NEWS

Imane Khelif: ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್​ನಲ್ಲಿ ಚಿನ್ನ ಗೆದ್ದಿದ್ದ ಇಮಾನೆ ಖೆಲೀಫ್​ ಮಹಿಳೆಯಲ್ಲ! ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

ಇಮಾನೆ ಖೆಲೀಫ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಚಿನ್ನದ ಪದಕ (Gold Medal) ಗೆಲ್ಲುವ ಮೂಲಕ ಅಲ್ಜೀರಿಯಾದ ಮಹಿಳಾ ಬಾಕ್ಸರ್ ಇಮಾನೆ ಖೆಲೀಫ್ (Imane Khelif) ಭಾರೀ ಸುದ್ದಿಯಾಗಿದ್ದರು. ಒಲಿಂಪಿಕ್ಸ್ ಸಮಯದಲ್ಲಿ, ಖೆಲೀಫ್ ಮಹಿಳೆಯಲ್ಲ, ಲಿಂಗ ಅರ್ಹತಾ ಪರೀಕ್ಷೆಯಲ್ಲಿ ಸ್ತ್ರೀತ್ವವನ್ನ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹಲವರು ಎದುರಾಳಿಗಳು ಆರೋಪ ಮಾಡಿದ್ದರು. ಆದರೆ ಒಲಿಂಪಿಕ್ಸ್​ ಸಮಿತಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಪರಿಣಾಮ ಆಕೆ ಯಾವುದೆ ಪೈಪೋಟಿ ಇಲ್ಲದೇ ಎಲ್ಲಾ ಪಂದ್ಯಗಳನ್ನು ಸುಲಭವಾಗಿ ಗೆದ್ದು ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದರು. ಚಿನ್ನದ ಪದಕ ಗೆದ್ದರೂ ಇಮಾನೆ ಲಿಂಗತ್ವದ ಬಗ್ಗೆ ಅನುಮಾನಗಳು ಕಾಡುತ್ತಲೇ ಇತ್ತು. ಈ ಅನುಕ್ರಮದಲ್ಲಿಯೇ ಇಮಾನೆ ಖೇಲಿಪ್ ಲಿಂಗ ಗುರುತಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಸೋರಿಕೆಯಾಗಿದೆ. ಇದರಲ್ಲಿ ಆಕೆ ಮಹಿಳೆ ಅಲ್ಲ ಎಂದು ತಿಳಿದುಬಂದಿದೆ. ಇಮಾನ್ ಖೆಲೀಫ್ ಪುರುಷ ಮಾದರಿಯ ಮೈಕಟ್ಟು ಹಾಗೂ ಕ್ಲಿನಿಕಲ್ ಲಕ್ಷಣಗಳನ್ನು ಹೊಂದಿದ್ದಾರೆ ಎಂಬುದು ವರದಿಯಿಂದ ಸ್ಪಷ್ಟವಾಗಿದೆ. ಈ ವರದಿಯನ್ನು ಫ್ರೆಂಚ್ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ. ವರದಿಯಲ್ಲಿ ಏನಿದೆ? ಇಮಾನ್ ಖೆಲೀಫ್​ ಅವರಲ್ಲಿ ಗರ್ಭಾಶಯವೂ ಇಲ್ಲ, ಬದಲಾಗಿ ಪುರುಷ XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಾರೆ ಎಂದು ವೈದ್ಯಕೀಯ ವರದಿ ಬಹಿರಂಗಪಡಿಸಿದೆ. ಇಮಾನ್ ಖೆಲೀಫಾಗೆ ವೃಷಣಗಳು ಮತ್ತು ಆಂತರಿಕ ಶಿಸ್ನವಿದೆ( testicles and a micro-penis) ಎಂದು ವೈದ್ಯಕೀಯ ವರದಿ ಹೇಳಿದೆ. ಆದಾಗ್ಯೂ, ವರದಿಯು ಇಮಾನ್ ಖೆಲೀಫ್ 5-ಆಲ್ಫಾ ರಿಡಕ್ಟೇಸ್ ಕೊರತೆಯನ್ನು ಹೊಂದಿದೆ ಎಂದು ಉಲ್ಲೇಖಿಸಿದೆ, ಇದು ಪುರುಷರಲ್ಲಿ ಮಾತ್ರ ಕಂಡುಬರುವ ಸಮಸ್ಯೆಯಾಗಿದೆ. ಈ ದೋಷವಿರುವ ಪುರುಷರಿಗೆ ಮೀಸೆ ಮತ್ತು ಗಡ್ಡ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ WTC ಫೈನಲ್ ರೇಸ್​! ಆಸ್ಟ್ರೇಲಿಯಾ ಜೊತೆ ಫೈನಲ್ ಪ್ರವೇಶಿಸಲು ಈ 4 ತಂಡಗಳಿಂದ ಸ್ಪರ್ಧೆ! ಪದಕ ವಾಪಸ್ ಪಡೆಯಲು ಹರ್ಭಜನ್ ಒತ್ತಾಯ ಈ ವರದಿಯಲ್ಲಿ ಬಹಿರಂಗವಾಗಿರುವ ಸಂಗತಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕ್ರೀಡಾ ಪ್ರೇಮಿಗಳು ಒಲಿಂಪಿಕ್ ಸಮಿತಿಯನ್ನು ಟೀಕಿಸುತ್ತಿದ್ದಾರೆ. ಆಕೆಯ ಚಿನ್ನದ ಪದಕವನ್ನು ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಆಕೆಯ ಚಿನ್ನವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. 46 ಸೆಕೆಂಡ್​ಗಳಲ್ಲಿ ಪಂದ್ಯ ಗೆದ್ದಿದ್ದ ಖೆಲೀಫ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚೀನಾದ ಮಹಿಳಾ ಬಾಕ್ಸರ್ ಯಾಂಗ್ ಲುಯಿ ವಿರುದ್ಧ ಖೇಲೀಫ್ 5-0 ಅಂತರದಿಂದ ಜಯಗಳಿಸಿ ಚಿನ್ನ ಗೆದ್ದಿದ್ದರು. ಒಂದು ಪಂದ್ಯದಲ್ಲಿ, ಅವರು ತಮ್ಮ ಎದುರಾಳಿಯನ್ನು ಕೇವಲ 46 ಸೆಕೆಂಡುಗಳಲ್ಲಿ ಸೋಲಿಸಿದರು. ಆ ಸಮಯದಲ್ಲಿ, ಸ್ಪರ್ಧಿಗಳು ಖೇಲೀಫ್ ಮಹಿಳೆಯಲ್ಲ ಎಂದು ಆರೋಪಿಸಿದರು. ಆದರೆ ಒಲಂಪಿಕ್‌ ಸಮಿತಿ ತಲೆಕೆಡಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿ ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾ ವಿಶ್ವಬಾಕ್ಸಿಂಗ್​​ ಸಂಸ್ಥೆಯಿಂದ ನಿಷೇಧ ವಿಶ್ವ ಬಾಕ್ಸಿಂಗ್ ಸಂಸ್ಥೆ 2023 ರಿಂದ ಇಮಾನೆ ಖೆಲೀಫ್ ರನ್ನ ನಿಷೇಧಿಸಿದೆ. ಅಲ್ಲದೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಿಂದ ಅನರ್ಹಗೊಂಡಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೂ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಅಂತರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ​​ಕೂಡ ಖಲೀಫ್​ಳನ್ನ ಮಹಿಳೆ ಎಂದು ಹೇಳುವ ಮೂಲಕ ಒಲಿಂಪಿಕ್ಸ್‌ಗೆ ಅನುಮತಿ ನೀಡಿತು. ಇತ್ತೀಚೆಗಷ್ಟೇ ಬಂದಿರುವ ವರದಿಯಲ್ಲಿ ಅದು ಪುರುಷ ಎಂದು ತಿಳಿದು ಬಂದಿದ್ದು, ಚಿನ್ನದ ಪದಕವನ್ನು ವಾಪಸ್ ಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.