NEWS

RB Timmapur: ಆರ್‌ಬಿ ತಿಮ್ಮಾಪೂರ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ! ರಾಜಕಾರಣ ಮಾತನಾಡುವುದಿದ್ದರೆ, ರಾಜಕೀಯ ಮಾಡುತ್ತೇನೆ ಎಂದ ಅಬಕಾರಿ ಸಚಿವ

ಆರ್‌ಬಿ ತಿಮ್ಮಾಪೂರ್ ಬಾಗಲಕೋಟೆ: ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಹಾಗೂ ರೈತರ ಮಧ್ಯೆ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆದಿದೆ. ರಾಜಕಾರಣ ಮಾತನಾಡುವುದಿದ್ದರೆ, ನಾನು ರಾಜಕೀಯ ಮಾಡುತ್ತೇನೆ ಎಂದು ವೇದಿಕೆಯಿಂದಲೇ ಸಚಿವರು ರೈತರನ್ನು ಬೆದರಿಸಿದ್ದಾರೆ. ಆಲಮಟ್ಟಿ ಜಲಾಶಯದಲ್ಲಿ 522 ಮೀಟರ್ ನೀರು ಸಂಗ್ರಹ ಮಾಡುವುದಕ್ಕೆ ನ್ಯಾಯಾಲಯಕ್ಕೆ ಪತ್ರ ನೀಡಿರುವ ಕುರಿತು ರೈತನೊರ್ವ ಮಾಹಿತಿ ಕೇಳಿದ್ದಾನೆ. ಈ ಮಾಹಿತಿಯಿಂದಾಗಿ ಸಿಡಿಮಿಡಿಗೊಂಡ ಸಚಿವರು. ರಾಜಕಾರಣ ಮಾಡುವುದಿದ್ದರೆ ನಾನು ರಾಜಕಾರಣ ಮಾಡುತ್ತೇನೆ. ಆದರೆ ಈ ಸಂತ್ರಸ್ಥರ ವೇದಿಕೆ ರಾಜಕಾರಣಕ್ಕೆ ಬಳಕೆ ಮಾಡಬಾರದು ಎಂದು ಸಚಿವ ತಿಮ್ಮಾಪೂರ ಹೇಳಿದ್ದಾರೆ. ಸಿಎಂ, ಡಿಸಿಎಂ ಜೊತೆ ಸಭೆ ಇದೇ ಸಮಯದಲ್ಲಿ ಸಚಿವರಿಗೆ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದ ವಕೀಲರು ಮನವಿ ಮಾಡಿಕೊಂಡರು. ಸಂತ್ರಸ್ಥರ ಪರಿಹಾರ ಧನ ವಿಳಂಬವಾದಲ್ಲಿ ಮುಂದೆ ಕೋಟ್ಯಾಂತರ ರೂಪಾಯಿಗಳ ಪರಿಹಾರ ನೀಡಲು ಸರ್ಕಾರದಲ್ಲಿ ಹಣ ಇಲ್ಲದಂತಾಗುತ್ತದೆ. ಶೀಘ್ರವಾಗಿ ಈ ಯೋಜನೆ ಮುಗಿಸುವ ನಿಟ್ಟಿನಲ್ಲಿ ಸಿಎಂ ಅವರಿಗೆ ಸಮಜಾಯಿಷಿ, ಡಿ.11 ರಂದು ಸಿಎಂ ಹಾಗೂ ಡಿಸಿಎಂ ಜೊತೆಗೆ ಸಭೆ ನಡೆಸಲಾಗುತ್ತದೆ ಎಂದರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅವಳಿ‌ ಜಿಲ್ಲೆಯ ಶಾಸಕರು ,ಸಚಿವರು ಹಾಗೂ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧಾರ ಮಾಡಲಾಗುತ್ತದೆ. ಸಿಎಂ ಜೊತೆಗೆ ಎಲ್ಲಾ ಸಾಧಕ ಭಾದಕ ಚರ್ಚೆ ಆಗಲಿದೆ. ಸಂತ್ರಸ್ಥರ ಹೋರಾಟ ಸಮಿತಿಯ ಮುಖಂಡರು ಭಾಗವಹಿಸಬಹುದು. ನಾನು ಈ ವೇದಿಕೆಯಲ್ಲಿ ರಾಜಕಾರಣ ಮಾಡಲ್ಲ. ನಾನು ಸಂತ್ರಸ್ಥರ ಕ್ಷೇತ್ರದಿಂದಲೇ ಬಂದ್ದಿದ್ದೀನಿ. ಸಂತ್ರಸ್ಥರ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ ಎಂದು ಆರ್.ಬಿ ತಿಮ್ಮಾಪೂರ ತಿಳಿಸಿದ್ದಾರೆ. ಇದನ್ನೂ ಓದಿ: Bellary: ಬಾಣಂತಿಯರ ಸರಣಿ ಸಾವು ಪ್ರಕರಣ! ಸರಕಾರ ಕಾಯುತ್ತಿದ್ದ ಐವಿ ಫ್ಲೂಯಿಡ್ ವರದಿ ನಾಳೆ ಬಿಡುಗಡೆ ಇದು ದೊಡ್ಡ ದ್ರೋಹ ಅಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ವರೆಗೆ ನೀರು ನಿಲ್ಲಿಸಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 15 ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಡಿಸಬೇಕಾಗಿದ್ದರೂ ಸರ್ಕಾರ ಈಗ ಕೇವಲ 522 ಮೀ. ನೀರು ನಿಲ್ಲಿಸುವುದಾಗಿ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಲು ಮುಂದಾಗಿರುವುದು ಈ ಭಾಗದ ಜನ ಹಾಗೂ ರೈತರಿಗೆ ಮಾಡುತ್ತಿರುವ ದೊಡ್ಡ ದ್ರೋಹವಾಗಿದೆ. ಸಿದ್ದರಾಮಯ್ಯ ಸರಕಾರದ ವಿರುದ್ಧ ಕಾರಜೋಳ ಟೀಕೆ! ಯುಕೆಪಿ ನ್ಯಾಯಾಧೀಕರಣದ ಅನ್ವಯ ಆಲಮಟ್ಟಿ ಜಲಾಶಯದಲ್ಲಿ 130 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಅವಕಾಶವಿದೆ. ಇದಕ್ಕಾಗಿ 20 ಹಳ್ಳಿಗಳನ್ನು ಸ್ಥಳಾಂತರಿಸಿ, ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದರೂ ಸರ್ಕಾರ ಅದಕ್ಕೆ ಮುಂದಾಗುತ್ತಿಲ್ಲ. ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತ ಬಂದರೂ ಸಿದ್ದರಾಮಯ್ಯ ಸರ್ಕಾರ ಒಂದು ಎಕರೆ ಭೂಮಿ ಸಹ ಸ್ವಾಧೀನಪಡಿಸಿಕೊಂಡಿಲ್ಲ, ಕಟ್ಟಡಗಳಿಗೆ ಪರಿಹಾರ ನೀಡಿಲ್ಲ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 524 ಮೀಟರ್ ವ್ಯಾಪ್ತಿಯ 26 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಭೂಸ್ವಾಧಿನಪಡಿಸಿಕೊಂಡು ಪರಿಹಾರ ಸಹ ವಿತರಿಸಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. ಕಾಂಗ್ರೆಸ್‌ ವಿರುದ್ಧ ಲೇವಡಿ ಈಗಿನ ಸರ್ಕಾರ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯಲ್ಲಿ ದ್ದ 21,900 ಕೋಟಿ ಹಣವನ್ನು ವಾಪಸ್ ತೆಗೆದುಕೊಂಡಿದೆ. ಇದು ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. 2013-14 ರಿಂದ 2018 ರವರೆಗೆ ಸಿದ್ದರಾಮಯ್ಯ ಸಿಎಂಯಾಗಿದ್ದ ಅವಧಿಯಲ್ಲಿ 17,795 ಕೋಟಿ, ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 1,079 ಕೋಟಿ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 26,407 ಕೋಟಿ ವೆಚ್ಚ ಮಾಡಿತ್ತು, ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೇವಲ 548 ಕೋಟಿ ವೆಚ್ಚ ಮಾಡಿದೆ ಎಂದು ಕಾರಜೋಳ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.