ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾ ನಿರ್ದೇಶಕ ಗುರುಪ್ರಸಾದ್ (Guru Prasad) ನಿಧನದ ಸುದ್ದಿ ಇಡೀ ಸ್ಯಾಂಡಲ್ವುಡ್ನನ್ನೇ (Sandalwood) ಬೆಚ್ಚಿಬೀಳಿಸಿತ್ತು. ಗುರುಪ್ರಸಾದ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ರಿವಾ ಕ್ಲಬ್ ಹೌಸ್ ಅಪಾರ್ಟ್ಮೆಂಟ್ (Club House Apartment) ನಲ್ಲಿ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು ಎನ್ನಲಾಗಿದೆ. ನಿರ್ದೇಶಕನ ನಿಗೂಢ ಸಾವಿನ ಬಗ್ಗೆ ತನಿಖೆ (Investigation) ನಡೆಸಲಾಗ್ತಿದೆ. ಇದೇ ವೇಳೆ ನಟಿ ಚೈತ್ರಾ ಕೊಟ್ಟುರು ಗುರುಪ್ರಸಾದ್ ನೆನೆದು ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಗುರುಪ್ರಸಾದ್ ನೆನೆದು ಕಣ್ಣೀರಿಟ್ಟ ನಟಿ! ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟ್ಟುರು ಕಷ್ಟದಲ್ಲಿ ಕೈ ಹಿಡಿದ ನಿರ್ದೇಶಕ ಗುರುಪ್ರಸಾದ್ ನೆನೆದು ಕಣ್ಣೀರು ಹಾಕಿದ್ದಾರೆ. ತುಂಬಾ ಮಾತನಾಡಬೇಕು ಅನಿಸ್ತಿದೆ. ಆದ್ರೆ ನೀವಿಲ್ಲ ಎಂದು ಟೈಟಲ್ ಕೊಟ್ಟು ನಟಿ ಫೇಸ್ಬುಕ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಸೋತ ನನಗೆ ಅವಕಾಶ ಕೊಟ್ಟವರು ಒಳ್ಳೆಯದ್ದು, ಕೆಟ್ಟದ್ದು ನನಗೆ ಗೊತ್ತಿಲ್ಲ. ಗುರುಪ್ರಸಾದ್ ಸರ್ ಬಗ್ಗೆ ಕೆಲವರು ಒಳ್ಳೆಯದಾಗಿ, ಕೆಲವರು ಕೆಟ್ಟದಾಗಿ ಮಾತಾಡ್ತಾರೆ. ಆದ್ರೆ ನನಗೆ ಅದ್ಯಾವುದು ಗೊತ್ತಿಲ್ಲ. 2 ದಿನ ಆಯ್ತು ಆದ್ರೆ ಈ ಸಾವಿನ ವಿಚಾರವನ್ನು ನನಗೆ ಸ್ವೀಕರಿಸಲು ಆಗ್ತಿಲ್ಲ. ನಾನು ತುಂಬಾ ನೋವಿನಲ್ಲಿದ್ದಾಗ, ನನ್ನ ಜೀವನದಲ್ಲಿ ಏನೇನೋ ನಡೆದು ನಾನು ಬೇಸರದಲ್ಲಿದ್ದಾಗ ನನಗೆ ಕೆಲಸ ಕೊಟ್ಟವರು ಅವ್ರು. ಕೆಲಸ ಮಾಡು ಪುಟ್ಟಿ ಎಂದು ಅವಕಾಶ ಕೊಟ್ರು. ನೀನು ಬರಹಗಾರ್ತಿ ಧೈರ್ಯವಾಗಿರು ಅಂತ ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡ್ರು. ನನಗೆ ಉತ್ತೇಜನ ಕೊಟ್ಟವರು ಗುರುಪ್ರಸಾದ್ ಸರ್ ಅವರಿಲ್ಲ ಅನ್ನೋದು ನನಗೆ ತುಂಬಾ ನೋವಾಗ್ತಿದೆ ಎಂದು ಚೈತ್ರಾ ಕೊಟ್ಟುರು ಕಣ್ಣೀರು ಹಾಕಿದ್ರು. ಗಳ ಗಳನೆ ಅತ್ತ ಚೈತ್ರಾ ಕೊಟ್ಟುರು! ಕೋವಿಡ್ ಸಿನಿಮಾ ಬಳಿಕ ಅದೆಷ್ಟೋ ಜನರಿಗೆ ಕೆಲವೇ ಇರಲಿಲ್ಲ. ನನಗೂ ಕರೆದು ಕೆಲಸ ಕೊಟ್ಟರು. ಗುರುಪ್ರಸಾದ್ ಸರ್ ಅವರನ್ನು ನಾನು ಸದಾ ನೆನೆಪು ಮಾಡಿಕೊಳ್ತೇನೆ. ಇಡೀ ಚಿತ್ರತಂಡ ನೆನಪಿಕೊಳ್ತೇನೆ. ಸೋಲು-ಗೆಲುವು ಬದುಕಲ್ಲಿ ಸಹಜ. ಗುರುಪ್ರಸಾದ್ ಸರ್ ಜೊತೆ ಮಾತಾಡಿದವರು, ಅವರ ಜೊತೆ ಸಮಯ ಕಳೆದವರು ಅವರನ್ನು ತುಂಬಾ ಮಿಸ್ ಮಾಡಿಕೊಳ್ತಾರೆ. ನಾನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಚೈತ್ರಾ ವಿಡಿಯೋದಲ್ಲಿ ಅಳುತ್ತಾ ಹೇಳಿದ್ದಾರೆ. ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್! ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೇ ಗುರು ಪ್ರಸಾದ್ ಹಗ್ಗ ಹಾಗೂ ಕರ್ಟನ್ ಖರೀದಿಸಿದ್ದರು ಎಂಬ ಮಾಹಿತಿಯು ಪೊಲೀಸ್ ತನಿಖೆಯಿಂದ ಬಯಲಾಗಿದೆ ಎನ್ನಲಾಗ್ತಿದೆ. ಕಿಟಕಿಗಳಿಗೆ ಕರ್ಟನ್ ಹಾಕಿದ ನಿರ್ದೇಶಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ದೇಶಕ ಗುರುಪ್ರಸಾದ್ ನಿರ್ಧರಿಸಿದ್ರು ಎನ್ನಲಾಗ್ತಿದೆ. ಅದಕ್ಕಾಗಿಯೇ ಹೊಸದಾಗಿ ಹಗ್ಗ ಖರೀದಿ ಮಾಡಿದ್ದರು ಎನ್ನಲಾಗ್ತಿದೆ. ಹಗ್ಗದ ಜೊತೆ ಕರ್ಟನ್ ಕೂಡ ಖರೀದಿ ಮಾಡಿದ್ರಂತೆ. ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ತಂದ ಕರ್ಟನ್ ಗಳನ್ನು ಹಾಕಿ ಕವರ್ ಮಾಡಿದ್ರು ಎನ್ನಲಾಗ್ತಿದೆ. ಆತ್ಮಹತ್ಯೆಕೆ ಶರಣಾದ ಗುರುಪ್ರಸಾದ್! ಹಗ್ಗ ತಂದು ಕರ್ಟನ್ ಹಾಕಿದ ಬಳಿಕ ಮನೆಯ ಒಳಗಿನಿಂದಲೇ ಲಾಕ್ ಮಾಡಿಕೊಂಡು ದಿವಾನ್ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎನ್ನಲಾಗ್ತಿದೆ. ಇದನ್ನೂ ಓದಿ: Guruprasad: 10 ವರ್ಷಗಳಿಂದ ಅದಕ್ಕೆ ಟ್ಯಾಬ್ಲೆಟ್ ತಗೋತಿದ್ರು! ಗುರು ಪ್ರಸಾದ್ ನೆನೆದು ಖ್ಯಾತ ಸಂಗೀತ ನಿರ್ದೇಶಕ ಭಾವುಕ! ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡ ಪೊಲೀಸರು ಗುರುಪ್ರಸಾದ್ ಶವ ಪತ್ತೆಯಾದ ಫ್ಲ್ಯಾಟ್ನಲ್ಲಿದ್ದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುಪ್ರಸಾದ್ ಅವರ ನಾಲ್ಕು ಮೊಬೈಲ್ , ಟ್ಯಾಬ್ಲೆಟ್ ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಫೋನುಗಳನ್ನು ಎಫ್ಎಸ್ಎಲ್ ಗೆ ಕಳಿಸಲಾಗಿದ್ದು, ಡಾಟಾ ರಿಟ್ರೀವ್ ಮಾಡಲು ಸೂಚಿಸಿದ್ದಾರೆ ಎನ್ನಲಾಗ್ತಿದೆ. None
Popular Tags:
Share This Post:
Chaithra Kundapur: ಚೈತ್ರಾ ಕಣ್ಣೀರಿಗೆ ದೊಡ್ಮನೆ ದೇವರು ಸ್ಪಂದಿಸಿದ್ರಾ? ಬಲಗಡೆಯಿಂದ ಹೂ ಬಿದ್ದೇ ಬಿಡ್ತು
December 24, 2024What’s New
Spotlight
Today’s Hot
CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು
- By Sarkai Info
- December 20, 2024
Featured News
Latest From This Week
Subscribe To Our Newsletter
No spam, notifications only about new products, updates.