NEWS

Viral News: ಇದು ಓಯೋ ಅಲ್ಲ, ಇಲ್ಲಿ ರೊಮ್ಯಾನ್ಸ್ ಮಾಡಂಗಿಲ್ಲ! ಲವ್ವಿ ಡವ್ವಿ ಜೋಡಿಗಳಿಗೆ ಆಟೋ ಡ್ರೈವರ್ ಖಡಕ್ ಕಂಡೀಷನ್

ಆಟೋ ಕಂಡೀಷನ್ ಲವ್ವಿ ಡವ್ವಿ ಜೋಡಿಗಳು (Couple) ಆಟೋ ಮಾಡ್ಕೊಂಡು ಗೊತ್ತು ಗುರಿ ಇಲ್ಲದೆ ಆಟೋದಲ್ಲೇ (Auto) ರೊಮ್ಯಾನ್ಸ್ ಮಾಡ್ತಾ ಸುತ್ತೋ ಹಲವಾರು ಘಟನೆ (Incident) ನಡೆಯುತ್ತವೆ. ಇದರಿಂದ ಆಟೋ ಡ್ರೈವರ್ಸ್​ಗೆ (Auto Drivers) ಭಾರೀ ಕಿರಿಕಿರಿ. ಯಬ್ಬಾ ನಮ್ಮ ಕಣ್ಣಲ್ಲಿ ಇವನ್ನೆಲ್ಲಾ ನೋಡೋಕಾಗಲ್ಲಪ್ಪ ಅಂತಾರೆ ಆಟೋ ಚಾಲಕರು. ಆಟೋ ಅಷ್ಟೇ ಅಲ್ಲ, ಕ್ಯಾಬ್​​ಗಳ ಕಥೆಯೂ ಇದೇ. ಇಂಥದ್ದನ್ನೆಲ್ಲ ನೋಡಿ ನೋಡಿ ಸುಸ್ತಾದ ಆಟೋ ಡ್ರೈವರ್ ಒಬ್ಬ ದೊಡ್ಡದಾಗಿ ಕಂಡೀಷನ್ ಹಾಕಿದ್ದಾರೆ. ಆಟೋದಲ್ಲಿ ಕಂಡೀಷನ್ ಹಾಕಿದ ಡ್ರೈವರ್ ಆಟೋ ಡ್ರೈವರ್ ಒಂದು ಕಂಡೀಷನ್ ಹಾಕಿ ಆಟೋದಲ್ಲಿ ತೂಗಿ ಬಿಟ್ಟಿದ್ದಾರೆ. ಇದನ್ನು ನೋಡಿದ ಮೇಲಾದರೂ ಜನ ಬುದ್ಧಿ ಕಲಿಯಲಿ ಅಂತ ಹಾಕಿದ್ದಾರೋ ಏನೋ, ಆದರೆ ಇದಂತೂ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಸದ್ಯ ಆಟೋ ಡ್ರೈವರ್ ಹಾಕಿರುವ ಈ ಒಂದು ಸೂಚನಮಾ ಫಲಕ ಎಲ್ಲಾ ಕಡೆ ವೈರಲ್ ಆಗಿದ್ದು ಅವರ ಈ ಮಾತಿಗೆ ಬಹುತೇಕ ನೆಟ್ಟಿಗರು ಹೌದು ಎಂದಿದ್ದಾರೆ. ಆಟೋ ರಿಕ್ಷಾ ಡ್ರೈವರ್ ಒಬ್ಬರು ಪ್ರಯಾಣಿಕರಿಗೆ ಖಡಕ್ ಆದ ಒಂದು ಕಂಡೀಷನ್ ಹಾಕಿದ್ದಾರೆ. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರು ವಿಭಿನ್ನವಾಗಿ ರಿಯಾಕ್ಟ್ ಮಾಡುತ್ತಿದ್ದಾರೆ. ಫೋಟೋದಲ್ಲಿ 23 ವರ್ಷದ ನೆಟ್ಟಿಗರಾದ ಅನ್ಯಾ ಆಟೋದಲ್ಲಿ ಹಾಕಿದ ಪ್ರಿಂಟ್ ತೋರಿಸಿದ್ದಾರೆ. ಪ್ರಯಾಣದ ಮಧ್ಯೆ ಕ್ಲಿಕ್ ಮಾಡಿದ ಫೋಟೋದಲ್ಲಿ ಸ್ಪೆಷಲ್ ಆಗಿದ್ದ ಬರಹ ಗಮನ ಸೆಳೆದಿದೆ. ಡ್ರೈವರ್ ಸೀಟ್ ಹಿಂಭಾಗಕ್ಕೆ ನೋಟಿಸ್ ಅಂಟಿಸಲಾಗಿದೆ. ಸೂಚನಾ ಫಲಕದಲ್ಲಿ ಆಟೋದಲ್ಲಿ ರೊಮ್ಯಾನ್ಸ್ ಮಾಡುವ ಜೋಡಿಗೆ ಡ್ರೈವರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರಯಾಣಿಕರು ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಅವರು ಬರೆದಿದ್ದರು. ‘ಎಚ್ಚರಿಕೆ, ರೊಮ್ಯಾನ್ಸ್ ಮಾಡುವಂತಿಲ್ಲ. ಇದು ಕ್ಯಾಬ್, ನಿಮ್ಮ ಖಾಸಗಿ ಸ್ಥಳವೋ ಅಥವಾ ಓಯೋ ಅಲ್ಲ. ಹಾಗಾಗಿ ಅಂತರ ಕಾಯ್ದುಕೊಂಡು ಶಾಂತವಾಗಿರಿ. ಗೌರವ ಕೊಟ್ಟು, ಗೌರವ ಪಡೆಯಿರಿ. ಧನ್ಯವಾದಗಳು ಎಂದು ಬರೆಯಲಾಗಿರುವ ಸೂಚನಾ ಫಲಕ ಆಟೋದಲ್ಲಿತ್ತು. ಇದನ್ನೂ ಓದಿ: Viral News: ಹೋದಲ್ಲೆಲ್ಲ ದೊಡ್ಡ ಧ್ವನಿಯಲ್ಲಿ ಮಾತು-ಹರಟೆ! ಟ್ವಿಟರ್​​ನಲ್ಲಿ ಚರ್ಚೆಯಾಗ್ತಿದೆ ಭಾರತೀಯರ ಈ ಸ್ವಭಾವ ಈ ಪೋಸ್ಟ್​ಗೆ ಬಹಳಷ್ಟು ಜನರು ರಿಯಾಕ್ಟ್ ಮಾಡಿದ್ದು ಒಬೊಬ್ಬರು ಒಂದೊಂದು ರೀತಿ ರಿಯಾಕ್ಟ್ ಮಾಡಿದ್ದಾರೆ. ಬಹಳಷ್ಟು ಜನರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ಓಯೋ ತನ್ನ ಗೈಡ್​ಲೈನ್ಸ್ ಬದಲಾಯಿಸಿ ಅವಿವಾಹಿತ ಜೋಡಿಗೆ ಗೇಟ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಇವರು ಹೀಗೆ ನೋಟಿಚ್ ಹಚ್ಚಿದ್ದಾರೋ ಎಂದಿದ್ದಾರೆ. ಇನ್ನೋ ಕೆಲವರು ಈ ಸೂಚನೆ ಸರಿಯಾಗಿದೆ. ಸಾರ್ವಜನಿಕವಾಗಿರುವಾಗ ಸಭ್ಯತೆಯಿಂದ ವರ್ತಿಸುವುದು ಕೂಡಾ ಅಗತ್ಯ ಎಂದಿದ್ದಾರೆ. ಇದನ್ನೂ ಓದಿ: New Year: ಕ್ರಿಸ್‌ಮಸ್, ಹೊಸವರ್ಷಕ್ಕೆ ಗೋವಾಗೆ ತೆರಳುವುದಕ್ಕಿಂತ ವಿದೇಶಕ್ಕೆ ಪ್ರಯಾಣಿಸುವುದು ಉತ್ತಮ ಎಂದ ಪ್ರವಾಸಿಗರು! ನೆಟ್ಟಿಗರು ಚಾಲಕ ತಮ್ಮ ಪ್ರಯಾಣಿಕರಿಗೆ ನೀಡಿದ ನೇರ ಸೂಚನೆಯನ್ನು ಇಷ್ಟಪಟ್ಟರು. ಅವರ ನೋಟಿಸ್ ವಿಧಾನವನ್ನು ಹೊಗಳಿದರು. ಅವರಲ್ಲಿ ಹಲವರು ಎಚ್ಚರಿಕೆಯನ್ನು ತಮಾಷೆಯಾಗಿ ಪರಿಗಣಿಸಿದ್ದಾರೆ. ಹೀಗೊಂದು ನೋಟಿಸ್ ಆ ಡ್ರೈವರ್ ಹಾಕಬೇಕಾದರೆ ಎಷ್ಟೊಂದು ಜೋಡಿ ಇವರ ಆಟೋದಲ್ಲಿ ರೊಮ್ಯಾನ್ಸ್ ಮಾಡಿರಬಹುದು. ಇವರಿಗೆ ಎಷ್ಟೊಂದು ಸಲ ಮುಜುಗರವಾಗಿರಬಹುದು ಎಂದಿದ್ದಾರೆ. ಅಂತೂ ಇಂತೂ ಈ ಪೋಸ್ಟ್ ಸದ್ಯ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.