NEWS

CT Ravi: ಎನ್‌ಕೌಂಟರ್ ಮಾಡುವ ಉದ್ದೇಶ, ಕೋರ್ಟ್​ನಲ್ಲಿ ಸಿ ಟಿ ರವಿ ಅಳಲು; ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಸಿಟಿ ರವಿ ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಗ್ಗೆ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧಿತರಾಗಿರುವ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ಅವರ ಜಾಮೀನು ಅರ್ಜಿ ಆದೇಶವನ್ನು ಬೆಳಗಾವಿ (Belagavi) ಜಿಲ್ಲಾ ನ್ಯಾಯಾಲಯ ಕಾಯ್ದಿರಿಸಿದೆ. ಸಿ ಟಿ ರವಿ ಮತ್ತು ಅವರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಿದರು. ಪೊಲೀಸರು ಮಧ್ಯರಾತ್ರಿ ಸವದತ್ತಿ ಬಳಿಯ ಸ್ಟೋನ್ ಕ್ರಷರ್ ಬಳಿ ಕರೆದೊಯ್ದು ಎನ್‌ಕೌಂಟರ್ ಮಾಡುವ ಉದ್ದೇಶ ಹೊಂದಿದ್ದರು ಎಂದು ಸಿ ಟಿ ರವಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸಾರ್ವಜನಿಕವಾಗಿ 20 ವರ್ಷಗಳಿಂದ ಕೆಲಸ ಮಾಡ್ತಿದ್ದೇನೆ. ವಿಧಾನಸೌಧದಲ್ಲಿ ನನ್ನ ಮೇಲೆ ಮೂರು ಸಲ ಅಟ್ಯಾಕ್ ಆಯಿತು. ನನ್ನ ಮೇಲಿನ ಹಲ್ಲೆಗೆ ಸಂಬಂಧ ದೂರು ಕೊಟ್ಟರೂ ಬೆಳಗಾವಿ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇವತ್ತೆ ನಿನ್ನ ಕೊನೆ ಆಗುತ್ತೆ ಎಂದ್ರಾ ಡಿ ಕೆ ಶಿವಕುಮಾರ್? ಸಿ ಟಿ ರವಿ ದೂರಿನಲ್ಲಿದೆ ಶಾಕಿಂಗ್ ವಿಚಾರ! ‘ಸಿನಿಮೀಯ ರೀತಿಯಲ್ಲಿ ಸುತ್ತಾಡಿಸಿದರು’ ಖಾನಾಪುರ ಠಾಣೆಯಲ್ಲಿ ವಕೀಲರ ಭೇಟಿಗೆ ಅವಕಾಶ ನೀಡಲಿಲ್ಲ, ಆರ್‌‌ ಅಶೋಕ, ಚಲವಾದಿ ನಾರಾಯಣಸ್ವಾಮಿ ಬಂದ ಮೇಲೆ ವಕೀಲರ ಭೇಟಿಗೆ ಅವಕಾಶ ನೀಡಿದರು. ರಾತ್ರಿಯಿಡಿ ಸಿನಿಮೀಯ ರೀತಿಯಲ್ಲಿ ಸುತ್ತಾಡಿಸಿದರು. ನನ್ನನ್ನು ಕೊಲ್ಲಲು ಕೊರೆದೊಯ್ಯಲಾಗಿತ್ತು ಎಂಬ ಆತಂಕ ಎದುರಾಯಿತು. ದೇವರ ಮೇಲೆ ಭಾರ ಹಾಕಿ ವಾಹನದಲ್ಲಿ ಕುಳಿತಿದ್ದೆ. ಎಲ್ಲಿಗೆ ಕರೆದೊಯ್ತಿದ್ದೀರಿ ಎಂದು ಕೇಳಿದರೂ ಪೊಲೀಸರು ಹೇಳಲಿಲ್ಲ. ಸಭಾಪತಿ ಚೇಂಬರ್‌ನಲ್ಲಿ ಡಿಕೆಶಿ, ಹೆಬ್ಬಾಳ್ಕರ್ ನನಗೆ ಬೆದರಿಕೆ ಹಾಕಿದರು. ಜೀವನದಲ್ಲಿ ಎಂದೂ ಮರೆಯಬಾರದು ಹಾಗೆ ಮಾಡುತ್ತೇವೆ ಅಂದಿದ್ದರು. ಅವರ ಬೆದರಿಕೆಗೂ ಪೊಲೀಸರು ನಡೆದುಕೊಂಡ ರೀತಿ ಹಾಗೇ ಇತ್ತು ಎಂದಿ ನ್ಯಾಯಾಧೀಶರ ಮುಂದೆ ಹೇಳಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲ್ಲ! ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಗರಂ ಜಾಮೀನು ನೀಡುವಂತೆ ವಾದ ಇನ್ನು ಪ್ರಕಣದಲ್ಲಿ ಸಿ ಟಿ ರವಿ ಅವರಿಗೆ ಜಾಮೀನು ನೀಡುವಂತೆ ಸಿ ಟಿ ರವಿ ಅವರ ಪರ ವಕೀಲ ಎಂ ಬಿ ಜಿರಲಿ ವಾದ ಮಾಡಿದ್ರು. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಪ್ರಕರಣದಲ್ಲಿ ಬೇಲ್ ನೀಡಬಹುದು. ಪರಿಷತ್​ನಲ್ಲಿ ನಡೆದ ಘಟನೆ ಇದು. ಅಲ್ಲಿ ರೆಕಾರ್ಡ್ ಮಾಡುವ ಎಲ್ಲಾ ಅವಕಾಶ ಇರುತ್ತೆ. ಪ್ರಕರಣ ಶಿಕ್ಷೆ ಪ್ರಮಾಣ‌ ಮೂರು ವರ್ಷ ಇದೆ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿಯಲ್ಲಿ ಆರೋಪಿನ್ನು ಸುತ್ತಾಡಿಸಿದ್ದಾರೆ. ಆರೋಪಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ, ಎಂದು ವಕೀಲರು ವಾದಿಸಿದ್ರು. ‘ಸಿ ಟಿ ರವಿ ಬಂಧನವೇ ಅಕ್ರಮ’ ಸಿ ಟಿ ರವಿಗೆ ಸರಿಯಾದ ಊಟ ಸಹ ನೀಡಿಲ್ಲ. ನಾವು ಸರ್ವಾಧಿಕಾರಿ ರಾಜ್ಯದಲ್ಲಿ ಇದ್ದೇವೆ‌. ಸಿ ಟಿ ರವಿ ಬಂಧನವೇ ಅಕ್ರಮ. ಅವರು ಮಾನಸಿಕ, ದೈಹಿಕವಾಗಿ ಒತ್ತಡದಲ್ಲಿ ಇದ್ದಾರೆ‌. ಪಶು ರೀತಿಯಲ್ಲಿ ಅವರನ್ನು ನಡೆಸಿಕೊಂಡಿದ್ದಾರೆ. ರಾತ್ರಿ ಇಡೀ ರವಿಗೆ ಹಿಂಸೆ ನೀಡಲಾಗಿದೆ. ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ತಕ್ಷಣವೇ ಚಿಕಿತ್ಸೆ ಕೊಡಿಸಬೇಕಾಗಿದೆ ಹೀಗಾಗಿ ಜಾಮೀನು ಕೊಡುವಂತೆ ವಕೀಲ ಎಂ ಬಿ ಜಿರಲಿ ಮನವಿ ಮಾಡಿದರು. ಇನ್ನು ಸಿ ಟಿ ರವಿ ಅವರ ಪರ ವಾದ ಆಲಿಸಿದ ನ್ಯಾಯಾಧಿಶೆ ಸ್ಪರ್ಶಾ ಎಂ ಡಿಸೋಜಾ ಅವರು ಜಾಮೀನು ಆದೇಶವನ್ನು ಕಾಯ್ದಿರಿಸಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.