NEWS

Abhishek Bachchan: ನಾನು ಕ್ಷಮೆ ಕೇಳ್ಬೇಕು ಅಂತಿದ್ದಾರೆ ಅಭಿಷೇಕ್ ಬಚ್ಚನ್​! ಐಶ್ವರ್ಯಾ ರೈ ಪತಿಯ ಭಾವುಕ ವಿಡಿಯೋ

ನಟ ಅಭಿಷೇಕ್ ಬಚ್ಚನ್ (Actor Abhishek Bachchan) ಸದ್ಯ ಸುದ್ದಿಯಲ್ಲಿದ್ದಾರೆ. ನಟಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ಅವರೊಂದಿಗೆ ವಿಚ್ಛೇದನ (Divorce) ಪಡೆಯಲಿದ್ದಾರೆ ಎಂಬ ರೂಮರ್ಸ್​​ ಹರಿದಾಡ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಚರ್ಚೆ ಜೋರಾಗಿದೆ. ಇದೇ ವೇಳೆ ಅಭಿಷೇಕ್ ಸಿನಿಮಾಗೆ ಅಪ್ಡೇಟ್ ಕೂಡ ಹೊರ ಬೀಳ್ತಿದೆ. ಅಷ್ಟೇ ಅಲ್ಲದೇ ಅಭಿಷೇಕ್ ಬಚ್ಚನ್​ ಎಮೋಷನ್ ವಿಡಿಯೋವೊಂದು ವೈರಲ್ (Video Goes Viral) ಆಗುತ್ತಿದೆ. ‘ನಾನು ಕ್ಷಮೆ ಕೇಳಲು ಬಯಸುತ್ತೇನೆ’ ಎಂದು ಹೇಳುವ ಈ ವಿಡಿಯೋ ಇದೀಗ ಅಸಲಿ ಮ್ಯಾಟರ್ ಏನು ಗೊತ್ತಾ? ಅಭಿಷೇಕ್ ಬಚ್ಚನ್​ ಭಾವುಕ ವಿಡಿಯೋ ವೈರಲ್​! ಡಿವೋರ್ಸ್ ವಿಚಾರವಾಗಿ 3 ತಿಂಗಳಿಂದ ಸುದ್ದಿ ಹರಿದಾಡ್ತಿದ್ರು ಬಚ್ಚನ್ ಫ್ಯಾಮಿಲಿ ಮಂದಿ ಪ್ರತಿಕ್ರಿಯಿಸಿಲ್ಲ. ಇದೀಗ ನಟ ಅಭಿಷೇಕ್ ಬಚ್ಚನ್ ವಿಡಿಯೋವೊಂದು ಹೊರಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಅಭಿಷೇಕ್ ಒಬ್ಬರ ಬಳಿ ಕ್ಷಮೆ ಕೇಳುವ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಅಭಿಷೇಕ್ ಅವರ ಮುಂಬರುವ ಚಿತ್ರ ‘ಐ ವಾಂಟ್ ಟು ಟಾಕ್’ ನ ಟ್ರೈಲರ್ ಆಗಿದೆ. ಈ ಟ್ರೇಲರ್ ನೋಡಿದ ಅಭಿಮಾನಿಗಳು ಜೂನಿಯರ್ ಬಚ್ಚನ್ ಅವರನ್ನು ಕೊಂಡಾಡಿದ್ದು, ವಿಡಿಯೋ ಕೂಡ ಫುಲ್ ಟ್ರೆಂಡ್ ಆಗಿದೆ. ಐ ವಾಂಟ್ ಟು ಟಾಕ್ ಟ್ರೇಲರ್ ಔಟ್! ಈ ಚಿತ್ರದ ಟ್ರೇಲರ್ ಅನ್ನು ಜನ ಮೆಚ್ಚಿಕೊಂಡಿದ್ದಾರೆ. ಶೂಜಿತ್ ಸರ್ಕಾರ್ ಅವರ ಮುಂಬರುವ ಚಿತ್ರ ‘ಐ ವಾಂಟ್ ಟು ಟಾಕ್’ ಟ್ರೈಲರ್ ಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಈ ಚಿತ್ರದಲ್ಲಿ ವಿಶೇಷ ಟೆಕ್ನಾಲಜಿ ಮತ್ತು ಬಿಗ್​ ಆಕ್ಷನ್ ಇಲ್ಲ ಆದ್ರೂ ಚಿತ್ರದ ಟ್ರೇಲರ್​ಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ನಿಮಿಷ 28 ಸೆಕೆಂಡುಗಳಲ್ಲಿ ಈ ಟ್ರೈಲರ್ ಭಾವುಕತೆಯಿಂದ ಕೂಡಿದೆ. ವಿಭಿನ್ನ ಲುಕ್‌ಗಳಲ್ಲಿ ಅಭಿಷೇಕ್​! ಈ ಸಿನಿಮಾದಿಂದ ಅನೇಕ ಜೀವನ ಬದಲಾಯಿಸುವ ಪಾಠ ಸಿಗಲಿದೆ ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಿರುವ ಎಕ್ಸ್‌ಟ್ರಾ ಆರ್ಡಿನರಿ ಫೀಲಿಂಗ್ ಟ್ರೈಲರ್ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಅಭಿಷೇಕ್ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸವಾಲುಗಳನ್ನು ಎದುರಿಸುವ ಮತ್ತು ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅರ್ಜುನ್ ಅವರ ಅಸಾಮಾನ್ಯ ಪ್ರಯಾಣವನ್ನು ಇದು ತೋರಿಸುತ್ತದೆ. ಈ ಸಿನಿಮಾ ಜೀವನವನ್ನೇ ಬದಲಾಯಿಸುವ ಪಾಠವಾಗಲಿದೆ ಎಂಬುದು ಟ್ರೇಲರ್​ನಲ್ಲಿ ಇದೆ. ಇದನ್ನೂ ಓದಿ: Aishwarya Sarja: ಕನ್ನಡವನ್ನು ತಪ್ಪಾಗಿ ಬರೆದ ಐಶ್ವರ್ಯಾ! ಅರ್ಜುನ್ ಸರ್ಜಾ ಮಗಳಿಗೆ ನೆಟ್ಟಿಗರಿಂದ ಕನ್ನಡ ಪಾಠ! ‘ಐ ವಾಂಟ್ ಟು ಟಾಕ್’ ಚಿತ್ರದಲ್ಲಿ ಜಾನಿ ಲಿವರ್, ಜಯಂತ್ ಕೃಪಲಾನಿ ಮತ್ತು ಅಹಲ್ಯಾ ಬಮ್ರು ನಟಿಸಿದ್ದಾರೆ. ಈ ಚಿತ್ರವನ್ನು ರೈಸಿಂಗ್ ಸನ್ ಫಿಲ್ಮ್ಸ್ ಮತ್ತು ಕಿನೋ ವರ್ಕ್ಸ್ ನಿರ್ಮಿಸಿದ್ದು, ಇದು ನವೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.