NEWS

U19 Asia Cup Final: ಫೈನಲ್​ನಲ್ಲಿ ಮುಗ್ಗರಿಸಿದ ಭಾರತ ಕಿರಿಯರ ತಂಡ! ಸತತ 2ನೇ ಬಾರಿಗೆ ಏಷ್ಯಾಕಪ್ ಗೆದ್ದ ಬಾಂಗ್ಲಾದೇಶ

ಭಾರತ vs ಬಾಂಗ್ಲಾದೇಶ ಅಂಡರ್-19 ಏಷ್ಯಾ ಕಪ್ 2024 (U19 Asia cup final) ರ ಫೈನಲ್‌ನಲ್ಲಿ ಬಾಂಗ್ಲಾದೇಶ (India U19 vs Bangladesh U19) ತಂಡ 59 ರನ್‌ಗಳಿಂದ ಭಾರತವನ್ನು ಮಣಿಸುವ ಮೂಲಕ ಸತತ 2ನೇ ಬಾರಿ ಏಷ್ಯಾದ ಚಾಂಪಿಯನ್ ಆಗಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.1 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಈ ಸಾಧಾರಣ ಮೊತ್ತವನ್ನ ಬೆನ್ನಟ್ಟುವಲ್ಲಿ ಯಂಗ್ ಇಂಡಿಯಾ ವಿಫಲವಾಯಿತು. ಕಳೆದ 2 ಪಂದ್ಯಗಳಲ್ಲಿ ಸತತ ಸೂಪರ್ ಬ್ಯಾಟಿಂಗ್ ಮೂಲಕ ಗೆಲುವು ಪಡೆದಿದ್ದ ಟೀಮ್ ಇಂಡಿಯಾ, ಫೈನಲ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಬೌಲಿಂಗ್​ನಲ್ಲಿ ಮಿಂಚಿದ ಭಾರತ ಟಾಸ್​ ಗೆದ್ದ ಭಾರತ ತಂಡ ನಿರೀಕ್ಷೆಯಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕಳೆದ ಎರಡು ಪಂದ್ಯಗಳಲ್ಲಿ ಗೆದ್ದಿದ್ದರಿಂದ ಈ ಪಂದ್ಯದಲ್ಲೂ ಚೇಸಿಂಗ್ ಮಾಡಲು ನಿರ್ಧರಿಸಿತು. ಬಾಂಗ್ಲಾದೇಶ ಆರಂಭಿಕ ಆಘಾತ ಅನುಭಿಸಿತು. 66 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆದರೆ ಮೊಹಮ್ಮದ್ ಶಿಹಾಬ್ ಜೇಮ್ಸ್ (40) ಮತ್ತು ಫರೀದ್ ಹಸನ್ ಫೈಸಲ್ (39) ಹಾಗೂ ಮೊಹ್ಮಮದ್ ರಿಜ್ವಾನ್ ಹಸನ್​ (40) ಭಾರತೀಯ ಬೌಲರ್​ಗಳನ್ನ ಎದುರಿಸಿ ಅಲ್ಪಮೊತ್ತಕ್ಕೆ ಆಲೌಟ್ ಆಗುವುದರಿಂದ ತಪ್ಪಿಸಿದರು. ಈ ಮೂವರ ಪ್ರದರ್ಶನದಿಂದ ಬಾಂಗ್ಲಾದೇಶ 49.1 ಓವರ್​ಗಳಲ್ಲಿ 198ರನ್​ಗಳಿಸಿತ್ತು. ಭಾರತೀಯ ಬೌಲರ್‌ಗಳ ಪೈಕಿ ಯುಧಾಜಿತ್ ಗುಹಾ, ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ ಎರಡು ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ, ಕೆಪಿ ಕಾರ್ತಿಕೇಯ ಮತ್ತು ಆಯುಷ್ ಮ್ಹಾತ್ರೆ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಅಡಿಲೇಡ್​ ಟೆಸ್ಟ್​ನಲ್ಲಿ ಸೋಲು! ಧೋನಿ-ಕೊಹ್ಲಿ ಜೊತೆಗೆ ಅನಗತ್ಯ ದಾಖಲೆ ಪಟ್ಟಿ ಸೇರಿದ ರೋಹಿತ್ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಆ ಬಳಿಕ 199 ರನ್‌ಗಳ ಸಣ್ಣ ಗುರಿ ಬೆನ್ನತ್ತಲು ಅಖಾಡಕ್ಕಿಳಿದ ಭಾರತ ಆರಂಭದಿಂದಲೇ ಆಘಾತ ಅನುಭವಿಸಿತು. ನಾಯಕ ಮೊಹಮ್ಮದ್ ಅಮನ್ 26 ರನ್​ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಸಿಡಿಲಬ್ಬರದ ಇನ್ನಿಂಗ್ಸ್ ಆಡಿದ್ದ ಭಾರತದ ಆರಂಭಿಕರಾದ ಆಯುಷ್ ಮಾತ್ರೆ (1) ಮತ್ತು ವೈಭವ್ ಸೂರ್ಯವಂಶಿ (9) ದಯನೀಯವಾಗಿ ವಿಫಲರಾದರು. ಕನ್ನಡಿಗ ಕೆಪಿ ಕಾರ್ತಿಕೇಯ (21), ಆಂಡ್ರೆ ಸಿದ್ಧಾರ್ಥ್ (20), ಹಾರ್ದಿಕ್ ರಾಜ್ (24) ಸ್ವಲ್ಪ ಸಮಯ ಬ್ಯಾಟಿಂಗ್ ಮಾಡಿ ಚೇತರಿಕೆ ನೀಡಿದರಾದರೂ ಇವರ ಆಟ ಗೆಲುವಿಗೆ ಸಾಕಾಗಲಿಲ್ಲ. ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಬಾಂಗ್ಲಾದೇಶ ದೊಡ್ಡ ಜೊತೆಯಾ ನೀಡಲು ವಿಫಲವಾದ ಟೀಮ್ ಇಂಡಿಯಾ ಕ 35.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 139ರನ್​ಗಳಿಸಿ 59ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಸತತ 2ನೇ ಬಾರಿಗೆ ಏಷ್ಯಾಕಪ್ ತನ್ನದಾಗಿಸಿಕೊಂಡಿತು. ಭಾರತವನ್ನ (8) ಹೊರೆತುಪಡಿಸಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎನಿಸಿಕೊಂಡಿತು. ಬಾಂಗ್ಲಾದೇಶದ ಪರ ಅಜೀಜುಲ್ ಹಕೀಮ್ ತಮೀಮ್ (3/8), ಇಕ್ಬಾಲ್ ಹುಸೇನ್ ಎಮಾನ್ (3/24), ಅಲ್ ಫಹಾದ್ (2/34), ಮಾರುಫ್ ಮೃದಾ (1/36), ರಿಜಾನ್ ಹೊಸೈನ್ (1/14) ಅದ್ಭುತವಾಗಿ ಬೌಲಿಂಗ್ ಮಾಡಿ ತಂಡ ಚಾಂಪಿಯನ್​ ಮಾಡುವಲ್ಲಿ ಸಫಲರಾದರು. ಇದನ್ನೂ ಓದಿ: India vs Australia: ಒಂದೇ ದಿನ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧವೇ 2 ಹೀನಾಯ ಸೋಲು! ಒಂದೇ ದಿನ ಭಾರತಕ್ಕೆ 3 ಸೋಲು ಭಾನುವಾರ ಡಿಸೆಂಬರ್ 8 ಭಾರತದ ಪಾಲಿಗೆ ಕರಾಳ ದಿನವಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಸೀನಿಯರ್ ಟೀಮ್ ಟೆಸ್ಟ್​ನಲ್ಲಿ 10 ವಿಕೆಟ್​ಗಳಿಂದ ಸೋತರೆ, ಮಹಿಳಾ ತಂಡ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 122ರನ್​ಗಳಿಂದ ಸೋಲು ಕಂಡಿತು. ಇದೀಗ ಏಷ್ಯಾಕಪ್ ಪೈನಲ್​ನಲ್ಲಿ ಭಾರತ ಕಿರಿಯರ ತಂಡ ಕೂಡ ಸೋಲು ಕಂಡಿದೆ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.