ಅಂತ ದೇವೇಗೌಡರು ಸವಾಲು ಹಾಕಿದ್ರು. ಮಹಾನುಭಾವರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ತರುತ್ತಾರಂತೆ? ತುಂಬಾ ವಿಷಯ ಇದೆ ಮಾತಾಡಿದ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ನನ್ನ, ಮೋದಿ ಸಂಬಂಧ ಚೆನ್ನಾಗಿತ್ತು ದೇವೇಗೌಡರ ಕೈ ನಡುಗುತ್ತವೆ, ಅವ್ರು ಪ್ರಚಾರಕ್ಕೆ ಬರ್ತಾರೆ ಅಂತ ವ್ಯಂಗ್ಯವಾಡಿದ್ರು. ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್ ಮೆನ್, ಪ್ರಚಾರಕ್ಕೆ ಬರುತ್ತೇನೆ ಅಂತ ಗುಡುಗಿದ್ರು. ಮೋದಿ ಹಾಗೂ ನನ್ನ ಸಂಬಂಧ ಚೆನ್ನಾಗಿತ್ತು. ಕಾಂಗ್ರೆಸ್‌ನವರ ಹೇಯ ಕೆಲಸ, ಈ ಕಾಂಗ್ರೆಸ್ ತಮ್ಮ ಕುಟುಂಬ ಬಿಟ್ಟರೇ ಎರಡು ಮಾತಿಲ್ಲ ಅಂತ ಕುಟುಕಿದ್ರು. ಯೋಗೇಶ್ವರ್‌ ವಿರುದ್ಧ ಗೌಡರ ಗುಡುಗು ದೇವೇಗೌಡ್ರೇ ನೀವು ಯಾಕೇ ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಕೇಳಬಹುದು. ಯಾವ ಕನ್ವರ್ಟೆಡ್ ಕಾಂಗ್ರೆಸ್ ಇದ್ದಾರೋ ಬಿಜೆಪಿಯಿಂದ ಆದರೂ ನಿಲ್ಲೂ, ಜೆಡಿಎಸ್‌ನಿಂದ ನಿಲ್ಲು ಅಂದ್ವಿ. ಆದರೆ ನೋ ನೋ ನೋ ಅಂತಾ ಕಾಂಗ್ರೆಸ್‌ನಲ್ಲೇ ನಿಲ್ಲೋದು ಅಂತಾ ನಿಂತಿದ್ದಾರೆ ಅಂತ ಯೋಗೇಶ್ವರ್‌ ವಿರುದ್ಧ ಪರೋಕ್ಷವಾಗಿ ದೇವೇಗೌಡರು ಗುಡುಗಿದ್ರು. ಜೆಡಿಎಸ್‌ನ ಸ್ಥಳೀಯ ಮುಖಂಡರು ಎಲ್ಲರೂ ಸೇರಿ ನಿಖಿಲ್ ನಿಲ್ಲಿಸಬೇಕು ಎಂದು ಅಭ್ಯರ್ಥಿ ಮಾಡಿದ್ದಾರೆ ಅಂತ ದೇವೇಗೌಡರು ಸ್ಪಷ್ಟಪಡಿಸಿದ್ರು. (ವರದಿ: ಕೃಷ್ಣ ಜಿ.ವಿ., ನ್ಯೂಸ್ 18 ಕನ್ನಡ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.