ಸಾಂದರ್ಭಿಕ ಚಿತ್ರ ದೇಹದ ಸುಮಾರು ಕೆಲಸಗಳು ಸರಾಗವಾಗಿ ನಡೆಯಬೇಕು ಅಂದರೆ ಅದಕ್ಕೆ ವಿಟಮಿನ್‌ಗಳು ಮತ್ತು ಮಿನರಲ್‌ಗಳು ಬೇಕಾಗುತ್ತವೆ. ಇವುಗಳು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ, ಅದೇ ಒಂಚೂರು ಕೊರತೆಯಾದ್ರೆ ಸಮಸ್ಯೆಗಳು ಶುರುವಾಗುತ್ತವೆ. ತೂಕ ಇಳಿಕೆಗೆ ವಿಟಮಿನ್ ಮತ್ತು ಮಿನರಲ್ಸ್ ಈ ಜೀವಸತ್ವಗಳು ಮತ್ತು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ದೇಹವನ್ನು ಪೋಷಿಸುವುದು ಮಾತ್ರವಲ್ಲದೇ ತೂಕ ಇಳಿಕೆಗೂ ಸಹಾಯ ಮಾಡುತ್ತವೆ. ಹೌದು, ವೇಟ್ ಲಾಸ್ ಜರ್ನಿಯಲ್ಲಿ ಈ ವಿಟಮಿನ್‌ಗಳು ನಿಮಗೆ ಸಾಕಷ್ಟು ನೆರವಾಗುತ್ತವೆ. ಉದಾಹರಣೆಗೆ ನೋಡೋದಾದ್ರೆ ವಿಟಮಿನ್ ಸಿ ಅನ್ನು ನೀವು ತೆಗೆದುಕೊಳ್ಳುವುದರಿಂದ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಬಹುದು. ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ವಾಕಿಂಗ್ vs ಊಟದ ನಂತರದ ನಡಿಗೆ: ತೂಕ ಇಳಿಕೆಗೆ ಯಾವುದು ಉತ್ತಮ? ಹೀಗೆ ಬೇರೆ ಬೇರೆ ವಿಟಮಿನ್ ಮತ್ತು ಮಿನರಲ್‌ಗಳು ತೂಕ ಇಳಿಕೆಗೆ ವಿಶೇಷವಾಗಿ ಹೊಟ್ಟೆಯ ಬೊಜ್ಜು ಕರಗಿಸಲು ಪ್ರಮುಖವಾಗಿವೆ. ಹೊಟ್ಟೆಯ ಕೊಬ್ಬು ಈ ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಇದು ಹೃದ್ರೋಗ, ಮಧುಮೇಹ ಮತ್ತು ಮೆಟಬಾಲಿಕ್ ಸಿಂಡ್ರೋಮ್‌ನಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಕೊಬ್ಬು ಸಾಮಾನ್ಯವಾಗಿ ಕಳಪೆ ಆಹಾರ, ವ್ಯಾಯಾಮದ ಕೊರತೆ ಮತ್ತು ಒತ್ತಡದಿಂದ ಉಂಟಾಗುತ್ತದೆ. ಯಾರಿಗೂ ತಮ್ಮ ಡೊಳ್ಳು ಹೊಟ್ಟೆ ಇಷ್ಟವಾಗೋದೇ ಇಲ್ಲ. ಆದ್ದರಿಂದ ಆರೋಗ್ಯ ಮತ್ತು ಅಂದ ಎರಡನ್ನೂ ಪಡೆಯಲು ಮೊದಲಿಗೆ ಹೊಟ್ಟೆ ಕೊಬ್ಬನ್ನು ಕರಗಿಸಲೇಬೇಕು. ಇದಕ್ಕೆ ಸರಿಯಾದ ವರ್ಕೌಟ್, ಸಮತೋಲಿತ ಆಹಾರ, ಒತ್ತಡ ಮುಕ್ತ ಬದುಕಿನಂತಹ ವಿಧಾನಗಳನ್ನು ಅನುಸರಿಸಬೇಕು. ಅದರ ಜೊತೆಗೆ ಜೀವಸತ್ವಗಳು ಮತ್ತು ಖನಿಜಗಳನ್ನು ತೆಗೆದುಕೊಳ್ಳುವುದು ಸಹ ಹೆಚ್ಚುವರಿ ಬೊಜ್ಜು ಕರಗುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಜೀವಸತ್ವಗಳು ಮತ್ತು ಖನಿಜಗಳು ವಿಟಮಿನ್ ಡಿ ಬೊಜ್ಜು ಮತ್ತು ಅಧಿಕ ತೂಕ ಯಾರು ಹೊಂದಿತ್ತಾರೋ ಅವರು, ವಿಟಮಿನ್ ಡಿ ಕೊರತೆ ಅನುಭವಿಸುತ್ತಿದ್ದಾರೆ ಎಂದರ್ಥ. ಸ್ಥೂಲಕಾಯತೆಯು ದೇಹದ ವಿಟಮಿನ್ ಡಿ-ಉತ್ಪಾದಿಸುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರದಿದ್ದರೂ, ಹೆಚ್ಚಿನ ಕೊಬ್ಬಿನ ಪ್ರಮಾಣವು ನಿಮ್ಮ ವ್ಯವಸ್ಥೆಯಲ್ಲಿ ಅದರ ಪರಿಚಲನೆಯನ್ನು ಮಿತಿಗೊಳಿಸುತ್ತದೆ. ಹೆಚ್ಚಿನ ವಿಟಮಿನ್ ಡಿ ಮಟ್ಟಗಳು ಸ್ಥೂಲಕಾಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಸೂಚಿಸಿದೆ. ವಿಟಮಿನ್ ಬಿ 12 ವಿಟಮಿನ್ ಬಿ 12 ಶಕ್ತಿಯ ಚಯಾಪಚಯ ಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಕೊಬ್ಬುಗಳು ಮತ್ತು ಪ್ರೋಟೀನ್‌ಗಳನ್ನು ಚಯಾಪಚಯಗೊಳಿಸಲು ಸಹಾಯ ಮಾಡುತ್ತದೆ. ಈ ವಿಟಮಿನ್ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಾರೆ, ಇದು ತೂಕ ನಿರ್ವಹಣೆ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಹಾಲು, ಮೊಟ್ಟೆ, ಮೀನು ಮುಂತಾದವು ವಿಟಮಿನ್ ಬಿ 12 ಸಮೃದ್ಧವಾಗಿದ್ದು, ಇವುಗಳನ್ನು ತಿನ್ನೋದರಿಂದ ಹೊಟ್ಟೆಯು ಚಪ್ಪಟೆಯಾಗುತ್ತದೆ. ಮೆಗ್ನೀಸಿಯಮ್ ನಿದ್ರೆಯ ಗುಣಮಟ್ಟ, ಶಕ್ತಿ ಮತ್ತು ನಿಮ್ಮ ಸ್ನಾಯುವಿನ ಆರೋಗ್ಯಕ್ಕೆ ಕಾರಣವಾದ ಈ ಖನಿಜವು ಬೀಜಗಳು, ಧಾನ್ಯಗಳು ಮತ್ತು ಎಲೆಗಳ ಸೊಪ್ಪಿನಲ್ಲಿ ಕಂಡುಬರುತ್ತದೆ, ಇದು ದೇಹದಲ್ಲಿನ 300 ಕ್ಕೂ ಹೆಚ್ಚು ಜೀವರಾಸಾಯನಿಕ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ, ಸಾಕಷ್ಟು ಮೆಗ್ನೀಸಿಯಮ್ ಸೇವನೆಯು ತೂಕ ನಷ್ಟವನ್ನು ಬೆಂಬಲಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ, ಕ್ಯಾಲ್ಸಿಯಂ ತೂಕ ನಷ್ಟ ಪ್ರಯಾಣದಲ್ಲಿ ಕ್ಯಾಲ್ಸಿಯಂ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೊಬ್ಬಿನ ಚಯಾಪಚಯ ಮತ್ತು ಶೇಖರಣೆಯಲ್ಲಿ ಕ್ಯಾಲ್ಸಿಯಂ ಪ್ರಮುಖವಾಗಿದೆ ಎನ್ನುತ್ತವೆ ಅಧ್ಯಯನಗಳು. ಸಾಕಷ್ಟು ಕ್ಯಾಲ್ಸಿಯಂ ಸೇವನೆಯು ಸ್ಥೂಲಕಾಯತೆಯ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ಹೊಟ್ಟೆಯ ಫ್ಯಾಟ್ ಅನ್ನು ಇದು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಹೆಚ್ಚಿನ ವಿಟಮಿನ್ ಸಿಯು ನಮ್ಮ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡುತ್ತದೆ. ವಿಟಮಿನ್ ಸಿ ಪಡೆಯಲು ಪ್ರತಿನಿತ್ಯ ನೀವು ನೊಂಬೆ ಕಿತ್ತಳೆ, ಸ್ಟ್ರಾಬೆರಿ ಮತ್ತು ನೆಲ್ಲಿಕಾಯಿಯನ್ನು ಸೇವಿಸಬೇಕು. ವಿಟಮಿನ್ ಸಿ ಹೊಟ್ಟೆಯ ಕೊಬ್ಬು ಕರಗಿಸಲು ಪ್ರಮುಖವಾಗಿದ್ದು, ಪ್ರತಿನಿತ್ಯ ಸೇವಿಸೋದರಿಂದ ನೀವು ಲಾಭ ಪಡೆಯಬಹುದು. ಇವುಗಳ ಜೊತೆಗೆ ಮೊಂಡುತನದ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು, ಸರಿಯಾದ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ, None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.