ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಜಸ್ಟಿನ್ ಟ್ರುಡೊ ಒಟ್ಟಾವಾ: ಭಾರತದೊಂದಿಗೆ ಸದಾ ತಕರಾರು ತಗೆದು ತಾಳ್ಮೆ ಪ್ರಶ್ನಿಸುತ್ತಿದ್ದ 53 ವರ್ಷದ ಕೆನಡಾ (Canada) ಪ್ರಧಾನಿ (Prime Minister) ಜಸ್ಟಿನ್ ಟ್ರುಡೊ (Justin Trudeau) ಅವರು ತಮ್ಮ ಹುದ್ದೆಗೆ ನಿರಿಕ್ಷೇಯಂತೆ ರಾಜೀನಾಮೆ (Resigns as Prime Minister) ಘೋಷಿಸಿದ್ದಾರೆ. ಪ್ರಧಾನಿ ಹುದ್ದೆಯ ಜೊತೆಗೆ ಲಿಬರಲ್ ಪಕ್ಷದ (Liberal Party of Canada) ಮುಖ್ಯಸ್ಥ (head) ಸ್ಥಾನದಿಂದಲೂ ಹಿಂದೆ ಸರಿದಿರುವುದಾಗಿ ತಿಳಿಸಿರುವ ಅವರು, ರಾಜೀನಾಮೆಗೆ ಲಿಬರಲ್ ಪಾರ್ಟಿಯಲ್ಲಿನ ಆಂತರಿಕ ಕಲಹವೆ ಕಾರಣವಾಗಿದೆ ಎಂದಿದ್ದಾರೆ. ಇದರೊಂದಿಗೆ ಮುಂದಿನ ಪ್ರಧಾನಿ ಹಾಗೂ ಪಕ್ಷದ ನಾಯಕನ ಆಯ್ಕೆಯಾಗುವವರೆಗೂ ಹುದ್ದೆಯಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. “ಹೊಸ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ನಂತರ ನಾನು ಪಕ್ಷದ ನಾಯಕ ಮತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ” ಪತ್ನಿ ಮತ್ತು ಮಕ್ಕಳೊಂದಿಗೆ ಸುದೀರ್ಘ ಚರ್ಚೆಯ ನಂತರ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಘೋಷಿಸಿದ ಜಸ್ಟಿನ್ ಟ್ರುಡೊ ಅವರು ಐ ಆಮ್ ಎ ಫೈಟರ್ ಎಂದಿರುವ ಅವರು, ಇನ್ನು ಮುಂದೆ ಚುನಾವಣೆಗೂ ನಿಲ್ಲುವುದಿಲ್ಲ ಎಂದಿದ್ಧಾರೆ. ಇನ್ನು ಪಕ್ಷದ ನಾಯಕ ಹಾಗೂ ಮುಂದಿನ ಪ್ರಧಾನಿಯನ್ನು ಶುಕ್ರವಾರ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೆ ವೇಳೆ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶದ ಸಂಸತ್ತನ್ನು ಮಾರ್ಚ್ 24 ರವರೆಗೆ ಮುಂದೂಡಲಾಗುವುದು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಇದನ್ನು ಓದಿ: ಮೋದಿಗೆ ಬೆದರಿದ್ರಾ ಕೆನಡಾ ಪ್ರಧಾನಿ? ತನ್ನದೇ ಅಧಿಕಾರಿಗಳನ್ನು ಕ್ರಿಮಿನಲ್ಗಳು ಎಂದ ಟ್ರುಡೊ! ಮತ್ತೊಂದೆಡೆ ತಮ್ಮ ರಾಜೀನಾಮೆಗೆ ಒತ್ತಡ ಹೆಚ್ಚಾದ ಕಾರಣದರೂ ಅವರು ರಾಜೀನಾಮೆ ನೀಡದಿರುವ ಕಾರಣವನ್ನು ತಿಳಿಸಿದ್ದು, ದೇಶಕ್ಕಾಗಿ, ಲಿಬರಲ್ಸ್ಗಳಿಗಾಗಿ, ಉಕ್ರೇನ್ಗಾಗಿ, ಹವಮಾನಕ್ಕಾಗಿ ರಾಜೀನಾಮೆ ನೀಡಲಿಲ್ಲ ಎಂದಿದ್ಧಾರೆ. ಇದನ್ನು ಓದಿ: ಕೆನಡಾ ಪ್ರಧಾನಿ ಕುರ್ಚಿಗೆ ಕಂಟಕ! ಜಸ್ಟಿನ್ ಟ್ರುಡೋ ಇಂದೇ ರಾಜೀನಾಮೆ ಸಾಧ್ಯತೆ! ಏನಾಗ್ತಿದೆ ಕೆನಡಾದಲ್ಲಿ? ಟ್ರೂಡೊ ಸರ್ಕಾರದಲ್ಲಿ ಉಪ ಪ್ರಧಾನಿ ಹಾಗೂ ಹಣಕಾಸು ಸಚಿವರಾದ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಡಿಸೆಂಬರ್ 16 ರಂದು ತಮ್ಮ ಹುದ್ದೆಯಿಂದ ಕೆಳಗಿಳಿದ ನಂತರ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಯಿತು. ಇವರೊಂದಿಗೆ ಸಂಸದರು ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ. ಏತನ್ಮಧ್ಯೆ ಅಮೆರಿಕಾದಲ್ಲಿ ಅಧಿಕಾರ ಬದಲಾಗುತ್ತಿದ್ದಂತೆ ಕೆನಡಾದಲ್ಲಿಯೂ ಆಡಳಿತ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಟ್ರುಡೊ ಅಧಿಕಾರಕ್ಕೆ ಬಂದಿದ್ದು ಯಾವಾಗ? ಲಿಬರಲ್ ಪಕ್ಷವು ಹೊಸ ನಾಯಕನನ್ನು ಪಡೆಯುವವರೆಗೆ ಜಸ್ಟಿನ್ ಟ್ರುಡೊ ಹಂಗಾಮಿ ಪ್ರಧಾನಿಯಾಗಿ ಉಳಿಯುತ್ತಾರೆ. ಅಂದಹಾಗೆ, ಟ್ರುಡೊ 2015 ರಲ್ಲಿ ಪ್ರಚಂಡ ವಿಜಯವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಜಸ್ಟಿನ್ ಟ್ರುಡೊ ಅವರು ಅಂದು ಕೆನಡಾದ ರಾಜಕೀಯ ಕ್ಷೇತ್ರಕ್ಕೆ ಸೂಪರ್ ಹೀರೋ ಆಗಿ ಕಾಣಿಸಿಕೊಂಡರು. ಅದರ ನಂತರ, 2019 ಮತ್ತು 2021 ರಲ್ಲೂ ಅವರು ತಮ್ಮ ಪಕ್ಷದ ಲಿಬರಲ್ಸ್ ಅನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಸಮೀಕ್ಷೆಗಳ ಪ್ರಕಾರ, ಪ್ರಸ್ತುತ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆಗಿಂತ 20 ಪಾಯಿಂಟ್‌ಗಳಿಂದ ಹಿಂದುಳಿದಿದ್ದಾರೆ ಎನ್ನಲಾಗಿದೆ. ಇವರು ತಮ್ಮ ದೇಶದ ಇತಿಹಾಸದಲ್ಲಿಯೇ ಮೊದಲ ಲಿಂಗ-ಸಮತೋಲಿತ ಕ್ಯಾಬಿನೆಟ್ ಅನ್ನು ರಚಿಸಿದರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಮತ್ತೊಂದೆಡೆ ಲಿಬರಲ್ ಪಕ್ಷದ ಸಂವಿಧಾನದಲ್ಲಿ ಮುಂದಿನ ನಾಯಕನ ಆಯ್ಕೆಯಾಗೆ ಕನಿಷ್ಠ ನಾಲ್ಕು ತಿಂಗಳ ಅವಕಾಶವಿದ್ದರೂ ಸಹ, ಪಕ್ಷವು ಮುಂದಿನ ನಾಯಕನನ್ನು ನಿರ್ಧರಿಸಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.