NEWS

Waqf Notice: ವಕ್ಫ್ ನೋಟಿಸ್‌ಗೆ ಸರ್ಕಾರದಲ್ಲೇ ಅಸಮಾಧಾನ! ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆಗೆ ದೂರು

ಪ್ರಾತಿನಿಧಿಕ ಚಿತ್ರ ಬೆಂಗಳೂರು: ರಾಜ್ಯದಲ್ಲಿ ವಕ್ಫ್‌ ಆಸ್ತಿ ವಿವಾದ (Wakf Property Dispute) ಭಾರೀ ಸಂಚಲನಕ್ಕೆ ಕಾರಣವಾಗಿದೆ. ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಜಮೀನು, ಮಠದ ಆಸ್ತಿ ಹಾಗೂ ಶಿಕ್ಷಣ ಸಂಸ್ಥೆಗಳ ಜಾಗಗಳ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಲಾಗಿದೆ. ಸದ್ಯ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ವಿಪಕ್ಷ ಬಿಜೆಪಿ (BJP) ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಪ್ರತಿಭಟನೆ (Protest) ನಡೆಸುತ್ತಿದೆ. ಇದರ ಬೆನ್ನಲ್ಲೆ ಸಚಿವ ಜಮೀರ್ ಅಹ್ಮದ್ ಖಾನ್ (minister Zameer) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ಸ್ವಪಕ್ಷೀಯ ಸಚಿವರೇ ಹೈಕಮಾಂಡ್ (High Command) ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಿಂದ ಹೈಕಮಾಂಡ್ ಮೊರೆ ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗ್ತಿರುವ ಹಿನ್ನೆಲೆ ಸಚಿವ ಜಮೀರ್ ವಿರುದ್ಧ ಸಿಎಂ ಹಾಗೂ ಹೈಕಮಾಂಡ್ ಗೆ ಕಾಂಗ್ರೆಸ್‌ನ ಕೆಲವು ಸಚಿವರು ಹಾಗೂ ಹಿರಿಯ ನಾಯಕರುಗಳು ದೂರು ನೀಡಿದ್ದಾರೆ. ವಕ್ಫ್ ವಿಚಾರ ರಾಜ್ಯದಲ್ಲಿ ದೊಡ್ಡದಾಗ್ತಿದೆ, ಪ್ರತಿಪಕ್ಷ ಬಿಜೆಪಿ ಅದನ್ನೇ ದೊಡ್ಡದು ಮಾಡ್ತಿದೆ, ಇದರಿಂದ ಸರ್ಕಾರ, ಪಕ್ಷಕ್ಕೆ ತೀವ್ರ ಮುಜುಗರ ಎದುರಾಗಿದೆ ಹಾಗಾಗಿ ಜಮೀರ್ ವಿರುದ್ದ ಶಿಸ್ತು ಕ್ರಮ‌ ಕೈಗೊಳ್ಳಿ ಇಲ್ಲವಾದರೆ ವಿವಾದ ಮುಗಿಯುವವರೆಗೆ ಸಂಪುಟದಿಂದ ಕೆಳಗಿಳಿಸಿ ಪಕ್ಷ ಹಾಗೂ ಸರ್ಕಾರದ ಮಾನವನ್ನು ಉಳಿಸಿ ಎಂದು ಮನವಿ ಸಲ್ಲಿಸಿದ್ದಾರೆ. ವಿವಾದ ಹೆಚ್ಚಳವಾಗುವ ಸಾಧ್ಯತೆ ಇದೆ! ಸಚಿವ ಜಮೀರ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ವಿವಾದ ಎದುರಿಸಬೇಕಾಗುತ್ತದೆ, ಈಗಾಗಲೇ ‌ಸರ್ಕಾರದ ವಿರುದ್ಧ ನಾನಾ ಆರೋಪಗಳು ಎದುರಾಗಿವೆ, ಇದರ ಜೊತೆ ಇವರು ವಕ್ಫ್ ಗದ್ದಲ ಬೇರೆ ಎಬ್ಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇದೆಲ್ಲ‌ಬೇಕಿರಲಿಲ್ಲ, ಹಾಗಾಗಿ ತಕ್ಷಣ ತಾವು ಮಧ್ಯ ಪ್ರವೇಶಿಸಬೇಕು. ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಸಿಎಂ ಭೇಟಿ ಸಂದರ್ಭದಲ್ಲಿ ಸಚಿವರುಗಳಾದ ಕೆ.ಎನ್.ರಾಜಣ್ಣ, ಹೆಚ್.ಸಿ.ಮಹಾದೇವಪ್ಪ ಸೇರಿದಂತೆ ‌ಕೆಲ ಸಚಿವರು ಸಿಎಂ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಖರ್ಗೆ ವರೆಗೂ ತಲುಪಿದ ದೂರು ಇನ್ನೊಂದೆಡೆ ಕೆಲವು ಹಿರಿಯ ಕಾಂಗ್ರೆಸ್‌ ಶಾಸಕರುಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ದೂರು ನೀಡಿದ್ದು, ಸರ್ಕಾರಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. (ವರದಿ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್18 ಕನ್ನಡ, ಬೆಂಗಳೂರು) ಇದನ್ನೂ ಓದಿ: Excise Scam: ಆರ್‌ಬಿ ತಿಮ್ಮಾಪುರ್ ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹ! ಮದ್ಯ ಮಾರಾಟ ಸಂಘದ ಅಧ್ಯಕ್ಷರ ಗಂಭೀರ ಆರೋಪ ಭ್ರಷ್ಟಾಚಾರದಲ್ಲಿ ಸಚಿವ ತಿಮ್ಮಾಪುರ ಭಾಗಿ ವರ್ಗಾವಣೆಗಾಗಿ ಕೋಟಿಗಟ್ಟಲೆ ಹಣ ಕೊಟ್ಟು ಬಂದಿದ್ದೇವೆ ಎಂದು ಹೇಳಿ ಅಧಿಕಾರಿಗಳು ನಮ್ಮ ಮಾರಾಟಗಾರರಿಂದ ಹಣ ಪೀಕುತ್ತಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇದು ಕೇವಲ ಆರೋಪವಲ್ಲ, ನಾವು ಯಾವುದೇ ಸರ್ಕಾರ ಎಂದಲ್ಲ, ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಕರುಣಾಕರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಕ್ಕರ್ ಶಾಪ್ ಲೈಸೆನ್ಸ್ ಗೆ 1 ಕೋಟಿ! ನಮಗೆ ಸಚಿವ ತಿಮ್ಮಾಪುರ ಬೇಡ, ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಅಬಕಾರಿ ಇಲಾಖೆಗೆ ಸಚಿವರನ್ನು ಬದಲಾಯಿಸಿ, ನಮ್ಮ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ. ಒಂದು ಲಿಕ್ಕರ್ ಶಾಪ್ ಲೈಸೆನ್ಸ್ ಗೆ ಒಂದು ಕೋಟಿ ಕೊಡಬೇಕು. ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯಬೇಕಿದೆ. ಈಗಾಗಲೇ ಸಾಮಾಜಿಕ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ, ಅದು ಸತ್ಯಾಂಶದಿಂದ ಕೂಡಿದೆ. ಇದೇ 25ರಂದು ಎಲ್ಲ ಲಿಕ್ಕರ್ ಶಾಪ್ ಬಂದ್ ಮಾಡಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಸಿಎಂ ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.