NEWS

Theft: ಹುಡುಗೀರ ಶೋಕಿಗೆ ಬಿದ್ದು 70 ಲಾರಿ ಕಳೆದುಕೊಂಡ ಉದ್ಯಮಿ! 155 ಕೇಸ್, ಕಾಲಿಗೆ ಗುಂಡೇಟು

Girinagar police have arrested a thief who is accused in 155 cases ಬೆಂಗಳೂರು: ಹುಡುಗೀರ ಶೋಕಿಗೆ ಬಿದ್ದ ಉದ್ಯಮಿಯೊಬ್ಬ (Businessman) ಕಳ್ಳತನಕ್ಕೆ ಇಳಿದು ಅಂತಿಮವಾಗಿ ತನ್ನ ಬಳಿಯಿದ್ದ ಬರೋಬ್ಬರಿ 70 ಲಾರಿಗಳನ್ನು (Laury) ಕಳೆದುಕೊಂಡಿದ್ದಾನೆ. ಮಾತ್ರವಲ್ಲ ಆತನ ಮೇಲೆ ಬರೋಬ್ಬರಿ 155 ಕೇಸ್‌ಗಳು (Case) ದಾಖಲಾಗಿದ್ದು, ಅಂತಿಮವಾಗಿ ಕಾಲಿಗೆ ಗುಂಡೇಟು ಕೂಡ ಬಿದ್ದಿದೆ. ಸದ್ಯ 155ಕ್ಕೂ ಅಧಿಕ ಪ್ರಕರಣಗಳಲ್ಲಿ ಬೇಕಾಗಿದ್ದ ಖತನಾರ್ನಾಕ್ ಅಂತಾರಾಜ್ಯ ಕಳ್ಳನನ್ನು (Interstate theft) ಗಿರಿನಗರ ಪೊಲೀಸರು (Girinagar Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಡುಗಿಯರ ಹಿಂದೆ ಬಿದ್ದಿದ್ದ ಖತರ್ನಾಕ್ ಖದೀಮ! ಹುಡುಗಿಯರ ಶೋಕಿಗೆ ಬಿದ್ದಿದ್ದ ವ್ಯಕ್ತಿಯೋರ್ವ ಸರಕಳ್ಳತನಕ್ಕೆ ಇಳಿದಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 155ಕ್ಕೂ ಹೆಚ್ಚು ಕೇಸ್ ಕೇಸ್‌ಗಳು ಕೂಡ ದಾಖಲಾಗಿವೆ. ಇನ್ನೂ ಹುಡುಗಿಯರ ಚಟಕ್ಕೆ ಬಿದ್ದಿದ್ದ ಈತ ಬ್ಯುಸಿನೆಸ್ ನಲ್ಲಿ ಲಾಸ್ ಮಾಡಿಕೊಂಡಿದ್ದಾನೆ. ಅಂತಿಮವಾಗಿ ಸರಗಳ್ಳನಕ್ಕಿಳಿದು ಕಾಲಿಗೆ ಗುಂಡೇಟು ಕೂಡ ಹೊಡೆಸಿಕೊಂಡಿದ್ದಾನೆ. ಸದ್ಯ 155ಕ್ಕೂ ಹೆಚ್ಚು ಕೇಸ್ ನಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳ ವಿಶ್ವನಾಥ್ ಕೋಳಿವಾಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 70ಕ್ಕೂ ಅಧಿಕ ಲಾರಿ ಕಳ್ಳತನ ಅಂತರಾಜ್ಯ ಕಳ್ಳನಾಗಿದ್ದ ವಿಶ್ವನಾಥ್ ನನ್ನು ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕಳೆದ ಐದಾರು ವರ್ಷಗಳ ಹಿಂದೆ ಒಳ್ಳೆ ಬ್ಯುಸಿನೆಸ್ ಹೊಂದಿದ್ದ. ಸುಮಾರು 70ಕ್ಕೂ ಹೆಚ್ಚು ಲಾರಿ ಹೊಂದಿದ್ದು ಲಾಭದಾಯಕ ಬ್ಯುಸಿನೆಸ್ ನಡೆಸುತ್ತಿದ್ದನು. ಉತ್ತಮ ಆದಾಯ ಬರುತ್ತಿದ್ದಾಗ ಅತಿಯಾದ ಶೋಕಿಗೆ ಬಿದ್ದಿದ್ದ ವಿಶ್ವನಾಥ್, ಹುಡುಗೀರ ಚಟ, ಜೂಜಾಟಕ್ಕೆ ದಾಸನಾಗಿದ್ದನು. ಹುಡುಗಿಯರಿಗಾಗಿ ಹಣ ಖರ್ಚು ಮಾಡಿ ಬೀದಿಗೆ ಬಂದಿದ್ದನು. ಇದನ್ನೂ ಓದಿ: Mysore Gang rape case: ಸಾಂಸ್ಕೃತಿಕ ನಗರದಲ್ಲಿ ಮತ್ತೊಂದು ಹೇಯ ಕೃತ್ಯ! ಯುವತಿ ಮೇಲೆ ಗ್ಯಾಂಗ್ ರೇಪ್! 24 ಗಂಟೆಯಲ್ಲಿ ಕಾಮುಕರು ಅಂದರ್ ಹಲವು ಜಿಲ್ಲೆಗಳಲ್ಲಿ ಕಳ್ಳತನ ಇಷ್ಟೆಲ್ಲಾ ಲಾಸ್ ಆದ ಬಳಿಕವೂ ತನ್ನ ಚಟ ಮುಂದುವರೆಸಿದ್ದ ಖತನಾರ್ನಾಕ್ ಆಸಾಮಿ, ಬ್ಯುಸಿನೆಸ್‌ನಲ್ಲಿ ಲಾಸ್ ಆದ ಬಳಿಕ ಸರ ಕಳ್ಳನದ ದಾರಿ ಹಿಡಿದಿದ್ದನು. ಈತ ಬೆಂಗಳೂರು, ಧಾರವಾಡ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಸರಗಳ್ಳತನ ಮಾಡಿದ್ದನು. ಗಿರಿನಗರದಲ್ಲಿ ಪತಿ ಅಡ್ರೆಸ್ ಕೇಳುವ ನೆಪದಲ್ಲಿ ಕಳ್ಳತನ ಇತ್ತೀಚೆಗೆ ಗಿರಿನಗರದಲ್ಲಿ ಪತಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಸರ ಎಗರಿಸಿದ್ದನು. ಮಹಿಳೆಯ ಬಳಿ ಆಕೆಯ ಪತಿಯ ಕುರಿತು ಬಗ್ಗೆ ವಿಚಾರಿಸುವ ನೆಪದಲ್ಲಿ ಕಳ್ಳತನ ಎಸಗಿದ್ದನು. ಸದ್ಯ ಹೈದ್ರಾ ಬಾದ್ ನ ಜೈಲಿನಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ಕರೆ ತಂದಿರುವ ಪೊಲೀಸರು 25ಲಕ್ಷ ಮೌಲ್ಯದ ಚಿನ್ನಾಭರಣ, ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಗಂಗಾಧರ್ ವಾಗಟ, ನ್ಯೂಸ್18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.