NEWS

Health Care: ಎಣ್ಣೆ ಹೊಡೆದ್ರೆ ಶೀತ, ಕೆಮ್ಮು ನಿವಾರಣೆ ಆಗುತ್ತಾ? ಈ ಬಗ್ಗೆ ತಜ್ಞರು ಹೇಳ್ತಿರೋದೇನು?

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಚಳಿಗಾಲದಲ್ಲಿ (Winter) ಅನೇಕ ಮಂದಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುತ್ತಾರೆ. ಮೆಟ್ರೋ (Metro), ಬಸ್‌ಗಳು (Bus) ಮತ್ತು ಸಾರ್ವಜನಿಕ ಸ್ಥಳಗಳಲ್ಲಿ (Public Place) ಜನರು ಕೆಮ್ಮುವುದನ್ನು ನೀವು ಕಾಣಬಹುದು. ಒಮ್ಮೆ ನೆಗಡಿ (Cold) ಬಂದರೆ ಎಷ್ಟೋ ಮಂದಿಗೆ ವಾರಗಳೇ ಕಳೆದರೂ ಗುಣವಾಗುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಮನೆಮದ್ದುಗಳಿವೆ. ಆದರೂ ಕೆಲವರು ಮದ್ಯಪಾನ (Alcohol) ಮಾಡುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ನಿಜಕ್ಕೂ ಆಲ್ಕೋಹಾಲ್ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ ನೋಡಿ. ಇನ್ನೂ ಈ ಬಗ್ಗೆ ನ್ಯೂಸ್​18 ಜೊತೆಗೆ ಮಾತನಾಡಿರುವ, ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಪ್ರಿವೆಂಟಿವ್ ಹೆಲ್ತ್ ಅಂಡ್ ವೆಲ್ ನೆಸ್ ವಿಭಾಗದ ನಿರ್ದೇಶಕಿ ಡಾ.ಸೋನಿಯಾ ರಾವತ್ ಅವರು, ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಸಮಸ್ಯೆ ಸಾಮಾನ್ಯ. ಈ ಸಮಸ್ಯೆ ನಿವಾರಣೆಗೆ ಒಂದಿಷ್ಟು ಔಷಧಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಶೀತ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗುತ್ತದೆ. ವಿಪರೀತ ಶೀತ ಮತ್ತು ಕೆಮ್ಮು ಇದ್ದಾ ಶುಂಠಿ, ಬೆಳ್ಳುಳ್ಳಿ ಮತ್ತು ಬಿಸಿನೀರು ಕುಡಿಯಲು ಸಲಹೆ ನೀಡಲಾಗುತ್ತದೆ. ಈ ಮನೆಮದ್ದುಗಳು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡಬಲ್ಲವು. ಜೊತೆಗೆ ಗಂಟಲು ನೋವು ಕೂಡ ನಿವಾರಿಸುತ್ತದೆ ಎಂದು ಹೇಳಿದ್ದಾರೆ. ಆಲ್ಕೋಹಾಲ್ ಕುಡಿಯುವುದರಿಂದಲೂ ಶೀತ ಮತ್ತು ಕೆಮ್ಮು ಗುಣವಾಗುತ್ತಾ? ಆಲ್ಕೋಹಾಲ್ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಗುಣವಾಗುತ್ತದೆ ಎಂಬ ವಿಚಾರ ಇನ್ನೂ ವೈದ್ಯಕೀಯವಾಗಿ ಸಾಬೀತಾಗಿಲ್ಲ. ಅಲ್ಲದೇ ಮದ್ಯ ಆಲ್ಕೋಹಾಲ್​ ಅಂಶವನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹಾಗಾಗಿ ಶೀತ ಮತ್ತು ಕೆಮ್ಮಿನಿಂದ ಪರಿಹಾರ ಪಡೆಯಬಹುದು ಎಂಬ ಉದ್ದೇಶದಿಂದ ಎಂದಿಗೂ ಮದ್ಯಪಾನ ಮಾಡಬೇಡಿ. ಅದರಲ್ಲೂ ಮದ್ಯಪಾನ ಸೇವಿಸದೇ ಇರುವವರಂತೂ ಮದ್ಯಪಾನ ಮಾಡುವುದಕ್ಕೆ ಮುಂದಾಗಬೇಡಿ. ಅನೇಕ ಮಂದಿ ನೆಗಡಿ ಹಾಗೂ ಶೀತಕ್ಕೆ ಮದ್ಯಪಾನ ಮನೆಮದ್ದು ಎಂದು ತೆಗೆದುಕೊಳ್ಳಲು ಆರಂಭಿಸಿ, ನಂತರ ಅದಕ್ಕೆ ವ್ಯಸನಿಯಾಗುತ್ತಾರೆ. ಆದರೆ ಯಾವುದೇ ಸಮಸ್ಯೆಗಳಿಗೂ ಮದ್ಯಪಾನ ಪರಿಹಾರವಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಇಂತಹ ವದಂತಿಗಳಿಗೆ ಯಾರೂ ಸಹ ಕಿವಿ ಕೊಡಬಾರದು ಎಂದು ವೈದ್ಯೆ ಸೋನಿಯಾ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಹೊಸದಾಗಿ ಮದುವೆ ಆಗಿದ್ಯಾ? ಹಾಗಾದ್ರೆ ತಿಳಿದಿರಲಿ ಈ ಸೀಕ್ರೆಟ್​ಗಳು! ಶೀತ ಮತ್ತು ಕೆಮ್ಮಿನಿಂದ ದೂರವಿರಲು ಏನು ಮಾಡಬೇಕು? ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ತಾಪಮಾನವು ಕಡಿಮೆಯಾಗುತ್ತದೆ. ಶೀತ ಮತ್ತು ಕೆಮ್ಮಿನಂತಹ ವೈರಲ್ ಸೋಂಕುಗಳು ಹೆಚ್ಚಾಗುತ್ತದೆ. ಈ ಸೋಂಕು ಜನರಲ್ಲಿ ವೇಗವಾಗಿ ಹರಡುತ್ತದೆ ಮತ್ತು ಅನೇಕ ಮಂದಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಅದರಲ್ಲೂ ಶೀತ ಹೆಚ್ಚಾದಾಗ ಕೆಲ ಬಾರಿ ಜ್ವರದಿಂದ ಸಾವನ್ನಪ್ಪಿರುವ ಉದಾಹರಣೆಗಳಿವೆ. ಇದನ್ನೂ ಓದಿ: ಹಣ್ಣಷ್ಟೇ ಅಲ್ಲ, ಬಾಳೆ ಹೂವಿನಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು! ಹಾಗಾಗಿ ಚಳಿಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಜನರು ಮನೆಯಿಂದ ಹೊರಗೆ ಹೋಗುವಾಗ ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು ಮತ್ತು ಮಾಸ್ಕ್​ಗಳನ್ನು ಬಳಸಬೇಕು. ಯಾವಾಗಲೂ ಬಿಸಿ, ಬಿಸಿಯಾದ ಆಹಾರವನ್ನೇ ಸೇವಿಸಬೇಕು. ನಿಯಮಿತವಾಗಿ ಸೂರ್ಯನ ಬೆಳಕಿನಲ್ಲಿ 30 ರಿಂದ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯನ್ನು ಮಾಡಬೇಕು. ಈ ಎಲ್ಲಾ ನಿಯಮಗಳನ್ನು ಅನುಸರಿಸಿದ ನಂತರ ಕೂಡ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.