NEWS

Garam Masala: ವಿಶ್ವದ ಟಾಪ್‌ 10 ಮಸಾಲೆಗಳ ಪಟ್ಟಿಯಲ್ಲಿ ಭಾರತದ ಗರಂ ಮಸಾಲೆಗೆ ಸ್ಥಾನ! ಈ ಟೇಸ್ಟಿ ಮಸಾಲೆಯನ್ನು ಮನೆಯಲ್ಲಿ ಮಾಡೋದು ಹೇಗೆ?

ಗರಂ ಮಸಾಲಾ ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಒಂದೊಂದು ಅಡುಗೆಯ ವಿಧಾನವಿದ್ದು ಅದಕ್ಕೆ ಹಾಕುವ ಪದಾರ್ಥಗಳಿಂದ ಹಿಡಿದು ಪಾಕವಿಧಾನದವರೆಗೂ (Recipe) ಬೇರೆಬೇರೆಯಾದ ವಿಶೇಷತೆಗಳಿವೆ. ಅದ್ರಲ್ಲೂ ಈ ಮಸಾಲ ಪದಾರ್ಥಗಳಿವೆಯೆಲ್ಲಾ ಅವು ಬೇರೆಯದ್ದೇ ಸ್ಥಾನಮಾನ ಹೊಂದಿವೆ. ಈ ಮಸಾಲೆಗಳು ಪದಾರ್ಥಗಳ (Masala) ರುಚಿಯನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುವ ಪವರ್‌ ಅನ್ನು ಹೊಂದಿದೆ. ಟೇಸ್ಟ್ ಅಟ್ಲಾಸ್ ಈ ವರ್ಷದ ಅಂತಹ ಟಾಪ್‌ ಹತ್ತು ಮಸಾಲೆಗಳನ್ನು ಗುರುತಿಸಿದ್ದು ಲಿಸ್ಟ್‌ ಅನ್ನು ಪ್ರಕಟಗೊಳಿಸಿದೆ. ಈ ಪಟ್ಟಿಯಲ್ಲಿ ಚಿಲಿಯ ಮಸಾಲೆಗೆ ನಂಬರ್‌ ಒನ್‌ ಸ್ಥಾನ ಲಭಿಸಿದ್ದು, ಎರಡನೇ ಸ್ಥಾನ ನಮ್ಮ ದೇಶಕ್ಕೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಲೆಬನಾನ್‌ನ ಝಾತಾರ್‌ ಮಸಾಲೆ ಇದೆ. ʻಗರಂ ಮಸಾಲೆʼಗೆ ಎರಡನೇ ಸ್ಥಾನ ಭಾರತ ಹೇಳಿ ಕೇಳಿ, ಮಸಾಲೆ ಪದಾರ್ಥಗಳಿಗೆ ಫೇಮಸ್.‌ ಇಲ್ಲಿನ ಅಡುಗೆಗಳೂ ಸಹ ಅದಕ್ಕೆ ಜನಪ್ರಿಯ. ಟೇಸ್ಟ್ ಅಟ್ಲಾಸ್ ವರದಿಯು ನಮ್ಮ ದೇಶದ ʻಗರಂ ಮಸಾಲೆʼಗೆ ವಿಶ್ವದ ಟಾಪ್‌ ಹತ್ತು ಅದ್ಭುತ ಸ್ಪೈಸಿ ಮಸಾಲೆಗಳಲ್ಲಿ ಎರಡನೇ ಸ್ಥಾನವನ್ನು ನೀಡಿದೆ. ಭಾರತ ಶತಮಾನಗಳಿಂದ ಮಸಾಲೆ ಪದಾರ್ಥಗಳಿಗೆ ಜನಪ್ರಿಯವಾಗಿದ್ದರೂ, ಇತ್ತೀಚಿನ ಕೆಲ ಆರೋಪಗಳು ಮಸಾಲೆಗಳ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿವೆ. ಇವೆಲ್ಲದರ ನಡುವೆ ಗರಂ ಮಸಾಲೆ ಜಾಗತಿಕವಾಗಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಜಗತ್ತಿನಲ್ಲೇ 2ನೇ ಸ್ಥಾನದಲ್ಲಿರುವ ಗರಂ ಮಸಾಲೆಯನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳೋದು ನೋಡೋಣ ಬನ್ನಿ. ಇದನ್ನೂ ಓದಿ: Health Tips: ದೋಸೆ-ಇಡ್ಲಿ, ಉಪ್ಪಿನಕಾಯಿಯಂತಹ ಹುದುಗಿದ ಆಹಾರ ಸೇವನೆಯಿಂದ ಇರುವ ಲಾಭವೇನು? ಇಲ್ಲಿದೆ ತಜ್ಞರ ಮಾಹಿತಿ ಗರಂ ಮಸಾಲಾ: ಮನೆಯಲ್ಲಿಯೇ ಮಾಡೋದು ಹೇಗೆ? ಬೇಕಿರುವ ಪದಾರ್ಥಗಳು ಕೊತ್ತಂಬರಿ ಬೀಜ- 1/2 ಕಪ್ ಕೆಂಪುಮೆಣಸು - 4 ಜೀರಿಗೆ - 1/4 ಕಪ್ ಲವಂಗ, ಏಲಕ್ಕಿ - 2 ಚಮಚ, ಕಾಳುಮೆಣಸು, ಸೋಂಪು - 1 ಚಮಚ ದಾಲ್ಚಿನ್ನಿ - 8 ತುಂಡುಗಳು ಒಣಗಿದ ಬೇ ಎಲೆಗಳು - 4 ಸ್ಟಾರ್ ಹೂವು - 3 ಜಾಯಿಕಾಯಿ - 1/2 ಕಪ್ಪು ಏಲಕ್ಕಿ - 3 ರಿಂದ 4 ಗರಂ ಮಸಾಲೆ ಮಾಡುವ ವಿಧಾನ ನಿಮ್ಮ ಪ್ಯಾನ್ ಅನ್ನು ಸ್ವಲ್ಪ ಬಿಸಿ ಮಾಡಿ ಮೊದಲು ಏಲಕ್ಕಿ, ಬೇ ಎಲೆ, ಸ್ಟಾರ್ ಸೋಂಪು, ಜಾಯಿಕಾಯಿ, ದಾಲ್ಚಿನ್ನಿ, ಲವಂಗ ಮತ್ತು ಮೆಣಸು ಸೇರಿಸಿ ಬಿಸಿ ಮಾಡಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ಗೆ ಕೊತ್ತಂಬರಿ ಬೀಜಗಳನ್ನು ಸೇರಿಸಿ ಹುರಿದುಕೊಳ್ಳಿ. ಆಮೇಲೆ ಇದನ್ನೂ ಸಹ ಪಕ್ಕಕ್ಕಿಟ್ಟು ಸೋಂಪು, ಜೀರಿಗೆ ಎಲ್ಲಾ ಹಾಕಿ ಪ್ರೈ ಮಾಡಿಕೊಳ್ಳಿ. ಕೆಂಪು ಮೆಣಸನ್ನು ಸಹ ಪ್ರತ್ಯೇಕವಾಗಿ ಫ್ರೈ ಮಾಡಿ ಪಕ್ಕಕ್ಕಿಡಿ. ಬಿಸಿ ಕಮ್ಮಿಯಾದ ನಂತರ ಎಲ್ಲವನ್ನೂ ಒಟ್ಟಿಗೆ ಹಾಕಿ ನುಣ್ಣಗೆ ಪೌಡರ್‌ ಮಾಡಿಕೊಳ್ಳಿ. ಇಷ್ಟಾದ್ರೆ ಗರಂ ಮಸಾಲೆ ರೆಡಿ. ಇದು ನೆನಪಿನಲ್ಲಿರಲಿ ಗರಂ ಮಸಾಲೆ ಮಾಡೋದು ಸುಲಭ, ಆದರೆ ಒಳ್ಳೆ ರುಚಿ ಬರಲು ಮಸಾಲೆಗಳನ್ನು ಹೆಚ್ಚಿನ ಶಾಖದಲ್ಲಿ ಹುರಿಯದೇ, ಕಡಿಮೆ ಬಿಸಿಯಲ್ಲಿ ಲೈಟಾಗಿ ಪ್ರೈ ಮಾಡಿಕೊಳ್ಳಿ. ಇದು ಸೀದು ಕರಕಾಲಾದರೆ ರುಚಿ ಬರೋದಿಲ್ಲ. ಈ ಬಹುಮುಖ ಮಸಾಲೆ ಮಿಶ್ರಣವನ್ನು ರೋಗನ್ ಜೋಶ್, ಪುಲಾವ್ ಮತ್ತು ಮುರ್ಗ್ ಕರಿ ಸೇರಿದಂತೆ ಅನೇಕ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಪ್ರಧಾನವಾಗಿದೆ. ಇದನ್ನೂ ಓದಿ: Winter Laddu: ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳ ಬದಲು ಈ ಆರೋಗ್ಯಕರ 3 ಲಡ್ಡುಗಳನ್ನು ತಿನ್ನುವುದು ಅತ್ಯುತ್ತಮ ಮಸಾಲೆಯ ಪ್ರಯೋಜನಗಳು ಅದರ ಪರಿಮಳವನ್ನು ಮೀರಿ, ಗರಂ ಮಸಾಲಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಲವಂಗ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಆಕ್ಸಿಡೇಟಿವ್ ಒತ್ತಡವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ, ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ದಾಲ್ಚಿನ್ನಿ ಮತ್ತು ಲವಂಗಗಳು ಹೃದ್ರೋಗ ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಸಂಬಂಧಿಸಿದ ಉರಿಯೂತವನ್ನು ನಿವಾರಿಸುತ್ತವೆ. ಇನ್ನು ಜೀರಿಗೆ, ಕಿಣ್ವ ಸ್ರವಿಸುವಿಕೆಯನ್ನು ಉತ್ತೇಜಿಸುವ ಮತ್ತು ಉಬ್ಬುವಿಕೆಯನ್ನು ನಿವಾರಿಸುವ ಮೂಲಕ ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸುತ್ತದೆ. ಜೊತೆಗೆ ಮೆಣಸಿನಲ್ಲಿರುವ ಪೈಪರಿನ್ ಚಯಾಪಚಯವನ್ನು ಹೆಚ್ಚಿಸುತ್ತದೆ, ತೂಕ ನಿರ್ವಹಣೆಗೆ ಕೊಡುಗೆ ನೀಡುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.