NEWS

Rekha: ಬಿಗ್​ ಬಿ ಎದುರು ನಿಂತಿದ್ದೇ ಡ್ಯಾನ್ಸ್​ ತಾನಾಗಿಯೇ ಬಂದಿತ್ತಂತೆ ರೇಖಾಗೆ? ಪ್ರೀತಿನಾ, ಭಯನಾ?

ಇತ್ತೀಚೆಗೆ ಜನಪ್ರಿಯ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ’ (The Great Indian Kapil Show) ಶೋನಲ್ಲಿ ಭಾಗಿಯಾದ ಬಾಲಿವುಡ್ ಎವರ್ಗ್ರೀನ್ ಬ್ಯೂಟಿ ರೇಖಾ, ಅಮಿತಾಭ್ ಬಚ್ಚನ್ (Amitabh Bachchan) ಬಗ್ಗೆ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಬಚ್ಚನ್ ಅವರ ಐಕಾನಿಕ್ ಗೇಮ್ ಶೋ ‘ಕೌನ್ ಬನೇಗಾ ಕರೋಡ್ಪತಿ’ (ಕೆಬಿಸಿ) ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ (Cinema) ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಿರುವ ರೇಖಾ (Rekha) ಇದೀಗ ಒಂದು ಅಮಿತಾಬ್‌ ಜತೆ ಕೆಲಸ ಮಾಡುವಾಗ ನಡೆದ ಸನ್ನಿವೇಶದ ಬಗ್ಗೆ ಮಾತನಾಡಿದ್ದಾರೆ. ಇದೀಗ ರೇಖಾ ಅವರ ಹೇಳಿಕೆ ಸಖತ್‌ ವೈರಲ್‌ ಆಗುತ್ತಿದೆ. ಸುಹಾಗ್ ಚಿತ್ರದಲ್ಲಿ ಅಮಿತಾಭ್‌ ಹಾಗೂ ರೇಖಾ ಒಟ್ಟಿಗೆ ನಟಿಸಿದ್ದರು. ಅಲ್ಲಿ ನಡೆದ ಸನ್ನಿವೇಶದ ಬಗ್ಗೆ ಮಾತನಾಡಿದ್ದಾರೆ ರೇಖಾ. ಕಪಿಲ್ ಶರ್ಮಾ ಅವರ ಶೋನಲ್ಲಿ ನಟಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡರು. ಸಂಚಿಕೆಯಲ್ಲಿ, ಅಭಿಮಾನಿಯೊಬ್ಬರು ರೇಖಾ ಅವರನ್ನು ಸುಹಾಗ್ ಚಿತ್ರದ ‘ಓ ಶೆರೋನ್ವಾಲಿ’ ಹಾಡಿನ ಬಗ್ಗೆ ಪ್ರಶ್ನೆ ಇಟ್ಟರು. ಈ ಹಾಡಿನಲ್ಲಿ ರೇಖಾ ಮತ್ತು ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದರು. ಹಾಡಿನಲ್ಲಿ ರೇಖಾ ದೇವಸ್ಥಾನದಲ್ಲಿ ದಾಂಡಿಯಾ ಮಾಡುತ್ತಾರೆ. ಹಾಡಿನ ಬಗ್ಗೆ ಮಾತನಾಡಿದ ಅಭಿಮಾನಿಯೊಬ್ಬರು ರೇಖಾ ಅವರನ್ನು ಪ್ರಶ್ನೆ ಕೇಳಿದರು, “ಸುಹಾಗ್ ಚಿತ್ರದಲ್ಲಿ ನೀವು ದಾಂಡಿಯಾವನ್ನು ತುಂಬಾ ಚೆನ್ನಾಗಿ ಆಡಿದ್ದೀರಿ. ನೀವು ದಕ್ಷಿಣ ಭಾರತೀಯರಾಗಿದ್ದರೂ ಗುಜರಾತಿ ದಾಂಡಿಯಾವನ್ನು ತುಂಬಾ ಚೆನ್ನಾಗಿ ಆಡಿದ್ದೀರಿ. ನೀವು ಅದನ್ನು ಹೇಗೆ ನಿರ್ವಹಿಸಿದ್ರಿ?" ಎಂದು ಕೇಳಿದ್ದಾರೆ. ರೇಖಾ ಉತ್ತರ ಏನು? ಅದಕ್ಕೆ ರೇಖಾ ಉತ್ತರಿಸಿ, ರೇಖಾ ಅವರು ಅಮಿತಾಬ್ ಹೆಸರನ್ನು ಉಲ್ಲೇಖಿಸದಿದ್ದರೂ, ಅವರು ಅವರನ್ನು ಪ್ರಶಂಸಿಸಿದರು. ಒಂದು ಕ್ಷಣ ನಟಿ ಯೋಚಿಸಿ, ಕಾರಣ ನಾನು ದಾಂಡಿಯಾ ಮಾಡುತ್ತಿದ್ದ ವ್ಯಕ್ತಿಯ ವ್ಯಕ್ತಿತ್ವ ಹಾಗೇ ಇತ್ತು. ದಾಂಡಿಯಾ ಆಡುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ, ಆದರೆ ಅವರು ನನ್ನ ಮುಂದೆ ನಿಂತಾಗ, ನಾನು ನೃತ್ಯ ಮಾಡಲು ಪ್ರಾರಂಭಿಸುತ್ತೇನೆ. ಚೆನ್ನಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಈ ಎಪಿಸೋಡ್‌ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಇದನ್ನೂ ಓದಿ: 1979ರಲ್ಲಿ ಬಿಡುಗಡೆಯಾದ ಸಿನಿಮಾ ಸುಹಾಗ್ 1979 ರಲ್ಲಿ ಬಿಡುಗಡೆಯಾದ ಸಿನಿಮಾ. ಮನಮೋಹನ್ ದೇಸಾಯಿ ನಿರ್ದೇಶಿಸಿದ ಈ ಚಿತ್ರದಲ್ಲಿ ರೇಖಾ, ಅಮಿತಾಬ್, ಶಶಿ ಕಪೂರ್, ಪರ್ವೀನ್ ಬಾಬಿ, ಅಮ್ಜದ್ ಖಾನ್, ನಿರುಪಾ ರಾಯ್, ಕಾದರ್ ಖಾನ್, ರಂಜೀತ್ ಮತ್ತು ಜೀವನ್ ನಟಿಸಿದ್ದಾರೆ. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಸುಹಾಗ್ 1979 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ದೋ ಅಂಜಾನೆ (1976), ಆಲಾಪ್ (1977), ಮುಕದ್ದರ್ ಕಾ ಸಿಕಂದರ್ (1978) ಮತ್ತು ಮಿಸ್ಟರ್ ನಟ್ವರ್‌ಲಾಲ್ (1979) ನಂತಹ ಸೂಪರ್ ಹಿಟ್‌ ಸೇರಿದಂತೆ ಒಟ್ಟು 9 ಸಿನಿಮಾಗಳಲ್ಲಿ ರೇಖಾ ಮತ್ತು ಅಮಿತಾಭ್ ತೆರೆ ಹಂಚಿಕೊಂಡಿದ್ದಾರೆ. ಸಿಲ್ಸಿಲಾ (1981) ಬಿಡುಗಡೆಯಾದಾಗ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬ ವದಂತಿ ಬಹಳ ದೊಡ್ಡ ಮಟ್ಟದಲ್ಲೇ ಕೇಳಿಬಂತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.