NEWS

Indian Railways: ಚೆನ್ನೈ, ಬೆಂಗಳೂರು ನಡುವೆ ಜಸ್ಟ್​ 4 ಗಂಟೆ ಪ್ರಯಾಣ; ದಕ್ಷಿಣ ರೈಲ್ವೆ ಕಾಮಗಾರಿಗೆ ವೇಗ!

ಸಾಂದರ್ಭಿಕ ಚಿತ್ರ ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ (Railway Passengers) ಉತ್ತಮ ಪ್ರಯಾಣ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಪ್ರಯಾಣದ ಸಮಯವನ್ನು (Travelling Time) ಉಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿಯೇ ಸಿಕಂದರಾಬಾದ್‌ (Secunderabad) ಕೇಂದ್ರವಾಗಿರುವ ದಕ್ಷಿಣ ಮಧ್ಯ ರೈಲ್ವೆ ವಿಭಾಗವು (South Central Railway Division) ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ದಕ್ಷಿಣ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಚೆನ್ನೈ ಮತ್ತು ಬೆಂಗಳೂರು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ನಡೆಸುತ್ತಿದೆ. ಬೆಂಗಳೂರು-ಚೆನ್ನೈ ನಡುವಿನ ಮುಖ್ಯ ಮಾರ್ಗಗಳಲ್ಲಿ ರೈಲ್ವೆ ಮಂಡಳಿಯು ಹಳಿಗಳನ್ನು ನವೀಕರಿಸುತ್ತಿದೆ. ರೈಲುಗಳನ್ನು ವೇಗವಾಗಿ ನಡೆಸಲು ಅನುಕೂಲ ಆಗುವಂತೆ ಟ್ರ್ಯಾಕ್‌ಗಳನ್ನು ಬದಲಾಯಿಸಲಾಗುತ್ತಿದೆ. ಜೊತೆಗೆ ಅಗತ್ಯವಿರುವ ಸಿಗ್ನಲ್‌ಗಳು, ಇತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ರೈಲುಗಳು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುವಂತೆ ಹಳಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸದ್ಯ ಎರಡನೇ ಹಂತದಲ್ಲಿ ಜೋಲರಪೇಟೆಯಿಂದ ಬೆಂಗಳೂರಿನವರೆಗೆ ಕಾಮಗಾರಿ ನಡೆಯುತ್ತಿದೆ. ಈ ಟ್ರ್ಯಾಕ್ ಈಗ ಪರೀಕ್ಷಾ ಹಂತದಲ್ಲಿದ್ದು, ಈ ಕಾಮಗಾರಿ ಮುಗಿದರೆ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವು ಈ ಮಾರ್ಗಗಳಲ್ಲಿ ಚಲಿಸುವ ಎಲ್ಲಾ ರೈಲುಗಳ ವೇಗವನ್ನು ಹೆಚ್ಚಿಸಲಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಇದನ್ನೂ ಓದಿ: Ganga Water: ಗಂಗಾಜಲ ತಂದು ಪರೀಕ್ಷೆ ಮಾಡಿದವನಿಗೆ ಕಾದಿತ್ತು ಅಚ್ಚರಿ; ಎಂತಹ ಪವಾಡ ನೋಡಿ! ರೈಲ್ವೆ ಹಳಿಗಳ ನವೀಕರಣ ಕಾಮಗಾರಿ ಪೂರ್ಣಗೊಂಡರೆ, ಪ್ರಸ್ತುತ ಈ ಮಾರ್ಗದಲ್ಲಿ ಓಡುತ್ತಿರುವ ವಂದೇಭಾರತ್ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಮತ್ತು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗಳ ವೇಗ ಹೆಚ್ಚಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗವಾಗಿ ಗಮ್ಯಸ್ಥಾನವನ್ನು ತಲುಪುತ್ತದೆ. ಪ್ರಸ್ತುತ, ಈ ಸೆಮಿ-ಹೈ ಸ್ಪೀಡ್ ರೈಲಿನಲ್ಲಿ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣವು 4:20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ನವೀಕರಣ ಪೂರ್ಣಗೊಂಡ ನಂತರ, ವಂದೇ ಭಾರತ್‌ನ ಪ್ರಯಾಣದ ಸಮಯವು ಇನ್ನೂ 20 ನಿಮಿಷಗಳಷ್ಟು ಕಡಿಮೆಯಾಗುತ್ತದೆ, ಕೇವಲ ಚೆನ್ನೈನಿಂದ ಬೆಂಗಳೂರಿಗೆ ಕೇವಲ 4 ಗಂಟೆಗಳಲ್ಲಿ ತಲುಪಬಹುದು ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಮತ್ತೊಂದೆಡೆ, ಶತಾಬ್ದಿ ಎಕ್ಸ್‌ಪ್ರೆಸ್‌ನ ಪ್ರಯಾಣದ ಸಮಯ 5 ರಿಂದ 5:10 ನಿಮಿಷ ತೆಗೆದುಕೊಳ್ಳುತ್ತಿದೆ. ಕಾಮಗಾರಿ ಪೂರ್ಣಗೊಂಡದರೆ ಚೆನ್ನೈನಿಂದ ಬೆಂಗಳೂರಿಗೆ 5 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ ತಲುಪುತ್ತದೆ. ರೈಲ್ವೆ ಜಾಲವನ್ನು ಆಧುನೀಕರಿಸುವ ಮತ್ತು ಪ್ರಯಾಣಿಕರಿಗೆ ಮತ್ತು ಒಟ್ಟಾರೆ ಪ್ರಯಾಣಿಕರ ಅನುಭವಕ್ಕೆ ಉತ್ತಮ ಮತ್ತು ಹೆಚ್ಚು ಐಷಾರಾಮಿ ಸಾರಿಗೆ ಸೇವೆಗಳನ್ನು ಒದಗಿಸುವ ದೀರ್ಘಾವಧಿಯ ಉದ್ದೇಶದೊಂದಿಗೆ ದಕ್ಷಿಣ ಮಧ್ಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ. ಇದರ ಭಾಗವಾಗಿ ಟ್ರ್ಯಾಕ್ ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: Karnataka Weather Forecast: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಹೊಸ ಚಂಡಮಾರುತ ರಚನೆ; ಬೆಂಗಳೂರಿನಲ್ಲಿ ಶೀಘ್ರವೇ ಮತ್ತೆ ಮಳೆಯಾಗುತ್ತಾ? ಈಗಾಗಲೇ ಚೆನ್ನೈ ಮತ್ತು ಬೆಂಗಳೂರು ನಡುವೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಅರಕ್ಕೋಣಂನಿಂದ ಜೋಲರಪೇಟೆ ವರೆಗಿನ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಎರಡನೇ ಹಂತದ ಕಾಮಗಾರಿಯೂ ಅಂತಿಮ ಹಂತ ತಲುಪಿದೆ. ಮತ್ತೊಂದೆಡೆ ರೈಲುಗಳ ಪ್ರಾಯೋಗಿಕ ಓಡಾಟ ನಡೆಯುತ್ತಿದೆ. ಹೀಗಾಗಿ ತಮಿಳುನಾಡು ಮತ್ತು ಕರ್ನಾಟಕದ ಜನರಿಗೆ ಈ ಮಾರ್ಗ ತುಂಬಾ ಉಪಯುಕ್ತವಾಗಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.