NEWS

Om Prakash Chautala: ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲ ನಿಧನ, ಪ್ರಧಾನಿ ಮೋದಿ ಸೇರಿ ಹಲವರಿಂದ ಸಂತಾಪ

ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಗುರುಗ್ರಾಮ್‌; ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ನಾಯಕ ಓಂ ಪ್ರಕಾಶ್ ಚೌತಾಲಾ (89) ಅವರು ಗುರುಗ್ರಾಮ್‌ನಲ್ಲಿರುವ ನಿವಾಸದಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಮತ್ತು ಮಾಜಿ ಉಪ ಪ್ರಧಾನಿ ದೇವಿ ಲಾಲ್ ಅವರ ಪುತ್ರ ಒ.ಪಿ. ಚೌತಾಲಾ ಅವರ ಗುರುಗ್ರಾಮ್ ಮನೆಯಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಉಳಿಸಲಾಗಲಿಲ್ಲ ಎಂದು ಐಎನ್‌ಎಲ್‌ಡಿ ಮಾಧ್ಯಮ ಸಂಯೋಜಕ ರಾಕೇಶ್ ಸಿಹಾಗ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 1999-2000 ಅವಧಿಯಲ್ಲಿ ಹರಿಯಾಣದಲ್ಲಿ ಕಿರಿಯ ಮೂಲ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣಕ್ಕಾಗಿ 2013 ರಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಚೌತಾಲಾ ಅವರು ಆದರೆ ಚೌತಾಲಾ ಅವರು 2021 ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಬಿಡುಗಡೆಯಾದ ಕೈದಿಗಳಲ್ಲಿ ಚೌತಾಲಾ ಕೂಡ ಇದ್ದರು. ನಂತರ ಮೇ 2022 ರಲ್ಲಿ ಮತ್ತೊಂದು ಪ್ರಕರಣದಲ್ಲಿ ಜೈಲು ಪಾಲಾದ ಅವರು, ತಿಹಾರ್ ಜೈಲಿನ ಅತ್ಯಂತ ಹಿರಿಯ ಕೈದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದನ್ನು ಓದಿ; ಗುಡ್‌ನ್ಯೂಸ್! ಕೊನೆಗೂ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಬಂತು ಔಷಧ; ಕ್ಯಾನ್ಸರ್ ಲಸಿಕೆ ಕಂಡುಹಿಡಿದ ರಷ್ಯಾ! ರಾಜಕೀಯದಲ್ಲಿ ಮಹತ್ವ ಪಾತ್ರ ಜನವರಿ 1, 1935 ರಂದು ಸಿರ್ಸಾ ಬಳಿಯ ಹಳ್ಳಿಯಲ್ಲಿ ಜನಿಸಿದ ಅವರು ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮತ್ತು 1966 ರಲ್ಲಿ ಹರಿಯಾಣವನ್ನು ಪ್ರತ್ಯೇಕ ರಾಜ್ಯವಾಗಿ ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಭಾರತದ ರಾಜಕೀಯದಲ್ಲಿ ಮಹತ್ವದ ವ್ಯಕ್ತಿಯಾದ ಚೌಧರಿ ದೇವಿ ಲಾಲ್ ಅವರ ಪುತ್ರರಾಗಿದ್ದರು. ಇವರ ಕುಟುಂಬವು ಹರಿಯಾಣದ ರಾಜಕೀಯ ಭೂದೃಶ್ಯದಲ್ಲಿ ಪ್ರಭಾವಶಾಲಿಯಾಗಿದೆ. ನಾಲ್ಕು ಅವಧಿಗೆ ಹರಿಯಾಣದ ಮುಖ್ಯಮಂತ್ರಿ ಜನವರಿ 1, 1935 ರಂದು ಸಿರ್ಸಾ ಬಳಿಯ ಹಳ್ಳಿಯಲ್ಲಿ ಜಾಟ್ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರನಾಗಿ ಜನಿಸಿದ ಓಂ ಪ್ರಕಾಶ್ ಚೌತಾಲಾ ಅವರು ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಸತತ ಏಳು ಬಾರಿ ಶಾಸಕರಾಗಿದ್ದಾರೆ. ಡಿಸೆಂಬರ್ 2, 1989 ರಂದು ತಂದೆ ದೇವಿ ಲಾಲ್ ಅವರು ಜನತಾ ದಳ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ದೆಹಲಿಗೆ ತೆರಳಿದಾಗ ತಂದೆಯ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿಯಾದರು. ಇದನ್ನು ಓದಿ; ಭಾರತಕ್ಕಿಂತ 14 ವರ್ಷ ತಡವಾಗಿ ಗೋವಾಗೆ ಸ್ವಾತಂತ್ರ್ಯ ಸಿಕ್ಕಿದ್ದು ಏಕೆ? ಓಂ ಪ್ರಕಾಶ್ ಚೌತಾಲಾ ಅವರು ತಮ್ಮ ಭಾರತೀಯ ರಾಷ್ಟ್ರೀಯ ಲೋಕದಳವನ್ನು ಹರಿಯಾಣ ರಾಜ್ಯದಲ್ಲಿ ರೈತರ ಹಕ್ಕುಗಳು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಪ್ರತಿಪಾದಿಸುವ ಮಹತ್ವದ ಧ್ವನಿಯಾಗಿ ಹೊರಹೊಮ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿ ಸುಧಾರಣೆಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಪ್ರತಿಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವಲ್ಲಿ ಕೇಂದ್ರೀಕೃತ ಸ್ಥಾನವನ್ನು ನಿಭಾಯಿಸಿದ್ದಾರೆ. ಈ ವರ್ಷದ ಅಕ್ಟೋಬರ್ 5 ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಓಂ ಪ್ರಕಾಶ್ ಚೌತಾಲಾ ಕೊನೆಯ ಬಾರಿಗೆ ಸಾರ್ವಜನಿಕವಾಗಿ ತಮ್ಮ ಸಿರ್ಸಾದ ಚೌತಾಲಾ ಗ್ರಾಮದ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ ಹರಿಯಾಣದ ಮಾಜಿ ಸಿಎಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂತಾಪ ಸೂಚಿಸಿದ್ದು, ದಶಕಗಳಿಂದ ರಾಜ್ಯದಲ್ಲಿ ಚೌತಾಲಾ ಅವರ ಸಕ್ರಿಯ ರಾಜಕಾರಣವನ್ನು ಶ್ಲಾಘಿಸಿದ್ದಾರೆ. हरियाणा के पूर्व मुख्यमंत्री ओम प्रकाश चौटाला जी के निधन से अत्यंत दुख हुआ है। प्रदेश की राजनीति में वे वर्षों तक सक्रिय रहे और चौधरी देवीलाल जी के कार्यों को आगे बढ़ाने का निरंतर प्रयास किया। शोक की इस घड़ी में उनके परिजनों और समर्थकों के प्रति मेरी गहरी संवेदनाएं। ॐ शांति। pic.twitter.com/QXh74przOI “ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರು ಅನೇಕ ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಚೌಧರಿ ದೇವಿ ಲಾಲ್ ಜಿ ಅವರ ಕೆಲಸವನ್ನು ಮುಂದುವರಿಸಲು ನಿರಂತರವಾಗಿ ಪ್ರಯತ್ನಿಸಿದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಆಳವಾದ ಸಂತಾಪ. ಓಂ ಶಾಂತಿ" ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಚೌತಾಲಾ ಅವರು ಹರ್ಯಾಣ ಮತ್ತು ದೇಶದ ಸೇವೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಚೌತಾಲಾ ಅವರ ನಿಧನದಿಂದ ಅವರ ಲಕ್ಷಾಂತರ ಮತ್ತು ಕೋಟಿ ಬೆಂಬಲಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. “ಇಂದು, ಹರಿಯಾಣದ ರೈತರು ಅಸಹಾಯಕರಾಗಿದ್ದಾರೆ” ಎಂದು ಅವರು ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.