NEWS

Guru Prasad: ಡೈರೆಕ್ಟರ್ ಗುರುಪ್ರಸಾದ್ ಸಾವಿನ ಸುತ್ತ ಅನುಮಾನ ಹುತ್ತ! ಬಯಲಾಯ್ತು ಸ್ಫೋಟಕ ಸತ್ಯ!

ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾ ನಿರ್ದೇಶಕ ಗುರುಪ್ರಸಾದ್ (Guru Prasad) ನಿಧನದ ಸುದ್ದಿ ಇಡೀ ಸ್ಯಾಂಡಲ್​ವುಡ್​ನನ್ನೇ (Sandalwood) ಬೆಚ್ಚಿಬೀಳಿಸಿತ್ತು. ಗುರುಪ್ರಸಾದ್​ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ರಿವಾ ಕ್ಲಬ್ ಹೌಸ್ ಅಪಾರ್ಟ್​ಮೆಂಟ್​ (Club House Apartment) ನಲ್ಲಿ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು ಎನ್ನಲಾಗಿದೆ. ನಿರ್ದೇಶಕನ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಲಾಗ್ತಿದೆ. ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆ ಹಾಕ್ತಿದ್ದಾರೆ. ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್​! ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೇ ಗುರು ಪ್ರಸಾದ್​ ಹಗ್ಗ ಹಾಗೂ ಕರ್ಟನ್ ಖರೀದಿಸಿದ್ದರು ಎಂಬ ಮಾಹಿತಿಯು ಪೊಲೀಸ್ ತನಿಖೆಯಿಂದ ಬಯಲಾಗಿದೆ ಎನ್ನಲಾಗ್ತಿದೆ. ಗುರುಪ್ರಸಾದ್​ ಸಾವಿನ ಸುತ್ತ ಹಲವು ಅನುಮಾನ! ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲ ವಿಚಾರಗಳು ಬಹಿರಂಗವಾಗಿದೆ. ನಿರ್ದೇಶಕ ಗುರುಪ್ರಸಾದ್​ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದೆ. ಕೆಲ ದಿನಗಳ ಹಿಂದೆಯೇ ಗುರುಪ್ರಸಾದ್ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗ್ತಿದ್ದು, ನವೆಂಬರ್ 3 ಭಾನುವಾರದಂದು ವಿಷಯ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರು ಕೆಲ ಅಂಶಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗ್ತಿದೆ. ಕಿಟಕಿಗಳಿಗೆ ಕರ್ಟನ್ ಹಾಕಿದ ನಿರ್ದೇಶಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ದೇಶಕ ಗುರುಪ್ರಸಾದ್ ನಿರ್ಧರಿಸಿದ್ರು ಎನ್ನಲಾಗ್ತಿದೆ. ಅದಕ್ಕಾಗಿಯೇ ಹೊಸದಾಗಿ ಹಗ್ಗ ಖರೀದಿ ಮಾಡಿದ್ದರು ಎನ್ನಲಾಗ್ತಿದೆ. ಹಗ್ಗದ ಜೊತೆ ಕರ್ಟನ್ ಕೂಡ ಖರೀದಿ ಮಾಡಿದ್ರಂತೆ. ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ತಂದ ಕರ್ಟನ್‌ ಗಳನ್ನು ಹಾಕಿ ಕವರ್ ಮಾಡಿದ್ರು ಎನ್ನಲಾಗ್ತಿದೆ. ಆತ್ಮಹತ್ಯೆಕೆ ಶರಣಾದ ಗುರುಪ್ರಸಾದ್​! ಹಗ್ಗ ತಂದು ಕರ್ಟನ್​ ಹಾಕಿದ ಬಳಿಕ ಮನೆಯ ಒಳಗಿನಿಂದಲೇ ಲಾಕ್​ ಮಾಡಿಕೊಂಡು ದಿವಾನ್ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎನ್ನಲಾಗ್ತಿದೆ. ಇದನ್ನೂ ಓದಿ: Guruprasad: 10 ವರ್ಷಗಳಿಂದ ಅದಕ್ಕೆ ಟ್ಯಾಬ್ಲೆಟ್‌ ತಗೋತಿದ್ರು! ಗುರು ಪ್ರಸಾದ್‌‌ ನೆನೆದು ಖ್ಯಾತ ಸಂಗೀತ ನಿರ್ದೇಶಕ ಭಾವುಕ! ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡ ಪೊಲೀಸರು ಗುರುಪ್ರಸಾದ್ ಶವ ಪತ್ತೆಯಾದ ಫ್ಲ್ಯಾಟ್​ನಲ್ಲಿದ್ದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುಪ್ರಸಾದ್​ ಅವರ ನಾಲ್ಕು ಮೊಬೈಲ್ , ಟ್ಯಾಬ್ಲೆಟ್ ​ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಫೋನುಗಳನ್ನು ಎಫ್​ಎಸ್​ಎಲ್ ಗೆ ಕಳಿಸಲಾಗಿದ್ದು, ಡಾಟಾ ರಿಟ್ರೀವ್ ಮಾಡಲು ಸೂಚಿಸಿದ್ದಾರೆ ಎನ್ನಲಾಗ್ತಿದೆ. ಅಕ್ಟೋಬರ್ 26ರಂದು ವಾಟ್ಸ್‌‌ಆ್ಯಪ್‌‌‌ ಗ್ರೂಪ್‌‌‌‌‌‌ನಲ್ಲಿ ಗುರು ಪ್ರಸಾದ್ ಮೇಸೇಜ್ ಮಾಡಿದ್ರಂತೆ. ನನಗೆ ಬಿಪಿ ಸ್ವಲ್ಪ ಪ್ಲಕ್ಚುಯೇಟ್ ಆಗ್ತಿದೆ 31ಕ್ಕೆ ಎದ್ದೇಳು ಮಂಜುನಾಥ 2 ಅಪ್ಡೇಟ್ ಮಾಡ್ತಿನಿ ಅಂತ ಹೇಳಿದ್ದರು. ಗುರು ಪ್ರಸಾದ್ ಡಿಪ್ರೆಶನ್ ಗೆ ಹೋಗಿದ್ರು ಅದ್ರೆ ಜೀವನ ಹಾಳು ಮಾಡಿಕೊಳ್ಳುವಷ್ಟಲ್ಲ. ಕಳೆದ 10 ವರ್ಷಗಳಿಂದ ಗುರುಪ್ರಸಾದ್ ಡಿಪ್ರೆಶನ್‌ಗೆ ಟ್ಯಾಬ್ಲೆಟ್ ತಗೋತಿದ್ರು ಎಂದು ಸಂಗೀತಾ ನಿರ್ದೇಶಕರೊಬ್ಬರು ಹೇಳಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.