ತುಂಗಭದ್ರಾ ಡ್ಯಾಂ ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ (Tungabhadra Dam ) ನೀರಿನ ರಭಸಕ್ಕೆ ಕಿತ್ತು ಹೋಗಿರುವ 19ನೇ ಕ್ರೆಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ತುಂಗಾಭದ್ರಾ ಜಲಾಶಯಕ್ಕೆ ಐದನೇ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ. ಭೋರ್ಗರೆಯೋ ನೀರಿನಲ್ಲೇ ತಜ್ಞರ ಸಾಹಸ ಮಾಡಿದ್ದು, ಇದೇ ಮೊದಲ ಬಾರಿಗೆ ಹರಿಯುತ್ತಿರುವ ನೀರಿನಲ್ಲಿ ಗೇಟ್ ಅಳವಡಿಕೆ ಮಾಡಿ ಸುಮಾರು 70ಕ್ಕೂ ಹೆಚ್ಚು ಟಿಎಂಸಿ ನೀರನ್ನು (70 TMC Water) ಉಳಿಸಿದ್ದಾರೆ. ಆ ಮೂಲಕ ರಾಜ್ಯದ ನಾಲ್ಕು ಜಿಲ್ಲೆಗಳ ರೈತರ ಆತಂಕವನ್ನು ದೂರ ಮಾಡಲು ತಜ್ಞರು ಯಶಸ್ವಿಯಾಗಿದ್ದಾರೆ. ಅಂದಹಾಗೇ, ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದ ತಕ್ಷಣ ರಾಜ್ಯ ನಾಯಕರು ಆಂಧ್ರ ಪ್ರದೇಶ ತಜ್ಞರನ್ನು ಸಂಪರ್ಕ ಮಾಡಿದ್ದರು. ಕೂಡಲೇ ಡ್ಯಾಂ ಕಡೆ ಹೈದರಾಬಾದ್ನಿಂದ ಆಗಮಿಸಿದ ಅವರು ನೀರು ಪೋಲಾಗುವುದನ್ನು ತಡೆಯಲು ಮಹತ್ವ ಪ್ಲ್ಯಾನ್ ಮಾಡಿದ್ದರು. ಅಸಲಿಗೆ ಆ ತಜ್ಞರು ಯಾರು? ಕಾರ್ಯಾಚರಣೆ ಹೇಗಿತ್ತು? ಎಷ್ಟೆಲ್ಲಾ ಕಾರ್ಮಿಕರು ಕಾರ್ಯಾಚರಣೆ ನಡೆಸಿದರು ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ. 19ನೇ ಗೇಟ್ನಲ್ಲೇ ತುಂಗಾಭದ್ರೆ ಅಪ್ಪಳಿಸಿ ಬರ್ತಿರೋದ್ರಿಂದ ಹೊಸ ಗೇಟ್ ಹಾಕೋದಕ್ಕೂ ಸಾಧ್ಯವಾಗ್ತಿಲ್ಲ. ಒಂದ್ಕಡೆ ನೀರು ಪೋಲಾಗೋದಕ್ಕೆ ತಪ್ಪಿಸೋ ಸವಾಲು. ಇನ್ನೊಂದ್ಕಡೆ ಆದಷ್ಟು ಬೇಗ ಗೇಟ್ ಕ್ಲೋಸ್ ಮಾಡ್ಬೇಕು ಅನ್ನೋ ಚಾಲೆಂಜ್. ಹೀಗಾಗಿ ಡ್ಯಾಂ ತಜ್ಞ ಕನ್ಹಯ್ಯ ಆ್ಯಂಡ್ ಶತಾಯಗತಾಯ ಪ್ರಯತ್ನ ಮಾಡಿ ರಾತ್ರಿ ಹಗಲು ಎನ್ನದೆ ಕಾರ್ಯಾಚರಣೆ ನಡೆಸಿದ್ದರು. ನಿರ್ವಿಜ್ಞವಾಗಿ ಗೇಟ್ ಅಳವಡಿಕೆ ಮಾಡುವಂತಗಲಿ ಅಂತಾ ಜಮೀರ್ ಅಹ್ಮದ್ ವಿಶೇಷ ಪೂಜೆ ಸಲ್ಲಿಸಿದ್ದರು. ಏಕೆಂದರೆ ಕಿತ್ತೋಗಿದ್ದ 19ನೇ ಗೇಟ್ಟನ್ನು ಒಮ್ಮೆಲೆ ಅಳವಡಿಸೋದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಬಿಡಿಬಿಡಿಯಾಗಿ ಒಟ್ಟು 5 ಗೇಟ್‌ಗಳನ್ನ ಸಿದ್ಧಪಡಿ ಜೋಡಣೆ ಮಾಡುವ ಪ್ಲ್ಯಾನ್ ಮಾಡಲಾಗಿತ್ತು. 4 ಅಡಿ ಅಗಲ 60 ಅಡಿ ಉದ್ದದ ಕ್ರಸ್ಟ್ ಗೇಟ್‌ಗಳನ್ನ ರೆಡಿ ಮಾಡಲಾಗಿತ್ತು. ಇದರಲ್ಲಿ ಪ್ರಮುಖವಾದ ವ್ಯಕ್ತಿ ಕನ್ಹಯ್ಯ ನಾಯ್ಡು. ಟಿ.ಬಿ.,ಡ್ಯಾಂ ಗೇಟ್ ಕೊಚ್ಚಿ ಹೋದ ಮರುದಿನವೇ ತುಂಗಭದ್ರಾ ಜಲಾಶಯ ಮಂಡಳಿಯವರು ಮೊದಲು ಸಂಪರ್ಕಿಸಿದ್ದು ಇದೇ ಕನ್ಹಯ್ಯ ನಾಯ್ಡುರನ್ನ. ಯಾರು ಕನ್ಹಯ್ಯ ನಾಯ್ಡು? ಕನ್ಹಯ್ಯ ನಾಯ್ಡು ನ್ಯಾಷನಲ್ ಡ್ಯಾಂ ಗೇಟ್ ಎಕ್ಸ್‌ಪರ್ಟ್. ಮೂಲತಃ ಆಂಧ್ರ ಪ್ರದೇಶದಲ್ಲೇ ಹುಟ್ಟಿ ಬೆಳೆದವರು. ಹೊಸಪೇಟೆಯಲ್ಲಿದ್ದು ತುಂಗಾಭದ್ರಾ ಸ್ಟಿಲ್ ಪ್ರೊಡಕ್ಟ್ ಎಂಜಿನಿಯರ್ ಆಗಿದ್ದರು. ಡ್ಯಾಂಗಳಿಗೆ ಕ್ರಸ್ಟ್ ಗೇಟ್ ತಯಾರಿಸುವುದರಲ್ಲಿ ನಿಪುಣರು. ದೇಶದ ಅನೇಕ ಡ್ಯಾಂಗಳಿಗೆ ಗೇಟ್ ಅಳವಡಿಸಿದ ಚತುರ. ಹಳೇ ಗೇಟ್‌ಗಳ ರಿಪೇರಿ, ಬದಲಾವಣೆಯ ಮಾಂತ್ರಿಕ ಅಂತಾನೇ ಹೆಸರಾದವರು. ಎಲ್ಲಕ್ಕಿಂತ ಹೆಚ್ಚಾಗಿ ತುಂಗಭದ್ರೆ ನೀರು ಕುಡಿದು ಬಳ್ಳಾರಿಯಲ್ಲೇ ಸೇವೆ ಸಲ್ಲಿಸ್ತಾ ಟಿ.ಬಿ ಡ್ಯಾಂ ಗೇಟ್‌ಗಳ ಬಗ್ಗೆ ತಿಳಿದುಕೊಂಡಿದ್ದ ತಾಂತ್ರಿಕ ನಿಪುಣ. ಇದನ್ನೂ ಓದಿ: Tungabhadra Dam: TB ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ ಸಕ್ಸಸ್; ಕನ್ಹಯ್ಯ ನಾಯ್ಡು ತಂಡದ ಪರಿಶ್ರಮಕ್ಕೆ ಶ್ಲಾಘನೆ ಸಿಎಂ ಅವರು ಡ್ಯಾಂಗೆ ಭೇಟಿ ನೀಡಿದ್ದ ವೇಳೆಯೂ ಸಿಎಂಗೆ ಸಂಪೂರ್ಣವಾಗಿ ಮಾಹಿತಿ ನೀಡಿ ಕಾರ್ಯಾಚರಣೆಗೆ ಅಗತ್ಯ ನೆರವು ಹಾಗೂ ಅನುಮತಿಗಳನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲ 60 ರಿಂದ 65 ಟಿಎಂಸಿ ನೀರು ಡ್ಯಾಂನಲ್ಲೇ ಉಳಿಸಿಕೊಡ್ತೀನಿ ಅಂತ ಭರವಸೆನೂ ಕೊಟ್ಟಿದ್ದರು, ಕೊಟ್ಟ ಮಾತಿನಂತೆ 70 ಟಿಎಂಸಿ ನೀರು ಉಳಿಸಿದ್ದಾರೆ. ಇನ್ನ, ಕನ್ಹಯ್ಯನವ್ರ ಪ್ರಕಾರ ಡ್ಯಾಂ ನಿರ್ಮಾಣಗೊಂಡ 45 ರಿಂದ 50 ವರ್ಷದ ಒಳಗೆ ಗೇಟ್‌ಗಳನ್ನ ಬದಲಿಸಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಇದೇ ಕಾರಣಕ್ಕೆ 19ನೇ ಕ್ರಸ್ಟ್ ಗೇಟ್ ದಿಕ್ಕಾಪಾಲಾಗಿ ಹೋಗಿದೆ. ಈಗ ಉಳಿದ 32 ಗೇಟ್‌ಗಳ ಸಾಮರ್ಥ್ಯದ ಮೇಲೂ ಅನುಮಾನ ಶುರುವಾಗಿದ್ದು ಉಳಿದ ಗೇಟ್ಗಳನ್ನೂ ಪರಿಶೀಲನೆ ಮಾಡಬೇಕಿದೆ. (ವರದಿ: ಬಸವರಾಜು ಜೊತೆ ಶರಣಪ್ಪ ಬಾಚಲಾಪುರ, ನ್ಯೂಸ್ 18 ಕನ್ನಡ, ವಿಜಯನಗರ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.