NEWS

ದರ್ಶನ್ ಅರೆಸ್ಟ್; 1 ವರ್ಷದ ಹಿಂದೆ ಮದುವೆಯಾಗಿದ್ದ ಕೊಲೆಯಾದ ದುರ್ದೈವಿ, ಹೆಂಡತಿ 5 ತಿಂಗಳ ಗರ್ಭಿಣಿ!

ದರ್ಶನ್ ಮತ್ತು ಪವಿತ್ರಾ ಗೌಡ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಬಂಧನವಾಗಿದ್ದು, (Actor Darshan Arrested) ಘಟನೆಯ ಒಂದೊಂದೇ ಮಾಹಿತಿ ಇದೀಗ ಎಳೆ ಎಳೆಯಾಗಿ ಹೊರಬೀಳುತ್ತಿದೆ. ಚಿತ್ರದುರ್ಗ ನಗರದ VRS ಬಡಾವಣೆಯ ರೇಣುಕಾ ಸ್ವಾಮಿ ಅವರು ಕಳೆದ 1 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಕಳೆದ 3-4 ವರ್ಷಗಳಿಂದ ಖಾಸಗಿ ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೇಣುಕಾ ಸ್ವಾಮಿ ಪತ್ನಿ ಸಹನಾ ಸದ್ಯ 5 ತಿಂಗಳ ಗರ್ಭಿಣಿಯಾಗಿದ್ದು, ಪತಿಯ ಹತ್ಯೆ ವಿಚಾರ ಇನ್ನೂ ತಿಳಿದಿಲ್ಲ. ಶನಿವಾರ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ತೆರಳಿದ್ದು, ಅವರ ಬೈಕ್ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ಪತ್ತೆಯಾಗಿತ್ತು. ನಿನ್ನೆ ಮಧ್ಯಾಹ್ನ ಕಾಮಾಕ್ಷಿಪಾಳ್ಯ ಪೊಲೀಸರು ಪೋಷಕರಿಗೆ ಕರೆ ಮಾಡಿದ್ದರು. ಏನಿದು ಪ್ರಕರಣ? ಕೊಲೆ ಪ್ರಕರಣವೊಂದರಲ್ಲಿ ನಟ ದರ್ಶನ್‌ರನ್ನು ಪೊಲೀಸರು ಇಂದು ಮುಂಜಾನೆ ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ. ನಟ ದರ್ಶನ್ ಬಂಧನ ಇಡೀ ಸ್ಯಾಂಡಲ್‌ವುಡ್ ಅನ್ನೇ ಬೆಚ್ಚಿ ಬೀಳಿಸಿದ್ದು, ಆದರೆ ಈ ಕೊಲೆ ಪ್ರಕರಣದ ಕಾರಣ ಮಾತ್ರ ಜನರನ್ನು ಬೆಚ್ಚಿ ಬೀಳಿಸಿದೆ.ಮಾಹಿತಿ ಪ್ರಕಾರ ಮೃತ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿರೋ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಆ ಬಳಿಕ ಆರ್ ಆರ್ ನಗರದಿಂದ ಕಾಮಾಕ್ಷಿಪಾಳ್ಯಕ್ಕೆ ತಂದು ಮೃತದೇಹವನ್ನು ಮೋರಿಗೆ ಎಸೆದಿದ್ದಾರೆ. ನಿನ್ನೆ‌ ಬೆಳಗ್ಗೆ ಮೃತದೇಹ ಸಿಕ್ಕಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಮೊದಲು ಆತ್ಮಹತ್ಯೆ ಎಂಬ ಶಂಕೆ ಆರಂಭದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನದ್ದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಊಹಿಸಲಾಗಿದ್ದು, ಆನಂತರ ಕೂಲಂಕುಶವಾಗಿ ತನಿಖೆ ನಡೆಸಿದಾಗ ಇದೊಂದು ಕೊಲೆ ಎಂದು ತಿಳಿದು ಬಂದಿದೆ. ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದರ ಹಿಂದೆ ಇರುವವರನ್ನು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: Actor Darshan Arrested: ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಹಾಕಿದ್ದೇ ತಪ್ಪಾಯ್ತು! ನಟ ದರ್ಶನ್ ಸಮ್ಮುಖದಲ್ಲೇ ಮರ್ಮಾಂಗಕ್ಕೆ ಹೊಡೆದು ಕೊಲೆ! ದರ್ಶನ್ ಕರಿಯರ್‌ನ ವಿವಾದಗಳ ಸರಣಿ ಪತ್ನಿ ಮೇಲೆ ಹಲ್ಲೆ 2011 ರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ರು. ಈ ವೇಳೆ ಜೈಲಿಗೂ ಹೋಗಿ ಬಂದಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು. ಸಹ ನಟನ ಮೇಲೆ ಹಲ್ಲೆ 2019 ರಲ್ಲಿ ಯಜಮಾನ ಸೆಟ್ ನಲ್ಲಿ ಸಹನಟನ ಮೇಲೆ ಹಲ್ಲೆ ಮಾಡಿದ್ರು. ಆದರೆ ಈ ಬಗ್ಗೆ ದೂರು ದಾಖಲಾಗಿರಲಿಲ್ಲ. ಉಮಾಪತಿ-ದರ್ಶನ್ ವಿವಾದ ಶ್ರೀನಿವಾಸ್, ತಮ್ಮ ಹೆಸರು ಬಳಸಿಕೊಂಡು 25 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಯತ್ನಿಸಿರೋ ಆರೋಪ ಕೇಳಿಬಂದಿತ್ತು. ಈ ಬಗ್ಗೆ ದರ್ಶನ್ ದೂರು ದಾಖಲಿಸಿದ್ದರು. ಈ ವಿಚಾರವನ್ನ ಉಮಾಪತಿ ತಳ್ಳಿ ಹಾಕಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.