NEWS

Health Tips: ನಿಮ್ಮ ಜೀವನಶೈಲಿ ಹೀಗಿದ್ದರೆ ಹೃದಯವೂ ಸೇಫ್‌.. ನೀವೂ ಸೇಫ್‌ : ಇಂದೇ ಫಾಲೋ ಮಾಡಿ

ಈಗಿನ ಗಡಿಬಿಡಿ ಜೀವನ, ಒತ್ತಡ, ಆತಂಕ ಈ ಎಲ್ಲದರ ನಡುವೆ ಆರೋಗ್ಯ ಕಾಪಾಡಿಕೊಳ್ಳೋದು ಬಹಳ ಮುಖ್ಯವಾಗಿದೆ. ಕೆಲಸ, ಜವಾಬ್ದಾರಿಗಳ ಮಧ್ಯೆ ಸ್ಟ್ರೆಸ್‌ ಇದೆಲ್ಲಾ ಸಹಜ. ಆದ್ರೆ ಒತ್ತಡಕ್ಕೆ ನಮ್ಮನ್ನು ಒಗ್ಗಿಕೊಂಡು ಅದರಿಂದ ಆರೋಗ್ಯ ಸಮಸ್ಯೆಯನ್ನು ನಾವು ಅನುಭವಿಸಬಾರದು. ಪುಟ್ಟ ಹೃದಯದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ ಅದರಲ್ಲೂ ನಮ್ಮ ಹೃದಯದ ಆರೋಗ್ಯಕ್ಕೆ ಇದು ನಿರ್ಣಾಯಕವಾಗಿದೆ. ನಾವೆಷ್ಟು ಸ್ಟ್ರೆಸ್‌ ಫ್ರೀ ಜೀವನ ನಡೆಸ್ತಿವೋ ಅಷ್ಟು ನಮ್ಮ ಪುಟ್ಟ ಹೃದಯ ಆರೋಗ್ಯಕರವಾಗಿರುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ಯಾವಾಗಲೂ ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈಗಾಗ್ಲೇ ನೀವು ಒಳ್ಳೆ ಲೈಫ್‌ಸ್ಟೈಲ್‌ ಮಾಡ್ತಿದ್ದೀರಾ ಅಂದರೆ ಒಳ್ಳೆಯದು. ಇದನ್ನೂ ಓದಿ: Beauty Tips: ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಬೇಕಾ? ಹಾಗಾದ್ರೆ ಈ ಎಣ್ಣೆಗಳನ್ನು ಹಚ್ಚಿ! ಇಲ್ಲಾ ನಾನು ಜಂಕ್‌ ಫುಡ್‌ ಜಾಸ್ತಿ ತಿಂದಿದೀನಿ, ನಿದ್ರೆ ಸರಿ ಆಗ್ತಿಲ್ಲ, ಒತ್ತಡ ಜಾಸ್ತಿ, ಮದ್ಯಪಾನ, ಧೂಮಪಾನ ಚಟಗಳಿಗೆ ದಾಸನಾಗಿದ್ದೇನೆ ಎಂದಾದರೆ ಈಗ್ಲೇ ಇಂತಹ ಅಭ್ಯಾಸ ಬಿಟ್ಟುಬಿಡಿ… ಹೃದಯದ ಆರೋಗ್ಯಕ್ಕಾಗಿ ನೀವೂ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲೇ ಬೇಕು. ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನೀವು ದೀರ್ಘಕಾಲ ಬದುಕಬಹುದು ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು. ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವ 7 ಜೀವನಶೈಲಿ ಬದಲಾವಣೆಗಳು ಸಮತೋಲನ ಆಹಾರ ಪ್ರಸ್ತುತ ಆಹಾರವೇ ಆರೋಗ್ಯ ಎನ್ನುವಂತಾಗಿದೆ. ಹೃದಯದ ಆರೋಗ್ಯಕ್ಕೆ ಆಹಾರವೇ ಸೂತ್ರ. ದಿನನಿತ್ಯದ ನಿಮ್ಮೂಟದಲ್ಲಿ ಸಾಕಷ್ಟು ನೇರ ಪ್ರೋಟೀನ್, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಇರುವಂತೆ ಮೀಲ್‌ ಪ್ಲ್ಯಾನ್‌ ಮಾಡಿಕೊಳ್ಳಿ. ಚೀಸ್, ಹೆಚ್ಚು ಬೇಯಿಸಿದ ಪದಾರ್ಥ ಮತ್ತು ಕೆಂಪು ಮಾಂಸದಂತಹ ಕೊಬ್ಬಿನಂಶವಿರುವ ಆಹಾರವನ್ನು ಮಿತಿಗೊಳಿಸಿ. ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ ದೀರ್ಘಾವಧಿಯವರೆಗೆ ಕುಳಿತುಕೊಳ್ಳುವುದು ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ; ಇದು ರಕ್ತನಾಳಗಳ ಸಾಮಾನ್ಯ ಕಾರ್ಯವನ್ನು ಬದಲಾಯಿಸುವ ಮೂಲಕ ಮಧುಮೇಹ ಮತ್ತು ಹೃದಯಾಘಾತಕ್ಕೆ ಕೊಡುಗೆ ನೀಡುತ್ತದೆ. ಹೀಗಾಗಿ ಒಂದೇ ಕಡೆ ಹೆಚ್ಚು ಹೊತ್ತು ಕೂತು ಕೆಲಸ ಮಾಡುವ ನಡುವೆ ಸಣ್ಣ ವಾಕಿಂಗ್‌ ಬ್ರೇಕ್‌ ತೆಗೆದುಕೊಂಡು ಹತ್ತು ಹೆಜ್ಜೆಯಾದರೂ ನಡೆಯಿರಿ. ಇದನ್ನೂ ಓದಿ: Beauty Tips: ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸಬೇಕಾ? ಹಾಗಾದ್ರೆ ಈ ಎಣ್ಣೆಗಳನ್ನು ಹಚ್ಚಿ! ಹಲ್ಲುಗಳನ್ನು ಬ್ರಷ್ ಮಾಡಿ ನಮ್ಮ ಹೃದಯದ ಅಪಧಮನಿಗಳಲ್ಲಿ ಬೆಳೆಯುವ ಪ್ಲೇಕ್‌ಗಳು ಮತ್ತು ಅಡೆತಡೆಗಳು ಸಾಮಾನ್ಯ ಬಾಯಿಯ ಸೋಂಕಿನಿಂದ ಬಂದಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವುದು ಕಂಡುಬಂದಿದ್ದು, ಇದು ಹೃದಯಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರತಿದಿನ ಮಿಸ್‌ ಮಾಡದೇ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಿ. ಧೂಮಪಾನವನ್ನು ತ್ಯಜಿಸಿ ಧೂಮಪಾನ ಹೃದಯದ ಪರಮಶತ್ರು. ಧೂಮಪಾನವನ್ನು ತೊರೆಯುವುದು ಹೆಚ್ಚುವರಿ ಹೃದಯಾಘಾತವನ್ನು ಅನುಭವಿಸುವ ಅಥವಾ ಪರಿಧಮನಿಯ ಹೃದಯ ಕಾಯಿಲೆಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೆಲ್ದಿ ಸ್ನ್ಯಾಕ್ಸ್‌ ಊಟದ ನಡುವೆ ಇಲ್ಲಾ ಕಾಫಿ ಜೊತೆ ತೆಗೆದುಕೊಳ್ಳುವ ಸ್ನ್ಯಾಕ್ಸ್‌ಗಳನ್ನು ಸರಿಯಾಗಿ ಆರಿಸಿ. ಬಿಸ್ಕೆಟ್‌, ಸ್ವೀಟ್‌ ಇದನ್ನೆಲ್ಲಾ ತಿನ್ನುವ ಬದಲು ಆರೋಗ್ಯಕರ ಆಯ್ಕೆಗಳನ್ನು ಆರಿಸಿ. ಇವುಗಳು ಹೃದಯದ ಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸಾಕಷ್ಟು ನಿದ್ರೆ ಹೃದ್ರೋಗವನ್ನು ತಡೆಗಟ್ಟಲು, ವಯಸ್ಕರು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ನಿದ್ದೆ ಮಾಡಲೇಬೇಕು. ರಾತ್ರಿ ನಿದ್ರೆ ಸರಿಯಾಗಿಲ್ಲ ಎಂದಾದರೆ ನಿಮಗೆ ಹಗಲಿನಲ್ಲಿ ದಣಿದ ಭಾವನೆ ಬರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುವ ಅನಾರೋಗ್ಯಕರ ಆಹಾರಗಳನ್ನು ಹಂಬಲಿಸುವ ನಿಮ್ಮ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಒತ್ತಡ ಕೂಡ ಸೈಲೆಂಟ್‌ ಕಿಲ್ಲರ್‌, ಇದು ನೇರವಾಗಿ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೀಗಾಗಿ ಒತ್ತಡ ಮುಕ್ತ ಜೀವನಕ್ಕೆ ಆದ್ಯತೆ ನೀಡಿ. ಉಸಿರಾಟ, ಧ್ಯಾನ ಅಥವಾ ವಾಕಿಂಗ್‌ ಅನ್ನು ಅಭ್ಯಾಸ ಮಾಡಿ. ಒತ್ತಡವನ್ನು ಕಡಿಮೆ ಮಾಡುವುದು ಮಾನಸಿಕ ಶಾಂತಿಗಾಗಿ ಮಾತ್ರವಲ್ಲ; ದೀರ್ಘಕಾಲದ ಹೃದಯರಕ್ತನಾಳದ ಆರೋಗ್ಯಕ್ಕೂ ಅತ್ಯಗತ್ಯ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.