NEWS

Weight Loss: ಈ ರೀತಿ ಹೆಜ್ಜೆ ಹಾಕಿದ್ರೆ ನಿಮ್ಮ ತೂಕ ಬಹಳ ಬೇಗ ಕಡಿಮೆ ಆಗುತ್ತೆ

ವಾಕಿಂಗ್ ದಪ್ಪಗಿರುವರ ಚಿಂತೆ ಏನಪ್ಪಾ ಅಂದ್ರೆ ತೆಳ್ಳಗಾಗುವುದು ಅತ್ಯಂತ ಬೇಗ ಸಣ್ಣಗಾಗಬೇಕು. ಆದರೆ ಅದಕ್ಕೆ ತಕ್ಕನಾದ ದೈಹಿಕ ಕಸರತ್ತು ಮಾಡುವುದು ಕೆಲವರಿಗೆ ಕಷ್ಟ ಇರುತ್ತೆ. ಇನ್ನು ಪಥ್ಯದಂತಹ ವಿಚಾರಗಳನ್ನು ರೂಡಿಸಿಕೊಳ್ಳುವುದು ತುಂಬಾ ತ್ರಾಸವಾಗಿರುತ್ತೆ. ಸದ್ಯ ವೈಟ್ ಲಾಸ್ (Weight Loss) ಮಾಡೋದಕ್ಕೆ ಹತ್ತಾರು ಸೂತ್ರಗಳಿವೆ. ಆದರೆ ಕೆಲವೊಂದು ಕ್ರಮಗಳನ್ನು ಅನುಸರಿಸದೆ ವೇಟ್ ಲಾಸ್ ಮಾಡೋದಕ್ಕೆ ಸಾಧ್ಯನೇ ಇಲ್ಲ. ಆ ಪೈಕಿ ಮೊದಲನೆಯದು ಏನೆಂದರೆ ಅದು ವಾಕಿಂಗ್ (Walking). ಆದರೆ ಕೆಲವರಿಗೆ ವಾಕಿಂಗ್ ಮಾಡೋದೇ ಕಷ್ಟ ಆಗಿರುತ್ತೆ ಯಾವ ರೀತಿ ವಾಕಿಂಗ್ ಮಾಡಿದ್ರೆ ದೇಹದ ತೂಕ ಕಡಿಮೆ ಆಗುತ್ತೆ ಅನ್ನುವಂತಹ ಪ್ರಶ್ನೆಗಳು ಇರುತ್ತೆ. ಅಂತವರ ಪ್ರಶ್ನೆಗೆ ಉತ್ತರವನ್ನ ತಿಳಿಯೋಣ. ಈ ಕೆಳಗಿನ ರೀತಿಗಳಲ್ಲಿ ನೀವು ವಾಕಿಂಗ್ ಮಾಡಿದ್ರೆ ಅತ್ಯಂತ ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಬಹುದು 1. ಬ್ರಿಸ್ಕ್ ವಾಕಿಂಗ್ ಬ್ರಿಸ್ಕ್ ವಾಕಿಂಗ್ ಅನ್ನೋದು ವಾಕಿಂಗ್ ನಲ್ಲಿ ಒಂದು ಅತ್ಯುತ್ತಮ ವಿಧಾನವಾಗಿದೆ.. ಸಾಮಾನ್ಯವಾಗಿ ವಾಕ್ ಮಾಡುವಂಥವರು ಮಾತನಾಡದೆ ಮೌನವಾಗಿ ವಾಕ್ ಮಾಡ್ತಾರೆ. ಆದರೆ ಬ್ರಿಸ್ಕ್ ವಾಕಿಂಗ್ ಹಾಗಲ್ಲ. ನಡೆಯುತ್ತಾನೆ ಮಾತನಾಡಬೇಕು. ತಮಗಿಷ್ಟ ಬಂದ ವಿಚಾರಗಳ ಬಗ್ಗೆ ಮಾತನಾಡುತ್ತಾ ಸಾಗುವಂಥದ್ದು. ಇದರಿಂದ ಹಾರ್ಟ್ ರೇಟ್ ಉತ್ತಮ ಆಗುತ್ತದೆ ಮತ್ತೆ ಹೃದಯದ ಆರೋಗ್ಯವೂ ಕೂಡ ವೃದ್ಧಿಸುತ್ತದೆ, ಇದರ ಜೊತೆಗೆ ದೈಹಿಕವಾಗಿ ಸದೃಢವಾಗುತ್ತವೆ ಹಾಗೆ ದೇಹದಲ್ಲಿ ಇರುವಂತಹ ಕ್ಯಾಲೋರಿಯನ್ನ ಕಡಿಮೆ ಮಾಡಿಕೊಳ್ಳಲು ಇದು ಅತ್ಯಂತ ಸೂಕ್ತವಾಗಿದೆ. 2. ಇಂಟರ್ವಲ್ ವಾಕಿಂಗ್ ಇಂಟರ್ವಲ್ ವಾಕಿಂಗ್ ಅಂದ್ರೆ ಇದೊಂದು ರೀತಿ ನಿಮ್ಮ ನಡಿಗೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸಾಗುವುದು.. ಅಂದ್ರೆ ಆರಂಭದ ಮೊದಲ 30 ಸೆಕೆಂಡ್ ನಿಧಾನವಾಗಿ ಬಳಿಕ ತುಸು ಜೋರಾಗಿ ನಂತರದಲ್ಲಿ ಮತ್ತಷ್ಟು ವೇಗವಾಗಿ ನಡೆಯುವುದು ಎಂದರ್ಥ. ಹೀಗೆ ಮಾಡೋದ್ರಿಂದ ದೇಹದಲ್ಲಿರುವಂತಹ ಮೆಟಬಾಲಿಸಂ ಪ್ರಮಾಣವು ಹೆಚ್ಚಾಗುತ್ತದೆ ಹಾಗೆ ಕ್ಯಾಲರಿ ಬರ್ನ್ ಮಾಡಲು ಕೂಡ ಸಹಕಾರಿಯಾಗುತ್ತದೆ. 3. ಹಿಲ್ ವಾಕಿಂಗ್ ಹೆಸರೇ ಸೂಚಿಸುವಂತೆ ಇದು ಎತ್ತರವಾದ ಪ್ರದೇಶಗಳನ್ನ ಹತ್ತುವುದು. ಈ ರೀತಿಯ ನಡಿಗೆಯಿಂದ ದೇಹದ ಮಾಂಸ ಖಂಡಗಳು ಬಲಶಾಲಿಯಾಗುತ್ತದೆ ಹಾಗೂ ಅತ್ಯಂತ ವೇಗವಾಗಿ ದೇಹದ ತೂಕವನ್ನು ಕಡಿಮೆ ಮಾಡಬಹುದು. ಇದಕ್ಕೆ ಎತ್ತರವಾದ ಪ್ರದೇಶಗಳನ್ನು ಹತ್ತಬೇಕು ಅಂತೇನಿಲ್ಲ. ಸ್ವಲ್ಪ ಎತ್ತರದ ಭೂ ಪ್ರದೇಶಗಳನ್ನ ಹತ್ತುವುದು ಅತ್ಯಂತ ಉತ್ತಮವಾಗಿರುತ್ತದೆ. 4. ತೂಕದ ಜತೆ ವಾಕ್ ಮಾಡುವುದು ಸಾಮಾನ್ಯವಾಗಿ ಜಿಮ್ ಗಳಲ್ಲಿ ಈ ಒಂದು ವಿಧಾನವನ್ನ ಅನುಸರಿಸಲಾಗುತ್ತದೆ. ಅಂದ್ರೆ ನೀವು ಎಷ್ಟು ತೂಕವಿದ್ದಿರೋ ಅದಕ್ಕೆ ತಕ್ಕನಾಗಿ ವೇಯ್ಟ್ ಹಿಡಿದುಕೊಂಡು ವಾಕಿಂಗ್ ಮಾಡುವಂತದ್ದು. ಈ ರೀತಿ ಮಾಡುವುದರಿಂದ ದೇಹದ ತೂಕವು ಪರಿಣಾಮಕಾರಿ ಆಗಿ ಕಡಿಮೆ ಆಗುತ್ತದೆ. 5. ಪವರ್ ವಾಕಿಂಗ್ ಪವರ್ ವಾಕಿಂಗ್ ಅಂದರೆ ಇದು ಸಾಮಾನ್ಯ ನಡೆಯಗಿಂತ ರನ್ನಿಂಗ್ ಮಾಡುವ ವಿಧಾನ. ಇದರಲ್ಲಿ ಗಂಟೆಗೆ 4 ಕಿ.ಮೀ ವೇಗದಲ್ಲಿ ಅಥವಾ ಐದು ಕಿಲೋಮೀಟರ್ ವೇಗದಲ್ಲಿ ರನ್ ಮಾಡಬೇಕು. ಸಾಮಾನ್ಯವಾಗಿ ಮ್ಯಾರಥಾನ್ ಅಂತಲೇ ಇದನ್ನ ನಾವು ಪರಿಗಣಿಸಬಹುದು. 6. ನಾರ್ಡಿಕ್ ವಾಕಿಂಗ್ ಇದು ಕೂಡ ಚಾರಣವನ್ನ ಹತ್ತುವುದು ಬೆಟ್ಟ ಎತ್ತರದ ಪ್ರದೇಶಗಳನ್ನು ನಡಿಗೆಯ ಮೂಲಕ ನಿಧಾನವಾಗಿ ಹತ್ತುವ ವಿಧಾನ ..ಇದರಲ್ಲಿ ಅತ್ಯಂತ ವೇಗವಾಗಿ ತೂಕ ಕರಗಿಸಬಹುದು. ಏಕೆಂದರೆ ಈ ವಿಧಾನದಲ್ಲಿ ದೇಹದ ಪ್ರತಿ ಅಂಗಾಂಗಗಳು ಕೂಡ ಕಸರತ್ತಿಗೆ ಒಳಪಟ್ಟಿರುತ್ತದೆ. 7. ಹಿಮ್ಮುಖವಾಗಿ ನಡಿಗೆ ಹಿಮ್ಮುಖವಾಗಿ ಹೆಜ್ಜೆಯನ್ನ ಹಾಕೋದ್ರಿಂದ ದೇಹದ ಮೇಲೆ ನಿಯಂತ್ರಣವನ್ನು ಸಾಧಿಸಲು ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಸಮತಟ್ಟಾಗಿರುವಂತಹ ರಸ್ತೆಗಳಲ್ಲಿ ಮೈದಾನಗಳಲ್ಲಿ ಹಿಮ್ಮುಖವಾಗಿ ನಡೆಯಬೇಕು. ಇದರಿಂದ ಕೂಡ ದೇಹದ ಕ್ಯಾಲರಿಗಳನ್ನ ಕಡಿಮೆ ಮಾಡಬಹುದು 8. ಸ್ಯಾಂಡ್ ವಾಕಿಂಗ್ ಮರಳಿನ ಮೇಲೆ ನಡೆಯುವಂತಹದ್ದು ಅಥವಾ ಸಮುದ್ರದ ತೀರಗಳಲ್ಲಿ ನಡೆಯುವಂತಹದ್ದು. ಇದನ್ನ ಸಾಮಾನ್ಯವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ನಡೆಯೋದಕ್ಕೆ ಇಷ್ಟಪಡುವವರು ಮಾಡಬೇಕು. ತುಂಬಾ ಕಡಿಮೆ ಕಾಲದಲ್ಲಿ ದೇಹವನ್ನ ಅತ್ಯಂತ ಹೆಚ್ಚಾಗಿ ಶ್ರಮಕ್ಕೆ ಗುರಿ ಪಡಿಸುತ್ತದೆ. ಇದನ್ನೂ ಓದಿ: ಬೆಳಗೆದ್ದು ಮಾಡಬಹುದಾದ ಹೈ-ಪ್ರೊಟೀನ್ ಬ್ರೇಕ್‌ಫಾಸ್ಟ್ ರೆಸಿಪಿಗಳಿವು! ಇದು ಕೂಡ ಕ್ಯಾಲೋರಿ ಬರ್ನ್ ಮಾಡಲು ಅತ್ಯಂತ ಹೆಚ್ಚು ಸಹಕಾರಿಯಾಗುತ್ತದೆ. ಇನ್ನು ತಜ್ಞರು ಹೇಳುವ ಪ್ರಕಾರ ಪ್ರತಿವಾರ ಕನಿಷ್ಠ ಐದು ದಿನ ವಾಕಿಂಗ್ ಮಾಡಬೇಕು ದೈಹಿಕವಾಗಿ ಒಂದಷ್ಟು ಶ್ರಮಗಳನ್ನು ಕೂಡ ವ್ಯಾಯಾಮಗಳನ್ನು ಕೂಡ ಮಾಡಿದರೆ ದೇಹದ ತೂಕವನ್ನು ಅತ್ಯಂತ ವೇಗವಾಗಿ ಮಾಡಬಹುದು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.