NEWS

Gukesh: ಚೆಸ್ ಚಾಂಪಿಯನ್ ಗೆದ್ದ ಗುಕೇಶ್​ಗೆ ಸಿಕ್ತು ₹11 ಕೋಟಿ ಪ್ರಶಸ್ತಿ ಮೊತ್ತ; ಇಷ್ಟೊಂದು ಹಣನ ಏನ್ಮಾಡ್ತಾರಂತೆ ಗೊತ್ತೇ?

ಡಿ ಗುಕೇಶ್ ಡಿ.ಗುಕೇಶ್.. ಭಾರತದ ಚೆಸ್ ಲೋಕದಲ್ಲಿ ಪ್ರಜ್ವಲಿಸುತ್ತಿರುವ ಹೊಸ ನಕ್ಷತ್ರ. ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಗೆದ್ದು ಬೀಗುವ ಮೂಲಕ ಗುಕೇಶ್, ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ. ಮಾತ್ರವಲ್ಲ ದಿನ ಕಳೆಯೋದ್ರೊಳಗೆ ಗುಕೇಶ್ ಕೋಟಿ ಕೋಟಿ ಸರದಾರನೂ ಆಗಿದ್ದಾರೆ. ವಿಶ್ವಚಾಂಪಿಯನ್ ಪ್ರಶಸ್ತಿ ಗೆದ್ದಿರುವ ಗುಕೇಶ್ ಅವ್ರಿಗೆ 11.45 ಕೋಟಿಯಾಗಿ ಬಹುಮಾನದ ಮೊತ್ತ ಬಂದಿದೆ. ಇಷ್ಟು ಪ್ರಮಾಣದ ಹಣದ ಬಗ್ಗೆ ಪ್ರಶ್ನಿಸಿದ್ದಕ್ಕೆ, ನಮ್ಮ ಹೆತ್ತವರಿಗೆ ಇದೆಲ್ಲವೂ ಸಲ್ಲಬೇಕು ಅನ್ನುವ ಮೂಲಕ ಪೋಷಕರ ಶ್ರಮವನ್ನ ಗುಕೇಶ್​ ನೆನೆದಿದ್ದಾರೆ. ಅಪ್ಪ-ಅಮ್ಮನ ಶ್ರಮದಿಂದಲೇ ಈ ಪಟ್ಟ ಸಿಕ್ಕಿದೆ: ತಮಿಳುನಾಡಿನ ಚೆನ್ನೈ ಮೂಲದ ಡಿ.ಗುಕೇಶ್ ಅವರು ವಿಶ್ವ ಚೆಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ಚೀನಾದ ಡಿಯೆಂಗ್ ಲೆರಿನ್ ಅವರನ್ನ ಸೋಲಿಸುವ ಮೂಲಕ 18 ವರ್ಷದ ಗುಕೇಶ್ ಅವರು ವಿಶ್ವ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.. ಇದೀಗ ತಮ್ಮ ಗೆಲುವಿನ ಹಿಂದೆ ಪೋಷಕರ ತ್ಯಾಗವನ್ನ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ತಂದೆ-ತಾಯಿಯ ತ್ಯಾಗ ಅಂದಹಾಗೇ, ಡಿ.ಗುಕೇಶ್ ಅವರ ತಂದೆಯ ಹೆಸರು ರಜನಿಕಾಂತ್.. ಇಎನ್‌ಟಿ ಸರ್ಜನ್ ಆಗಿರುವ ರಜನಿಕಾಂತ್ ಅವರು, ಮಗನ ಜತೆ ಚೆಸ್ ಟೂರ್ನಿಮೆಂಟ್‌ಗಳ ಪ್ರವಾಸಕ್ಕೆ ತೆರಳುತ್ತಿದ್ದರು. ತಾಯಿ ಪದ್ಮಕುಮಾರಿ ಅವರು ಮೈಕ್ರೋಬಯಾಲಜಿಸ್ಟ್.. ಮಗನ ಯಶಸ್ವಿಯಲ್ಲಿ ಪದ್ಮಕುಮಾರಿ ಅವ ಪಾತ್ರವೂ ಕೂಡ ದೊಡ್ಡದು.. ಇದೀಗ, ಗುಕೇಶ್ ಅವರಿಗೆ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 11 ಕೋಟಿಯಷ್ಟು ಪ್ರಶಸ್ತಿ ಮೊತ್ತ ಸಿಕ್ಕಿದೆ.. ಈ ಹಣವನ್ನ ಮುಂದೇನು ಮಾಡ್ತೀರಿ ಅಂತ ಗುಕೇಶ್ ಅವ್ರನ್ನ ಪ್ರಶ್ನೆ ಮಾಡಿದಾಗ ಅವರು ತಮ್ಮ ಪೋಷಕರತ್ತ ತೋರಿದ್ದಾರೆ.. “ಇದು ನಿಜಕ್ಕೂ ಕೂಡ ಅತ್ಯಂತ ದೊಡ್ಡ ಮೊತ್ತ.. ನಾನು ಚೆಸ್ ಆಟವನ್ನು ಆರಂಭಿಸಿದಾಗ, ಅದು ನಿಜಕ್ಕೂ ಕೂಡ ಅತ್ಯಂತ ಕಠಿಣವಾದ ನಿರ್ಧಾರವಾಗಿತ್ತು.. ಚೆಸ್ ಆಟವೇ ನನ್ನ ವೃತ್ತಿಯನ್ನಾಗಿ ಪರಿಗಣಿಸಲು ಪೋಷಕರು ಆ ಸಮಯದಲ್ಲಿ ಅತಿದೊಡ್ಡ ಸವಾಲನ್ನು ಸ್ವೀಕರಿಸಿದ್ರು.. ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಕುಟುಂಬಕ್ಕೆ ಅತ್ಯಂತ ಸವಾಲಿನ ಸನ್ನಿವೇಶ ಆಗಿತ್ತು. ಇದೀಗ ಅವರು ನಿರಾಳರಾಗಿದ್ದಾರೆ.. ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಹ ಸ್ಥಿತಿ ನನ್ನ ಪೋಷಕರಿಗೆ ಇಲ್ಲ” ಎಂದು ಗುಕೇಶ್ ಹೇಳಿದ್ದಾರೆ.. ನಾನು ಎಷ್ಟೇ ಕಲಿತರು, ತಿಳಿದಿರೋದು ಸ್ವಲ್ಪವಷ್ಟೇ: ಇನ್ನು ತಮ್ಮ ಚೆಸ್‌ನ ಯಶಸ್ಸಿನ ಬಗ್ಗೆಯೂ ಮಾತನಾಡಿರುವ ಗುಕೇಶ್ ಅವರು, ನಾನು ಇನ್ನೂ ಕೂಡ ಚಿಕ್ಕ ವಯಸ್ಸಿನ ಹುಡುಗ.. ನನಗೆ ಚೆಸ್ ಅಂದರೆ ಇಷ್ಟ.. ಅದೊಂದು ರೀತಿ ನನಗೆ ಇಷ್ಟವಾಗುವ ಅತ್ಯಂತ ನೆಚ್ಚಿನ ಬೊಂಬೆ ಇದ್ದಂತೆ ಎಂದಿದ್ದಾರೆ.. ಇನ್ನು ತಾಯಿ ಪದ್ಮಕುಮಾರಿ ಅವರ ಬಗ್ಗೆ ಮಾತನಾಡಿರುವ ಗುಕೇಶ್ ಅವರು, “ನನ್ನ ತಾಯಿ ಯಾವಾಗಲೂ ಹೇಳುವುದು ಒಂದೇ.. ನೀನು ಯಶಸ್ವಿ ಚೆಸ್ ಪ್ಲೇಯರ್ ಆಗಿರುವ ನನಗೆ ಯಾವಾಗಲೂ ಸಂತೋಷವನ್ನು ನೀಡುತ್ತದೆ.. ಅದಕ್ಕಿಂತಲೂ ಹೆಚ್ಚಾಗಿ ನೀನು ಉತ್ತಮ ವ್ಯಕ್ತಿ ನನಗೆ ಹೆಚ್ಚು ಖುಷಿ ನೀಡುತ್ತದೆ ಎನ್ನುತ್ತಾರೆ” ಎಂದು ತಾಯಿಯ ಬಗ್ಗೆ ಗುಕೇಶ್ ಹೇಳಿದ್ದಾರೆ. ಇನ್ನು ನಾನು ಅತಿ ಹೆಚ್ಚಾಗಿ ತಿಳಿದುಕೊಂಡಾಗಲೆಲ್ಲ ಬಳಿಕ ಯೋಚನೆ ಮಾಡುತ್ತೇನೆ.. ಆಗ ನನಗೆ ಗೊತ್ತಾಗುತ್ತದೆ, ನಾನು ಕಲಿತಿರುವುದು ಸ್ವಲ್ಪವಷ್ಟೇ ಎಂದು ಗುಕೇಶ್ ಹೇಳಿದ್ದಾರೆ.. ಚೆಸ್ ಅನ್ನೋದು ಕೊನೆಯೇ ಇಲ್ಲದಂತಹ ಒಂದು ಸುಂದರವಾದ ಆಟ ಎಂದು ಗುಕೇಶ್ ಬಣ್ಣಿಸಿದ್ದಾರೆ. ಗುಕೇಶ್ ಅವರ ಡಾನ್ಸ್ ವಿಡಿಯೋ ವೈರಲ್ ಇನ್ನು, ವಿಶ್ವ ಚಾಂಪಿಯನ್ ಗುಕೇಶ್ ಅವರು ಸೈಲೆಂಟಾಗೇ ಇರುವ ವಿಡಿಯೋಗಳನ್ನು ಎಲ್ಲರೂ ನೋಡಿದ್ರು. ಆದರೆ, ತಮ್ಮ ಸ್ನೇಹಿತರ ಜತೆ ಗುಕೇಶ್ ಅವರು ಡಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಅವರು, ನಾನು ಗೆಲ್ಲೋದಕ್ಕಿಂತ ಮೊದಲು ಎಲ್ಲ ನನ್ನ ಸ್ನೇಹಿತರು ಕುಣಿದಿದ್ರು. ಆದರೆ ಗೆದ್ದ ಬಳಿಕ ನಾನು ಡಾನ್ಸ್ ಮಾಡಿದೆ ಅಂತ ಹೇಳಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.