NEWS

Mandya: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದರಾಮಯ್ಯ ಚಾಲನೆ; ಸಿಎಂ ಭಾಷಣದ ಹೈಲೈಟ್ಸ್ ಇಲ್ಲಿದೆ

ಸಿಎಂ ಸಿದ್ದರಾಮಯ್ಯ ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ (Mandya) ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಾಲನೆ ನೀಡಿದರು. ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯೆಂದು ಹೆಸರು ಪಡೆದಿರುವ ಹಾಗೂ ಸಕ್ಕರೆ ನಗರಿ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Kannada Sahitya Sammelana 2024 ) ಅತ್ಯಂತ ಅಭಿಮಾನದಿಂದ ಹಾಗೂ ಸಂತೋಷದಿಂದ ಉದ್ಘಾಟಿಸಿದರು. ಶ್ರೀ ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ ಚಂದ್ರ ಶೇಖರ ಕಂಬಾರ, ವೇದಿಕೆಯ ಮೇಲೆ ಇದ್ದರು. ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಚೆಲುವನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ ಹೆ.ಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ‌,ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಹಾಗೂ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: Tumakuru: ರಾಷ್ಟ್ರಕೂಟರ ಅರಸ ಅಮೋಘವರ್ಷನ ಕಾಲದ ಶಿಲಾ ಶಾಸನ ಪತ್ತೆ; ಅಚ್ಚರಿ ಮಾಹಿತಿ ಬಹಿರಂಗ ಕಂಠಪಾಠ ಶಿಕ್ಷಣ ಕಲಿಕೆ ಆಗಬಾರದು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಸಿಎಂ, ಪರಭಾಷಿಕರಿಗೆ ಒಂದೇ ತಿಂಗಳಿಗೆ ಕನ್ನಡ ಕಲಿಸುವ ದಿಟ್ಟತನ ಮಂಡ್ಯ ಜಿಲ್ಲೆಗಿದೆ, ಹೊಸ ತಲೆಮಾರಿನ ಜನತೆ ಕನ್ನಡ ಪ್ರೀತಿ ಮುನ್ನಡೆಸಬೇಕಿದೆ. ಈ ಹಿಂದೆ ಶಿವಪುರದಲ್ಲಿ ಸತ್ಯಾಗ್ರಹ ಹೋರಾಟ, ದಿಟ್ಟತನ ಮರೆಯಲಾಗದು. ಕನ್ನಡ ಅಸ್ಮಿತೆ, ಅಸ್ತಿತ್ವಕ್ಕಾಗಿ ಹೋರಾಡಲು ಕನ್ನಡ ಸಾಹಿತ್ಯ ಸಮ್ಮೇಳನ ಸಹಕಾರಿ. 8 ಜ್ಞಾನಪೀಠ ಪ್ರಶಸ್ತಿ ನಮ್ಮವರಿಗೆ ಸಿಕ್ಕಿದೆ, ಸಮಗ್ರ ಕನ್ನಡ ಸಾಹಿತ್ಯ ಡಿಜಿಟಲೀಕರಣ ಯೋಜನೆ ಆರಂಭಿಸಲಾಗಿದೆ. ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ತರಲಾಗಿದೆ, ಕನ್ನಡದ ಮೊದಲ ಪ್ರಾಶಸ್ತ್ಯ ತರಲು ಮುಂದಾಗಿದೆ. ಸಂಕಷ್ಟದಲ್ಲಿ‌ ಕನ್ನಡ ಭಾಷೆಯೂ ಒಂದು, ಶಿಕ್ಷಣ ಕಲಿಕೆಯಲ್ಲಿ ಕೆಲವೊಂದು‌ ತಪ್ಪು ಆಗುತ್ತಿವೆ. ಬುದ್ಧ, ಗಾಂಧೀಜಿ ಈ ಬಗ್ಗೆ ಇದೇ ಅಭಿಪ್ರಾಯ ನೀಡಿದ್ದಾರೆ. ವೈದಿಕ ಶಿಕ್ಷಣದ ರೀತಿ‌ ಕಂಠಪಾಠ ಶಿಕ್ಷಣ ಕಲಿಕೆ ಆಗಬಾರದು, ಇದು ಯಾರಿಗೂ ಉಪಯೋಗವಾಗುವುದಿಲ್ಲ. ಕಲಿಕೆಯ ಕ್ರಮ ಬದಲಾಗಿದೆ, ಆಡಳಿತದಲ್ಲಿ ಕನ್ನಡ ಬಳಕೆಗೆ ಸರ್ಕಾರ ಬದ್ಧವಾಗಿದೆ. ಈ‌ ಬಗ್ಗೆ ಕಟ್ಟುನಿಟ್ಟಿನಸೂಚನೆನೀಡಲಾಗಿದೆ. ಇದನ್ನೂ ಓದಿ: Bengaluru Airport: ಕೆಂಪೇಗೌಡ ಏರ್​​ಪೋರ್ಟ್​ಗೆ ಮತ್ತೊಂದು ಹಿರಿಮೆ; ಟರ್ಮಿನಲ್ 2ನ 080 ಲಾಂಜ್​​ಗೆ ಪ್ರಶಸ್ತಿ ಸಕ್ಕರೆ ನಾಡು ಮಂಡ್ಯದಲ್ಲಿ ಆಯೋಜಿಸಲಾಗಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನನ್ನ ಮಾತುಗಳು 3/4 #ಕನ್ನಡಸಾಹಿತ್ಯಸಮ್ಮೇಳನ pic.twitter.com/VjdRzbptRD ರಾಷ್ಟ್ರ ಭಾಷೆಯ ಹೆಸರಿನಲ್ಲಿ ಕನ್ನಡ‌ ಭಾಷೆ ಮೇಲೆ‌ ಕಡಗಣನೆ ಸಾಹಿತಿ ಆದವರು ಜನಸಾಮಾನ್ಯರ ನೋವು ನಲಿವು ಪ್ರಸ್ತುತುಪಡಿಸಬೇಕು, ಸಾಹಿತ್ಯ ರಚನೆಯಲ್ಲಿ ತೊಡಗಿದವರು ಪಂಚೇಂದ್ರಿಯರು. ನಾವು ಬದುಕುತ್ತಿರುವ ಕಾಲಘಟ್ಟ ಅತ್ಯಂತ ವಿಷಮಯ, ಮನುಷ್ಯ - ಮನುಷ್ಯರ ನಡುವೆ ಕಂದಕ ಶುರು ಅಗ್ತಿದೆ. ಇಂಥ ಸಂದರ್ಭದಲ್ಲಿ‌ ಸಂಪೂರ್ಣವಾಗಿ ಜನಪರವಾಗಿ ಸಾಹಿತ್ಯ ದಾಖಲಾಗುತ್ತಿಲ್ಲ. ಬದುಕಿಗೆ ಕೊಳ್ಳಿ ಇಟ್ಟವರ ಮಾತು ಕೇಳಬಾರದು, ಸರ್ವ ಧರ್ಮಗಳ‌ಸಾರತಿಳಿಸಬೇಕು. ಮಾಮೂಲಿ ಸಾಹಿತ್ಯ ಸಮ್ಮೇಳನವಾಗೋದು ಬೇಡ, ಮಂಡ್ಯದಲ್ಲಿ‌ ಕೆಲವರು ವಿಷ ಬಿತ್ತುವ ಕೆಲಸ ಮಾಡಿದ್ದರು. ಆದರೆ ಸಕ್ಕರೆ ನಾಡಿನ ಜನತೆ ಇದಕ್ಕೆ ಆಸ್ಪದ ಕೊಡಲಿಲ್ಲ, ಇದಕ್ಕೆ ಮಂಡ್ಯ ಜನತೆಗೆ ನಾನು ಅಭಿನಂದಿಸುತ್ತೇನೆ. ಇತರೆ ಧರ್ಮಗಳ ಕುರಿತು ಸಹಿಷ್ಣುತೆ ಇರಬೇಕು, ಕರ್ನಾಟಕಕ್ಕೆ‌ ಕಂಟಕಗಳಾಗ್ತಿದೆ. ಕೇಂದ್ರ ತೆರಿಗೆ ಹಣ ಕೊಡದೇ ಅನ್ಯಾಯ ಮಾಡ್ತಿದೆ, ನಾಡಿನ ಸಮಗ್ರ ಅಭಿವೃದ್ದಿಗೆ ತೊಂದರೆ ಆಗ್ತಿದೆ. ರಾಷ್ಟ್ರ ಭಾಷೆಯ ಹೆಸರಿನಲ್ಲಿ ಕನ್ನಡ‌ ಭಾಷೆ ಮೇಲೆ‌ ಕಡಗಣನೆ ಆಗ್ತಿದೆ, ಇದನ್ನು ನಾವು ಖಂಡಿಸದೇ ಹೋದರೆ ನಮ್ಮ ಕನ್ನಡ ಭಾಷೆಸಂಕಷ್ಟಬರಲಿದೆ ಎಂದು ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.