NEWS

Ravichandran Ashwin: ಅಶ್ವಿನ್ ಟೆಸ್ಟ್ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿಯಾಗಲೂ ಆತನೇ ಕಾರಣ?

ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Aswhin) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಭಾಗವಾಗಿ ಗಬ್ಬಾದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ ಅಶ್ವಿನ್, ಎಲ್ಲಾ ಫಾರ್ಮ್ಯಾಟ್‌ಗಳಿಗೆ ವಿದಾಯ ಹೇಳುವುದಾಗಿ ಘೋಷಿಸಿದರು. ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತಿ ಘೋಷಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಅಶ್ವಿನ್ ಅವರ ದಿಢೀರ್ ನಿವೃತ್ತಿಯ ಹಿಂದಿನ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಗಂಭೀರ್ ಕೋಚ್ ಆಗುತ್ತಿದ್ದಂತೆ ಯುವಕರಿಗೆ ಅವಕಾಶ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅಶ್ವಿನ್ ವೃತ್ತಿಜೀವನದ ಎಂಡ್​ ಕಾರ್ಡ್ ಸಿಕ್ಕಂತಾಗಿದೆ ಎಂಬ ಅಭಿಪ್ರಾಯ ಹಿಂದೆ ವ್ಯಕ್ತವಾಗಿತ್ತು. ಕಿವೀಸ್​ ಸರಣಿಯ ವೇಳೆಯೇ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಕರೆತಂದ ಗಂಭೀರ್ ಮತ್ತು ಅಶ್ವಿನ್​ಗೆ ಚೆಕ್ ಹಾಕಿದ್ದು, ಉಳಿದ ಹಿರಿಯ ಆಟಗಾರರು ಅಶ್ವಿನ್ ಹಾದಿ ಹಿಡಿಯುವ ಕಾಲ ದೂರವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಶ್ವಿನ್ ಜಾಗಕ್ಕೆ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಅಶ್ವಿನ್ ಪ್ರದರ್ಶನ ಕುಗ್ಗಿದಾಗ ಗಂಭೀರ್ ಇದ್ದಕ್ಕಿದ್ದಂತೆ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಕರೆತಂದರು. ಆತ ಕೂಡ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿರುವುದರಿಂದ ಅಶ್ವಿನ್​ಗೆ ಭವಿಷ್ಯದಲ್ಲಿ ಅವಕಾಶ ಸಿಗುವುದು ಕಷ್ಟ ಎಂಬುದು ಮನವರಿಕೆಯಾಗಿದೆ. ಇದನ್ನೂ ಓದಿ; ಅಶ್ವಿನ್​ಗೆ ಮಾತು ಕೊಟ್ಟು ಮಾಡಿದ್ರಾ ಮೋಸ? ಇದೇ ಕಾರಣಕ್ಕೆ ನಿವೃತ್ತಿ ಘೋಷಿಸಿದ್ರಂತೆ ಸ್ಟಾರ್ ಸ್ಪಿನ್ನರ್! ಮೊದಲ ಟೆಸ್ಟ್​ನಲ್ಲಿ ಸುಂದರ್​ಗೆ ಚಾನ್ಸ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಮೊದಲ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಪರ್ತ್ ಟೆಸ್ಟ್ ಮೈದಾನದಲ್ಲಿ ಅಶ್ವಿನ್ ಮತ್ತು ಜಡೇಜಾರನ್ನು ಹಿಂದಿಕ್ಕಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಹಾಗಾಗಿ ಅಶ್ವಿನ್ ಬದಲಿಗೆ ಸುಂದರ್ ಆಡಬಹುದು ಎಂಬ ಸೂಚನೆಯನ್ನು ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ನೀಡಿತ್ತು. ಪಿಂಕ್ ಬಾಲ್ ಟೆಸ್ಟ್ ನಲ್ಲಿ ಅಶ್ವಿನ್​ಗೆ ಅವಕಾಶ ನೀಡಿದರೂ ಅನುಭವಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೂರನೇ ಟೆಸ್ಟ್‌ನಲ್ಲಿ ಅವರ ಬದಲಿಗೆ ಬಂದಿದ್ದ ಜಡೇಜಾ ಅಮೋಘ ಬ್ಯಾಟಿಂಗ್‌ ನಡೆಸಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದರು. ತಂಡದಲ್ಲಿರುವಾಗಲೇ ನಿವೃತ್ತಿಗೆ ನಿರ್ಧಾರ ಈ ಪ್ರದರ್ಶನದಿಂದ ಜಡೇಜಾ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಹೊರಗುಳಿಯುವ ಸಾಧ್ಯತೆ ಇಲ್ಲ. ಅದೂ ಅಲ್ಲದೆ ಈಗ ತವರಿನಲ್ಲಿ ಟೆಸ್ಟ್ ಸರಣಿ ಇಲ್ಲ. WTC 2023-2025 ರಲ್ಲಿ ಭಾರತದ ಪಂದ್ಯಗಳು ಬಾರ್ಡರ್ ಗವಾಸ್ಕರ್ ಟ್ರೋಫಿಯೊಂದಿಗೆ ಕೊನೆಗೊಳ್ಳುತ್ತವೆ. ಮುಂದಿನ WTC 2025-27 ಸೈಕಲ್​ ಇಂಗ್ಲೆಂಡ್ ಪ್ರವಾಸದೊಂದಿಗೆ ಪ್ರಾರಂಭವಾಗುತ್ತದೆ. ಆ ಸರಣಿಗೆ ಅಶ್ವಿನ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಅಂತಹ ಪರಿಸ್ಥಿತಿ ಎದುರಿಸುವುದಕ್ಕಿಂತ ತಂಡದಲ್ಲಿರುವಾಗಲೇ ನಿವೃತ್ತಿ ಘೋಷಿಸುವುದು ಉತ್ತಮ ಎಂದು ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.