NEWS

ಆನ್​ಲೈನ್ ನಲ್ಲಿ ಆರ್ಡರ್ ಮಾಡ್ತೀರಾ? ಹುಷಾರ್! ಅಮೆಜಾನ್ ಪ್ಯಾಕೇಜ್​ನಲ್ಲಿ ಬಂತು ಜೀವಂತ ನಾಗರಹಾವು

ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಬೆಂಗಳೂರು: ಅಮೆಜಾನ್ ನಲ್ಲಿ (Amazon) ಎಕ್ಸ್ ಬಾಕ್ಸ್ ಕಂಟ್ರೋಲರ್ ಆರ್ಡರ್ (Xbox controller) ಮಾಡಿದ ದಂಪತಿಗೆ ಬಿಗ್ ಶಾಕ್ ಎದುರಾಗಿದೆ. ಹೌದು, ಪಾರ್ಸಲ್ ಬಾಕ್ಸ್ ನಲ್ಲಿ ಜೀವಂತ ನಾಗರಹಾವು (Snake) ಬಂದಿರೋದನ್ನು ಕಂಡು ದಂಪತಿ ದಂಗಾಗಿದ್ದಾರೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಬಾಕ್ಸ್ ಗೆ ಅಂಟಿಸಿರುವ ಟೇಪ್ ನಲ್ಲಿ ನಾಗರಹಾವು ಸಿಲುಕಿ ಒದ್ದಾಡುತ್ತಿರೋದನ್ನು ಕಾಣಬಹುದಾಗಿದೆ. ಏನಿದು ಘಟನೆ? ಬೆಂಗಳೂರಿನ ಸರ್ಜಾಪುರ ನಿವಾಸಿ ತಾನ್ವಿ ಎಂಬವರು ಎಕ್ಸ್ ಬಾಕ್ಸ್ ಕಂಟ್ರೋಲರ್ ಎನ್ನುವ ಪ್ರಾಡಕ್ಟ್ ಅನ್ನು ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದರು. ಕಳೆದ ಭಾನುವಾರ ಅಮೆಜಾನ್ ಸಂಸ್ಥೆ ಪಾರ್ಸಲ್ ಅನ್ನು ಡೆಲಿವರಿ ಮಾಡಿತ್ತು. ಆದರೆ ಪಾರ್ಸಲ್ ಓಪನ್ ಮಾಡಿದರೆ ಬಾಕ್ಸ್ ನಿಂದ ಜೀವಂತ ನಾಗರಹಾವು ಹೊರ ಬಂದಿದೆ. ಇದರಿಂದ ಕ್ಷಣ ಕಾಲ ಶಾಕ್ ಗೆ ಒಳಗಾದ ತಾನ್ವಿ ಅವರು ಕೂಡಲೇ ಎಚ್ಚೆತ್ತು ಬಾಕ್ಸ್ ಅನ್ನು ಮನೆಯಲ್ಲಿದ್ದ ಬಕೆಟ್ ನಲ್ಲಿಟ್ಟು ಪಾರ್ಸಲ್ ಬಾಕ್ಸ್ ನಿಂದ ಹಾವು ಹೊರ ಬರುವವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋವನ್ನು ಅಮೆಜಾನ್ ಸಂಸ್ಥೆಗೆ ಎಕ್ಸ್ ಮೂಲಕ ಟ್ಯಾಗ್ ಮಾಡಿ ವಿಷಯ ತಿಳಿಸಿ ದೂರು ಕೊಟ್ಟಿದ್ದಾರೆ. ತಾನ್ವಿ ಅವರು ಹಂಚಿಕೊಂಡಿರುವ ಮಾಹಿತಿ ಅನ್ವಯ, ಜೂನ್ 16ರಂದು ರಾತ್ರಿ ಅಮೆಜಾನ್ ನಿಂದ ಪಾರ್ಸಲ್ ಬಾಕ್ಸ್ ಡೆಲಿವರಿ ಆಗಿತ್ತು. ಇದನ್ನೂ ಓದಿ: Yediyur Elephant: ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ ನಿಧನ; ಭಕ್ತರ ಕಂಬನಿ! A family ordered an Xbox controller on Amazon and ended up getting a live cobra in Sarjapur Road. Luckily, the venomous snake was stuck to the packaging tape. India is not for beginners 💀 pic.twitter.com/6YuI8FHOVY ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಇಂಡಿಯಾ ಈಸ್ ಫಾರ್ ನಾಟ್ ಬಿಗಿನರ್ಸ್ ಎಂಬ ಸಾಲಿನೊಂದಿಗೆ ಹಲವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದ ಹಲವರು ಶಾಕ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡಿಲಿವರಿ ವ್ಯವಸ್ಥೆ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಡೆಲಿವರಿ ಬಾಯ್, ಆರ್ಡರ್ ಅನ್ನು ತಮ್ಮ ಕಚೇರಿಗೆ ಬಂದು ತೆಗೆದುಕೊಳ್ಳಲು ಹೇಳಿದ್ದ. ಏಕೆ ಅಂತ ಕೇಳಿದರೆ ನಮ್ಮ ಮನೆ ಅವರ ಕಚೇರಿಗಿಂತ ದೂರ ಇತ್ತು ಎಂಬ ಕಾರಣ ಕೊಟ್ಟಿದ್ದ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಈ ವಿಡಿಯೋ ಪ್ರತಿಕ್ರಿಯೆ ನೀಡಿ, ಅಮೆಜಾನ್ ಭಾರತದಲ್ಲಿ ನಂಬರ್ ಒನ್ ಆಗಿರೋದಕ್ಕೆ ನಾಗರಹಾವುಗಳನ್ನು ವಿತರಣೆ ಮಾಡ್ತಿರೋದೆ ಕಾರಣ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.