NEWS

ತನ್ನಿಂದಾಗಿ ಅಪ್ಪಮ್ಮ, ಕುಟುಂಬಕ್ಕೆ ಮುಜುಗರ; ಜೈಲಿನಲ್ಲಿ ನಿದ್ದೆ ಇಲ್ಲದೇ ರಾತ್ರಿ ಕಳೆದ ಪ್ರಜ್ವಲ್ ರೇವಣ್ಣ

ಸಾಂದರ್ಭಿಕ ಚಿತ್ರ ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (Prajwal Revanna Sexual Abuse Case) ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ನಿನ್ನೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ. ಎಸ್‌ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಪ್ರಜ್ವಲ್‌ ರೇವಣ್ಣನನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಇದೀಗ ಬೆಂಗಳೂರಿನ 42ನೇ ಎಸಿಎಂ ನ್ಯಾಯಾಲಯವು ಜೂನ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ ನಂತರ ಸೆಂಟ್ರಲ್ ಜೈಲಿಗೆ ಕರೆತರಲಾಗಿತ್ತು. ನಿನ್ನೆ ಸೆಂಟ್ರಲ್ ಜೈಲಿನಲ್ಲಿ ಪ್ರಜ್ವಲ್ ಒಂದು ರಾತ್ರಿ ಕಳೆದಿದ್ದು, ಆದರೆ ನಿದ್ದೆ ಸರಿಯಾಗಿ ಒದ್ದಾಡಿದ್ದಾರೆ, ಈ ಪ್ರಕರಣದಿಂದ ಕುಟುಂಬದ ಜೊತೆಗೆ ತನಗಾದ ಸಮಸ್ಯೆ ಹಾಗೂ ಸೋಲಿನಿಂದ ಹತಾಶೆಗೊಳಗಾಗಿರೋ ಪ್ರಜ್ವಲ್ ಕಂಗೆಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Kisan Samman Nidhi: ಗುಡ್‌ನ್ಯೂಸ್‌! ರೈತರೇ ನಿಮ್ಮ ಬ್ಯಾಂಕ್‌ ಅಕೌಂಟ್‌ ನೋಡಿ! ಪ್ರಧಾನಿಯಾಗಿ ಮೊದಲ ದಿನವೇ ಬಿಗ್‌ ಅನೌನ್ಸ್ ಮಾಡಿದ ನರೇಂದ್ರ ಮೋದಿ ಸದ್ಯ ತನ್ನ ಅಪ್ಪ ಎಚ್‌ಡಿ ರೇವಣ್ಣ ಇದ್ದ ಕ್ವಾರಂಟೈನ್ ಸೆಲ್‌ನಲ್ಲೇ ಪ್ರಜ್ವಲ್ ರೇವಣ್ಣನಿಗೂ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, ವಿಚಾರಣಾಧೀನಾ ಕೈದಿ ನಂಬರ್ 5664 ಅನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ರಾತ್ರಿ ಜೈಲೂಟ ಚಪಾತಿ ಅನ್ನ ಸಾಂಬರ್ ಮಾಡಿದ್ದು, ಆದರೆ ರಾತ್ರಿ ನಿದ್ರೆ ಮಾಡದೆ ಬ್ಯಾರಕ್‌ನಲ್ಲಿ ಪ್ರಜ್ವಲ್ ರೇವಣ್ಣ ಓಡಾಟ ನಡೆಸಿದ್ದಾನೆ. ಸದ್ಯ ಯಾವ ಸಿಬ್ಬಂದಿ ಅಧಿಕಾರಿಗಳ ಜೊತೆ ಮಾತನಾಡದೆ ತನ್ನಷ್ಟಕ್ಕೇ ತಾನೇ ಇದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ತನ್ನ ಕುಟುಂಬಕ್ಕೆ ಮುಜುಗರ ಹಾಗೂ ತಂದೆಯ ಬಂಧನ, ತಾಯಿಯ ವಿಚಾರಣೆ ಹಾಗೂ ತಾನೂ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸುತ್ತಿರುವ ಬಗ್ಗೆ ಪ್ರಜ್ವಲ್ ರೇವಣ್ಣ ತೀವ್ರ ಹತಾಶೆಗೊಳಗಾಗಿದ್ದು, ಹಾಸನದಲ್ಲಿ ಗೆಲುವಿನ‌ ನಿರೀಕ್ಷೆಯಲ್ಲಿದ್ದೂ ಸೋಲಾಗಿದ್ರಿಂದ ಭವಿಷ್ಯದ ಬಗ್ಗೆ ಮತ್ತಷ್ಟು ಚಿಂತೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ರಾತ್ರಿಯೆಲ್ಲಾ ನಿದ್ದೆ ಮಾಡದೆ ಮುಂಜಾನೆ ನಿದ್ರೆಗೆ ಜಾರಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: European Union Election: ಐರೋಪ್ಯ ಸಂಸತ್ ಚುನಾವಣೆಯಲ್ಲಿ ಕಿಂಗ್ ಮೇಕರ್ ಆದ ಜಾರ್ಜ್ ಮೆಲೋನಿ! ಅಧಿಕಾರಕ್ಕೆ ಏರಿದ್ದು ಯಾರು? ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ಗೆ 14 ದಿನಗಳ ಕಾಲ ಅಂದರೆ ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದರು. ಪ್ರಜ್ವಲ್ ರೇವಣ್ಣನನ್ನು ಎಸ್ ಐ ಟಿ ಅಧಿಕಾರಿಗಳು ಕೋರ್ಟಿಗೆ ಹಾಜರುಪಡಿಸಿದ್ದ ವೇಳೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣಗೆ ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ನ್ಯಾಯಾಲಯವು ಮೇ 31 ರಂದು ಪ್ರಜ್ವಲ್ ರನ್ನು ಜೂನ್ 6 ರವರೆಗೆ ಎಸ್‌ಐಟಿ ವಶಕ್ಕೆ ನೀಡಿತು ಮತ್ತು ನಂತರ ಅದನ್ನು ಜೂನ್ 10 ರವರೆಗೆ ವಿಸ್ತರಿಸಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.