NEWS

Rohit Sharma: ಆ ಕೆಲಸ ಸಾಧ್ಯವಾದ್ರೆ ಮಾತ್ರ ಆತ ಭಾರತಕ್ಕಾಗಿ ಆಡಬಹುದು! ಶಮಿ ಕಮ್​ಬ್ಯಾಕ್​ಗೆ ರೋಹಿತ್ ಕಂಡೀಷನ್

ರೋಹಿತ್ -ಶಮಿ ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಭಾಗವಾಗಿ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತವು ಆಸ್ಟ್ರೇಲಿಯಾ (India vs Australia) ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ ಆಸೀಸ್​ 1-1ರಲ್ಲಿ ಸರಣಿ ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾವ ಬೀರಿದರೂ, ಒಟ್ಟಾರೆ ಭಾರತ ಬೌಲಿಂಗ್‌ ಸಂಪೂರ್ಣ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೋಲಿನ ನಂತರ ಮಹತ್ವದ ಹೇಳಿಕೆ ನೀಡಿದ್ದಾರೆ. ಮೊಹಮ್ಮದ್ ಶಮಿಗಾಗಿ ಭಾರತ ತಂಡದ ಬಾಗಿಲು ಸದಾ ತೆರೆದಿದೆ ಎಂದು ರೋಹಿತ್ ಹೇಳಿದ್ದಾರೆ. ಮೊಹಮ್ಮದ್ ಶಮಿ ಕಳೆದ ವರ್ಷ ಪಾದದ ಗಾಯದಿಂದ ಭಾರತ ತಂಡದಿಂದ ದೂರ ಇದ್ದಾರೆ. ಅವರು ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ODI ವಿಶ್ವಕಪ್ 2023-ಫೈನಲ್‌ನಲ್ಲಿ ಆಡಿದ್ದರು. ಅದರ ನಂತರ, ಬಲಗೈ ವೇಗಿ ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸುಮಾರು ಒಂದು ವರ್ಷ ಆಟದಿಂದ ದೂರವಿದ್ದರು. ಇದನ್ನೂ ಓದಿ: ಒಂದೇ ದಿನ ಭಾರತ-ನ್ಯೂಜಿಲ್ಯಾಂಡ್​ ತಂಡಗಳಿಗೆ ಸೋಲು! ಈಗ ಹೇಗಿದೆ WTC ಫೈನಲ್ ಲೆಕ್ಕಾಚಾರ! ನಾವು ಶಮಿಗಾಗಿ ಎದುರು ನೋಡುತ್ತಿದ್ದೇವೆ ಇತ್ತೀಚೆಗಷ್ಟೇ ರಣಜಿ ಟ್ರೋಫಿಯೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆರಂಭಿಸಿದ್ದ ಶಮಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಕಣಕ್ಕೆ ಇಳಿದಿದ್ದರು. ಈ ಹೊಡಿಬಡಿ ದೇಶೀಯ ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿರುವ ಶಮಿ 27.3 ಓವರ್ ಬೌಲ್ ಮಾಡಿ 8 ವಿಕೆಟ್ ಪಡೆದಿದ್ದಾರೆ. ಇದೀಗ ಶಮಿ ಬಗ್ಗೆ ಮಾತನಾಡಿರುವ ರೋಹಿತ್, ನಾವು ಶಮಿ ಆಗಮನವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ, ಆದರೆ ಅವರು ಫಿಟ್ ಆಗಿದ್ದಾರೆ ಎಂದು 100 ರಷ್ಟು ಖಚಿತವಾದರೆ ಮಾತ್ರ. ಏಕೆಂದರೆ ಶಮಿಗೆ ಮೊಣಕಾಲು ಊದಿಕೊಂಡಿದ್ದರಿಂದ ಅವರು ಮತ್ತೆ ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿದ್ದೇವೆ ಎಂದು ತಿಳಿಸಿದ್ದಾರೆ. ಶೇ 100ರಷ್ಟು ಫಿಟ್​ನೆಸ್​ ಇದ್ರೆ ಮಾತ್ರ ಚಾನ್ಸ್ ’’ ಶಮಿಗಾಗಿ ಭಾರತ ತಂಡದ ಬಾಗಿಲು ತೆರೆದಿದೆ. ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಮೊಣಕಾಲು ಊತಕ್ಕೆ ಒಳಗಾಗಿದ್ದರಿಂದ ಅವರ ಮೇಲೆ ನಿಗಾ ವಹಿಸಲಾಗಿದೆ. ಇದು ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸದಂತೆ ತಡೆಯುತ್ತದೆ. ನಾವು ಅವರ ಬಗ್ಗೆ ಜಾಗರೂಕರಾಗಿರಲು ಬಯಸುತ್ತೇವೆ. ನಾವು ಅವರನ್ನು ಆಸ್ಟ್ರೇಲಿಯಾಕ್ಕೆ ಕರೆತಂದು ಮತ್ತೆ ತೊಂದರೆಗೆ ಸಿಲುಕಿಸಬಾರದು ಎಂದು ನಾವು ಭಾವಿಸುತ್ತೇವೆ. ಶೇ.100ಕ್ಕಿಂತ ಹೆಚ್ಚು ಫಿಟ್ ಆಗಿರುವ ವಿಶ್ವಾಸವಿದ್ದರೆ ಮಾತ್ರ ಅವರನ್ನು ಕರೆತರಲು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಡಿಲೇಡ್​ ಟೆಸ್ಟ್​ನಲ್ಲಿ ಸೋಲು! ಧೋನಿ-ಕೊಹ್ಲಿ ಜೊತೆಗೆ ಅನಗತ್ಯ ದಾಖಲೆ ಪಟ್ಟಿ ಸೇರಿದ ರೋಹಿತ್ ತಜ್ಞರ ತಂಡದಿಂದ ಪರಿಶೀಲನೆ ಏಕೆಂದರೆ ಶಮಿ ಬಹಳ ದಿನಗಳಿಂದ ಆಟದಿಂದ ದೂರ ಉಳಿದಿದ್ದಾರೆ. ಅವರನ್ನು ಇಲ್ಲಿಗೆ ಕರೆತಂದು ತಂಡಕ್ಕಾಗಿ ಶ್ರಮಿಸುವಂತೆ ಒತ್ತಡ ಹೇರುಲು ಸಾಧ್ಯವಿಲ್ಲ. ಕೆಲವು ತಜ್ಞರು ಶಮಿ ಮೇಲೆ ನಿಗಾ ಇಡುತ್ತಿದ್ದಾರೆ. ಅವರ ವರದಿ ಆಧರಿಸಿ ಅಂತಿಮವಾಗಿ ನಿರ್ಧಾರಕ್ಕೆ ಬರುತ್ತೇವೆ. ಪ್ರತಿ ಪಂದ್ಯದಲ್ಲೂ ಶಮಿ ಮೇಲೆ ನಿಗಾ ಇಡುತ್ತಿದ್ದಾರೆ. ನಾಲ್ಕು ಓವರ್ ಬೌಲ್ ಮಾಡಿದ ನಂತರ ಅವರ ದೇಹವು ಹೇಗೆ ನಿಭಾಯಿಸುತ್ತದೆ? 20 ಓವರ್‌ಗಳನ್ನು ಮೈದಾನದಲ್ಲಿ ಕಳೆದ ನಂತರ ಅವರು ಹೇಗಿರುತ್ತಾರೆ? ಎಂಬ ಬಗ್ಗೆ ವೀಕ್ಷಿಸುತ್ತಿದ್ದಾರೆ. ಆದರೆ ಯಾವಾಗ ಬೇಕಾದರೂ ಟೀಂ ಇಂಡಿಯಾ ಪರ ಆಡುವ ಅವಕಾಶ ಇದೆ ಎಂದು ರೋಹಿತ್ ಹೇಳಿದ್ದಾರೆ. ಮೂರನೇ ಟೆಸ್ಟ್ ಶನಿವಾರದಿಂದ ಬ್ರಿಸ್ಬೇನ್ ಮೈದಾನದಲ್ಲಿ ಆರಂಭವಾಗಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.