NEWS

Ayogya-2 Movie: ಹತ್ತೇ ದಿನದಲ್ಲಿ ಅಯೋಗ್ಯ -2 ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!

ಕೇವಲ 10 ದಿನಗಳಲ್ಲಿ ಅಯೋಗ್ಯ -2 ಮೊದಲ ಹಂತದ ಶೂಟಿಂಗ್ ಕಂಪ್ಲೀಟ್; ಖುಷಿ ಹಂಚಿಕೊಂಡ ನಾಯಕ ನೀನಾಸಂ ಸತೀಶ್! ಕನ್ನಡದ ಅಯೋಗ್ಯ -2 ಚಿತ್ರದ (Ayogya-2 Movie) ಶೂಟಿಂಗ್ ಭರದಿಂದಲೇ ಸಾಗಿದೆ. ಕೇವಲ ೧೦ ದಿನಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದೆ. ಜನವರಿ-2 ರಿಂದ ಎರಡನೇ ಹಂತದ ಚಿತ್ರೀಕರಣ (Shooting) ಶುರು ಆಗುತ್ತಿದೆ. ತುಂಬಾನೆ ಫಾಸ್ಟ್ ಆಗಿಯೇ ಈ ಚಿತ್ರದ ಕೆಲಸ ನಡೆಯತ್ತಿದೆ. ಅಷ್ಟೇ ಖುಷಿಯಲ್ಲಿಯೇ ಚಿತ್ರ ತಂಡವೂ ಇನ್ವಾಲ್ವ್ ಆಗಿದೆ. ನಗ್ತಾ ನಗ್ತಾನೇ ಶೂಟಿಂಗ್ ಕೆಲಸವನ್ನ ಕಲಾವಿದರು (Artists) ಮಾಡುತ್ತಿದ್ದಾರೆ. ಮೊದಲ ಹಂತದ ಶೂಟಿಂಗ್ (First Schedule) ಮುಗಿಸಿರೋ ನಾಯಕ ನಟ ನೀನಾಸಂ ಸತೀಶ್, ತಮ್ಮ ಈ ಒಂದು ಮೊದಲ ಹಂತದ ಶೂಟಿಂಗ್ ಅನುಭವವನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ಇವರ ಮಾತುಗಳ ಒಟ್ಟು ಚಿತ್ರಣ ಈ ಒಂದು ಸ್ಟೋರಿಯಲ್ಲಿದೆ ಓದಿ. ಟೈಮ್ ಟ್ರಾವೆಲ್ ಮಾಡಿದ ಹಾಗಿದೆ ಅಯೋಗ್ಯ ಸಿನಿಮಾ ಮಾಡೋವಾಗಿನ ಆ ಎಲ್ಲ ದಿನಗಳು ಕಣ್ಮುಂದೆ ಬರ್ತಿವೆ. 6 ವರ್ಷದ ಹಿಂದೆ ಏನ್ ವಾತಾವರಣ ಇತ್ತೋ? ಅದೇ ವಾತಾವರಣ ಮತ್ತೆ ಕಣ್ಣಿಗೆ ಕಟ್ಟಿದಂತೆ ಇದೆ. ಒಂದು ರೀತಿ ಫ್ರಿಜ್‌ನಿಂದ ಹೊರಗೆ ತೆಗೆದ್ರೆ ಹೇಗಿರುತ್ತದೆಯೋ ಜನ ಹಾಗೇ ಇದ್ದಾರೆ. ಏನೂ ಬದಲಾಗಿಯೇ ಇಲ್ಲ.. ಅದೇ ಹಳ್ಳಿ…ಅದೇ ಜನ….ಅದೇ ಪರಿಸರ. ನಿಜಕ್ಕೂ ತುಂಬಾನೆ ಖುಷಿ ಆಗುತ್ತದೆ. ಟೈಮ್ ಟ್ರಾವೆಲ್ ಮಾಡಿ 6 ವರ್ಷದ ಹಿಂದೆ ಬಂದ ರೀತಿನೇ ಇದೆ. ಅಷ್ಟು ಒಳ್ಳೆ ಅನುಭವ ಆಗುತ್ತಿದೆ. ಸಿನಿಮಾ ಕೆಲಸ ಕೂಡ ಅಷ್ಟೆ ಖುಷಿಯಲ್ಲಿಯೇ ಆಗುತ್ತಿದೆ. ನಗ್ತಾ ನಗ್ತಾನೇ ನಾವು ಅಯೋಗ್ಯ-2 ಚಿತ್ರದ ಕೆಲಸ ಮಾಡುತ್ತಿದ್ದೇವೆ. ಅಯೋಗ್ಯ-2 ಕ್ವಾಲಿಟಿ ವೈಸ್ ಗುಡ್ ಅಯೋಗ್ಯ ಚಿತ್ರದಲ್ಲಿ ಒಂದು ಲೆಕ್ಕ ಇತ್ತು. ಅಯೋಗ್ಯ-2 ಸಿನಿಮಾದಲ್ಲಿ ಕ್ವಾಲಿಟಿ ಇನ್ನೂ ಇಪ್ರೂವೈಸ್ ಆಗಿದೆ. ಕ್ಯಾರೆಕ್ಟರ್‌ಗಳನ್ನ ಇನ್ನೂ ಅದ್ಭುತವಾಗಿಯೇ ತೋರಿಸುತ್ತಿದ್ದೇವೆ. ಇದನ್ನೂ ಓದಿ: UI Movie: ಪ್ರೇಕ್ಷಕರ ತಲೆಗೆ ಹುಳ ಬಿಡ್ತಾ UI ಸಿನಿಮಾ? ಎರಡು ಸಲ ನೋಡ್ಬೇಕು ಅಂತ ಹೇಳ್ತಿರೋದು ಯಾಕೆ? ಅಯೋಗ್ಯ-2 ಸಿನಿಮಾದ ಕಥೆ ಬೇರೆ ಏನೂ ಇಲ್ಲ. ಅಯೋಗ್ಯ ಕಥೆ ಎಲ್ಲಿಗೆ ಎಂಡ್ ಆಗಿತ್ತೋ, ಅಲ್ಲಿಂದಲೇ ಮತ್ತೆ ಶುರು ಆಗುತ್ತಿದೆ. ಮೊದಲ ಹಂತದ ಚಿತ್ರೀಕರಣವನ್ನ ತುಂಬಾನೆ ಎಂಜಾಯ್ ಮಾಡಿದ್ದೇವೆ. ೧೦ ದಿನದ ಶೂಟಿಂಗ್ ಕಂಪ್ಲೀಟ್ ಅಯೋಗ್ಯ-2 ಚಿತ್ರದ 10 ದಿನದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊದಲ ಹಂತದ ಈ ಒಂದು ಶೂಟಿಂಗ್ ಆದ್ಮೇಲೆ ಮತ್ತೊಂದು ಹಂತದ ಚಿತ್ರೀಕರಣ ಕೂಡಲೇ ಶುರು ಮಾಡುತ್ತೇವೆ. ಇದೇ ಜನವರಿ-2 ರಿಂದಲೇ ಎರಡನೇ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ ಅಂತಲೇ ನೀನಾಸಂ ಸತೀಶ್ ಹೇಳಿಕೊಂಡಿದ್ದಾರೆ. ಅಯೋಗ್ಯ-2 ಸಿನಿಮಾ ಮುಹೂರ್ತ ಕೂಡ ದೊಡ್ಡಮಟ್ಟದಲ್ಲಿಯೇ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಶ್ ಮಾಡಿದ್ದಾರೆ. ಡೈರೆಕ್ಟರ್ ಮಹೇಶ್ ಕುಮಾರ್‌ ಕೂಡ ಮತ್ತೆ ಸಿನಿಮಾ ಮಾಡ್ತಿರೋ ಖುಷಿಯಲ್ಲಿಯೇ ಇದ್ದಾರೆ. 2017-18 ರಲ್ಲಿ ಅಯೋಗ್ಯ ಸಿನಿಮಾ ಮಾಡಿದ್ದರು. ಏನಮ್ಮಿ ಹಾಡು ಸೂಪರ್ ಹಿಟ್ ಡೈರೆಕ್ಟರ್ ಮಹೇಶ್ ಕುಮಾರ್ ಅವರ ಈ ಒಂದು ಚಿತ್ರದಲ್ಲಿ ಏನಮ್ಮಿ ಹಾಡು ಸೂಪರ್ ಹಿಟ್ ಆಗಿತ್ತು. ರಚಿತಾ ರಾಮ್ ಮತ್ತು ನೀನಾಸಂ ಸತೀಶ್ ಅವರ ಜೋಡಿಯ ಈ ಚಿತ್ರವೂ ಹಿಟ್ ಕೂಡ ಆಗಿತ್ತು. ಅಯೋಗ್ಯ ಅಂತ ಬಂದ್ರೆ ಮೊದಲು ಈ ಒಂದು ಹಾಡು ಕಣ್ಮುಂದೆ ಬರುತ್ತದೆ. ಅಂತಹ ಹಾಡಿನ ಈ ಸಿನಿಮಾದ ಪಾರ್ಟ್‌-2 ಬರ್ತಿರೋ ಖುಷಿ ಸಿನಿಮಾ ತಂಡದಲ್ಲಿ ಇದ್ದೇ ಇದೆ. ಆಯಾ ಪಾತ್ರಧಾರಿಗಳು ಮತ್ತೊಮ್ಮೆ ಒಟ್ಟಾಗಿದ್ದಾರೆ. ಅಯೋಗ್ಯ ಚಿತ್ರದ ಕಥೆಯನ್ನ ಮತ್ತೊಮ್ಮೆ ಅಭಿನಯಿಸುತ್ತಿದ್ದಾರೆ. ಒಂದು ಹೊಸ ಜೋಶ್, ಮತ್ತೊಂದು ಹೊಸ ಕುತೂಹಲದೊಂದಿಗೆ ಅಯೋಗ್ಯ-2 ಚಿತ್ರದ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದ್ದಾರೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.