NEWS

Jobs in Mysuru: ಮೈಸೂರಿನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಅಪ್ಲೈ ಮಾಡಲು ನಾಳೆಯೇ ಕೊನೆಯ ದಿನ

ಸಾಂದರ್ಭಿಕ ಚಿತ್ರ CFTRI Recruitment 2024: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು(Central Food Technological Research Institute) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 1 ಪ್ರಾಜೆಕ್ಟ್​ ಅಸೋಸಿಯೇಟ್-II​ (Project Associate) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ(Mysuru) ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್‌ 6, 2024 ಅಂದರೆ ನಾಳೆ ಕೊನೆಯ ದಿನವಾಗಿದ್ದು, ಆಸಕ್ತರು ಈ ಕೂಡಲೇ ಅಪ್ಲಿಕೇಶನ್ ಹಾಕಿ. ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ cftri.res.in ಭೇಟಿ ಕೊಡಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಶೈಕ್ಷಣಿಕ ಅರ್ಹತೆ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಎಸ್ಸಿ, ಎಂಬಿಎ, MSW ಪೂರ್ಣಗೊಳಿಸಿರಬೇಕು. ಇದನ್ನೂ ಓದಿ: Jobs in Chikkamagaluru: ಚಿಕ್ಕಮಗಳೂರಿನ DCC ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವಯೋಮಿತಿ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಉದ್ಯೋಗದ ಸ್ಥಳ: ಮೈಸೂರು ವೇತನ: ಮಾಸಿಕ ₹ 28,000 ಅನುಭವ: ಅಭ್ಯರ್ಥಿಗಳು ಕೈಗಾರಿಕಾ/ಅಕಾಡೆಮಿಕ್ ಇನ್ಸ್ಟಿಟ್ಯೂಷನ್/ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಅಥವಾ ವಿಜ್ಞಾನ ಸಂವಹನದಲ್ಲಿ ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು. ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ ಅರ್ಜಿ ಹಾಕೋದು ಹೇಗೆ? ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/10/2024 ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್‌ 6, 2024 (ನಾಳೆ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.