NEWS

Bellary: ಬಾಣಂತಿಯರ ಸರಣಿ ಸಾವು ಪ್ರಕರಣ! ಸರಕಾರ ಕಾಯುತ್ತಿದ್ದ ಐವಿ ಫ್ಲೂಯಿಡ್ ವರದಿ ನಾಳೆ ಬಿಡುಗಡೆ

ಬಿಮ್ಸ್‌ ಆಸ್ಪತ್ರೆ ಬೆಂಗಳೂರು: ರಾಜ್ಯದಲ್ಲಿ ಬಳ್ಳಾರಿ (Bellary) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸರಣಿ ಸಾವು (Serial death) ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಒಂದು ತಿಂಗಳ ಅಂತರದಲ್ಲಿ 6 ಬಾಣಂತಿಯರು ಸಾವನ್ನಪ್ಪಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಬಾಣಂತಿಯರಿಗೆ ನೀಡಿದ್ದ ಐವಿ ಫ್ಲೂಯಿಡ್ ಮಾದರಿಯನ್ನು ಪಡೆದಿದ್ದರು. ಈ ಐವಿ ಫ್ಲೂಯಿಡ್ ಮಾದರಿಯ ವರದಿ ನಾಳೆ ಬರಲಿದೆ. ನಾಳೆ ಬರಲಿದೆ ವರದಿ ಐವಿ ಫ್ಲೂಯಿಡ್ ಮಾದರಿಯನ್ನು ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಸಂಬಂಧ ಡಿಸೆಂಬರ್ 9ರಂದು ವರದಿ ನೀಡೊದಾಗಿ ಮಾಹಿತಿ ತಿಳಿದುಬಂದಿದೆ. ಈ ವರದಿಗಾಗಿ ಸರಕಾರ ಕಾಯುತ್ತಿದ್ದು, ವರದಿಯಲ್ಲಿ ಐವಿ ಫ್ಲೂಯಿಡ್‌ನಲ್ಲಿ ಅಪಾಯಕಾರಿ ಅಂಶವಿದಿಯಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇದು ಯಾಕೆ ರಿಯಾಕ್ಷನ್ ಆಗಿದೆ ಎಂಬ ಅಂಶ ನಾಳೆ ತಿಳಿಯಲಿದೆ. ಡಾ. ಸವಿತಾ ನೇತೃತ್ವದ ಸಮಿತಿ ನೀಡಿದ್ದ ವರದಿ ಆಧರಿಸಿ ಫ್ಲೂಯಿಡ್ ಮಾದರಿ ಪಡೆಯಲಾಗಿತ್ತು. ಇದೀಗ ನಾಳೆ ಈ ವರದಿ ಬರಲಿದೆ. ಆಸ್ಪತ್ರೆ ತಲಾಷ್ ನಡೆಸಿದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ತಂಡವಾಗಿರುವ ಅಧಿಕಾರಿಗಳು ಓಪಿಡಿ, ಡೆಲಿವರಿ ವಿಭಾಗ, ಡ್ರಗ್ ಶೇಖರಣೆ ವಿಭಾಗದಲ್ಲಿ ತಲಾಷ್ ನಡೆಸಿದ್ದಾರೆ. ಆಸ್ಪತ್ರೆ ಮುಖ್ಯಸ್ಥರಿಗೆ ಸರ್ಚ್ ವಾರೆಂಟ್ ತೋರಿಸಿದ ಅಧಿಕಾರಿಗಳು ನೇರವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಾರ್ವಜನಿಕ ದೂರಿನ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆಸ್ಪತ್ರೆಯಲ್ಲಿ ಅವ್ಯವಸ್ಥೆ ಹಿನ್ನೆಲೆ ಪ್ರತಿ ವಿಭಾಗದಲ್ಲೂ ತಲಾಷ್ ನಡೆಸಿದ್ದಾರೆ. ಇದನ್ನೂ ಓದಿ: Winter Session: ನಾಳೆ ಭ್ರಷ್ಟ ಸರಕಾರದ ಚಳಿ ಬಿಡಿಸುವ ಅಧಿವೇಶನ! ಕಾಂಗ್ರೆಸ್‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ ಲೋಕಾಯುಕ್ತ ಅಧಿಕಾರಿಗಳ ದಾಳಿ ಬಾಣಂತಿಯರ ಸರಣಿ ಸಾವು ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ವಸಂತ ಕುಮಾರ್ ಹಾಗೂ ಇನ್ಸ್​ಪೆಕ್ಟರ್ ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಒಟ್ಟು 15 ಅಧಿಕಾರಿಗಳ ತಂಡ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣದ ಕುರಿತು ದಿನೇಶ್‌ ಗುಂಡೂರಾವ್‌ ಮಾತನಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ಥೆ ಸರಿಪಡಿಸಲು ಪುಡ್ ಅಂಡ್ ಡ್ರಗ್ ಕಂಟ್ರೋಲ್ ಗೆ ಐ.ಎ.ಎಸ್ ಅಧಿಕಾರಿ ನೇಮಿಸುತ್ತೇವೆ. ಮಹಿಳೆಯರ ಸಾವಿಗೆ ಕಾರಣವೇನು? ಸಾವಿನ ಕುರಿತು ಆಡಿಟ್ ಮಾಡಿಸ್ತೇವೆ. ಮಹಿಳೆಯರ ಸಾವಿನ ತನಿಖೆಗಾಗಿ ಆರೋಗ್ಯ ಇಲಾಖೆಯ ಸಮಿತಿ ರಚನೆ ಮಾಡ್ತೇವೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಔಷಧಿ ಖರೀದಿ ಮಾಡಿಲ್ಲ ಇನ್ನು ಬ್ಯಾನ್ ಮಾಡಿರೊ ಔಷಧಿ ಖರೀದಿಸಲಾಗಿದೆ ಎಂಬ ಆರ್ ಅಶೋಕ್ ಹೇಳಿಕೆಗೆ ಗುಂಡೂರಾವ್‌ ತಿರುಗೇಟು ನೀಡಿದ್ದು, ನಾವು ಯಾವುದೇ ಔಷಧಿ ಖರೀದಿ ಮಾಡಿಲ್ಲ. ಆರ್ ಅಶೋಕ್‌ಗೆ ಮಾಹಿತಿಯಿಲ್ಲ. 22 ವಿವಿಧ ಔಷಧಿ ತಪಾಸಣೆ ನಡೆಸಿದಾಗ ರಾಜ್ಯದಲ್ಲಿ ಪೇಲ್ ಆದರು. ಕೇಂದ್ರದ ಲ್ಯಾಬ್ ನಲ್ಲಿ ಔಷಧಿ ಪಾಸ್ ಆಗಿದೆ. ಏಪ್ರಿಲ್‌ ನಿಂದ ನವೆಂಬರ್ ವರೆಗೂ 2 ಸಾವಿರ ಹೆರಿಗೆ ಆಗಿದೆ. ಯಾರೂ ಸತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಸಾವು ಸಂಭವಿಸಿದ ನಂತರ ನಾವು ತನಿಖೆ ನಡೆಸಿದ್ದೇವೆ. ಮಹಿಳೆಯರ ಸಾವಿನಲ್ಲಿ ವೈದ್ಯರ ಲೋಪವಿಲ್ಲ, ಬೇರೇನೊ ಅನುಮಾನ ಇದೆ ಎಂದು ಹೇಳಿದ್ದಾರೆ. (ವರದಿ: ಹಂಸ ಶ್ಯಾಮಲ, ನ್ಯೂಸ್‌ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.