NEWS

Waqf Notice: ರಾಷ್ಟ್ರಮಟ್ಟಕ್ಕೂ ತಲುಪಿದ ವಕ್ಫ್ ವಿವಾದ! ವಿಜಯಪುರ ರೈತರನ್ನು ಭೇಟಿಯಾಗಲಿದ್ದಾರೆ ವಕ್ಫ್ ಜೆಪಿಸಿ ಚೇರ್ಮನ್

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ ವಕ್ಫ್ ವಿವಾದ ವಿಜಯಪುರ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ವಕ್ಫ್ (Waqf) ವಿವಾದ ತಿವ್ರ ಕೋಲಾಹಲ ಎಬ್ಬಿಸಿದೆ. ಸದ್ಯ ಈ ಪ್ರಕರಣ ರಾಜಕೀಯ ಬಣ್ಣಕ್ಕೆ ತಿರುಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಸದ್ಯ ವಕ್ಫ್ ಆಸ್ತಿ ವಿವಾದ ರಾಷ್ಟಮಟ್ಟಕ್ಕೆ ತಲುಪಿದೆ. ಪ್ರಕರಣದ ಸಂಬಂಧ ರೈತರಿಂದ ಮಾಹಿತಿ ಪಡೆಯಲು ವಕ್ಫ್ ಜೆಪಿಸಿ ಚೇರ್ಮನ್ (Waqf JPC Chairman) ಆಗಿರುವ ಜಗದಂಬಿಕಾ ಪಾಲ್ (Jagadambika Paul) ಅವರು ಸೆಪ್ಟೆಂಬರ್ 7 ರ ಗುರುವಾರದಂದು ವಿಜಯಪುರಕ್ಕೆ ಆಗಮಿಸಲಿದ್ದಾರೆ. ನವೆಂಬರ್ 7ರಂದು ವಿಜಯಪುರಕ್ಕೆ ವಕ್ಫ್ ಜೆಪಿಸಿ ಚೇರ್ಮನ್ ಭೇಟಿ ಹೌದು, ವಿಜಯಪುರದಲ್ಲಿ ಆರಂಭವಾದ ವಕ್ಫ್ ಆಸ್ತಿ ವಿವಾದ ಸದ್ಯ ರಾಷ್ಟ್ರಮಟ್ಟಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ರೈತರೊಂದಿಗೆ ಚರ್ಚಿಸಿ ರೈತರ ಅಹವಾಲು ಆಲಿಸುವ ಉದ್ದೇಶದಿಂದಾಗಿ ನವೆಂಬರ್7ರಂದು ವಿಜಯಪುರಕ್ಕೆ ಆಗಮಿಸಲಿರುವ ಜಾಯಿಂಟ್ ಪಾರ್ಲಿಮೆಂಟ್ರಿ ಕಮಿಟಿ ಚೇರ್ಮನ್ ಜಗದಂಬಿಕಾ ಪಾಲ್ ಅವರು ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಆಗಮನ, ರೈತರ ಜೊತೆ ಚರ್ಚೆ ರೈತರನ್ನು ಭೇಟಿ ಮಾಡಲಿರುವ ವಕ್ಫ್ ಜೆಪಿಸಿ ಚೇರ್ಮನ್ ದಿನಾಂಕ 7 ರಂದು ಮಧ್ಯಾಹ್ನ 12 ಗಂಟೆಗೆ ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರ ತಲುಪುಲಿರುವ ಜಗದಂಬಿಕಾ ಅವರು, 12.15ಕ್ಕೆ ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ. ವಕ್ಫ್‌ನಿಂದ ತೊಂದರೆಗೊಳಗಾದ ರೈತರ ಸಮಸ್ಯೆ ಆಲಿಕೆ ವಕ್ಫ್‌ನಿಂದ ತೊಂದರೆಗೊಳಗಾದ ರೈತರ ಸಮಸ್ಯೆ ಆಲಿಸಲಿದ್ದಾರೆ. ಮಾತ್ರವಲ್ಲ 2.30ಕ್ಕೆ ಸುದ್ದಿಗೋಷ್ಠಿ ಕೂಡ ನಡೆಸಲಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ವಕ್ಫ ಬಿಲ್ ಕುರಿತಾಗಿ ಮಾಹಿತಿ ಹಂಚಿಕೊಂಡ ಬಳಿಕ ಸಂಜೆ 4.45ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳಗಾವಿ ತಲುಪಲಿದ್ದಾರೆ. ಇದನ್ನೂ ಓದಿ: Siddaramaiah-Muda Scam: 14 ಸೈಟ್ ಗಾಗಿ ರಾಜಕಾರಣ ಮಾಡಬೇಕಾ? ನಾನೇನೂ ತಪ್ಪು ಮಾಡಿಲ್ಲ ಎಂದ ಸಿದ್ದರಾಮಯ್ಯ ಚಿಕ್ಕೋಡಿ: ವಕ್ಫ್ ಬೋರ್ಡ್‌ ವಿರುದ್ಧದ ಹೋರಾಟ ಯಕ್ಸಂಭಾ ಪಟ್ಟಣದ ರೈತರು ಮುಂದುವರೆಸಿದ್ದು, ಯಕ್ಸಂಭಾ ಪಟ್ಟಣ ಬಂದ್ ಮಾಡಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ನಿಪ್ಪಾಣಿಯ ಸಮಾದಿ ಮಠದ ಪ್ರಾಣಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪಟ್ಟಣದ ವಿವೇಕಾನಂದ ವೃತ್ತದಿಂದ ಪಟ್ಟಣ ಪಂಚಾಯತಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. 20 ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವ ಹಿನ್ನಲೆ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅಂಗಡಿ ಮುಂಗಟ್ಟು ಬಂದ್ ಇನ್ನೂ ಯಕ್ಸಂಬಾ ಪಟ್ಟಣದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಿದ ವ್ಯಾಪಾರಸ್ಥರು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಪಟ್ಟಣದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.