NEWS

Actor Vishal: ಹೇಗಿದ್ದ ವಿಶಾಲ್ ಹೀಗಾಗೋಕೆ ಆ ನಿರ್ದೇಶಕ ಕಾರಣನಾ? ಏನಿದು ಸ್ಫೋಟಕ ಆರೋಪ?

ತಮಿಳು ಸಿನಿಮಾ ಇವೆಂಟ್​ಗೆ ಬಂದಿದ್ದ ನಟ ವಿಶಾಲ್ (Actor Vishal) ಅವರನ್ನು ನೋಡಿದ ಅಭಿಮಾನಿಗಳು ಬಿಚ್ಚಿಬಿದ್ದಿದ್ದಾರೆ. ಇದೀಗ ವಿಶಾಲ್​ ನಟಿಸಿರುವ,​ 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ‘ಮದಗಜರಾಜ’ ಚಿತ್ರ ಈಗ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರಕ್ಕೆ ಬಂದಿದ್ದ ವಿಶಾಲ್​ ಕೈಯಲ್ಲಿ ಮೈಕ್ ಹಿಡಿಯೋಕು ಸಾಧ್ಯವಾಗ್ತಿರಲಿಲ್ಲ. ನಟನಿಗೆ ಏನಾಗಿದೆ ಅನ್ನೋ ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದ್ದು, ವಿಶಾಲ್​ ಈ ಸ್ಥಿತಿಗೆ ಈ ನಿರ್ದೇಶಕನೇ (Tamil Director) ಕಾರಣ ಏನುವ ಮಾತು ಕೇಳಿ ಬರ್ತಿದೆ. ಯಾರು ಆ ಡೈರೆಕ್ಟರ್​? ಆತ ಮಾಡಿದ ತಪ್ಪೇನು? ವಿಶಾಲ್​ ಈ ಸ್ಥಿತಿಗೆ ಈ ಡೈರೆಕ್ಟರ್​ ಕಾರಣನಾ? ವಿಶಾಲ್ ಅವರ ಈ ಸ್ಥಿತಿಗೆ ಒಬ್ಬ ಸಿನಿಮಾ ಸಿನಿಮಾ ಡೈರೆಕ್ಟರ್​ ಕಾರಣ ಎನ್ನುವ ಆರೋಪ ಕೇಳಿದ ಬಂದಿದೆ. ನಟ ವಿಶಾಲ್ ಇಂದಿನ ಸ್ಥಿತಿಗೆ ನಿರ್ದೇಶಕ ಬಾಲಾ ಕಾರಣ ಎಂದು ಒಬ್ಬ ಹಿರಿಯ ಪತ್ರಕರ್ತರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ನಿರ್ದೇಶಕ ಬಾಲಾ ನಿರ್ದೇಶನದ ಮತ್ತು ವಿಶಾಲ್ ಅಭಿನಯದ ‘ಅವನ್ ಇವನ್’ ಚಿತ್ರದಲ್ಲಿ ವಿಶಾಲ್​ ಲುಕ್ ಬದಲಿಸಿದ್ದೆ ಅವರ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಆರೋಪ ಮಾಡಿದ್ದಾರೆ. ನಿರ್ದೇಶಕ ಬಾಲಾ ಮಾಡಿದ ತಪ್ಪೇನು? ಕೆಲ ವರ್ಷಗಳ ಹಿಂದೆ ನಟ ವಿಶಾಲ್​ ಸತತವಾಗಿ ಹಿಟ್ ಚಿತ್ರಗಳನ್ನು ನೀಡುತ್ತಿದ್ದರು. ನಿರ್ದೇಶಕ ಏನ್ ಹೇಳಿದ್ರೂ ವಿಶಾಲ್ ಮಾಡ್ತಿದ್ರು. ಅವನ್​ ಇವನ್​ ಸಿನಿಮಾದಲ್ಲಿ ವಿಶಾಲ್ ದೃಷ್ಟಿ ನಾರ್ಮಲ್ ಆಗಿರಬಾರದು, ಸ್ವಲ್ಪ ಚೇಂಜ್ ಬೇಕು ಅಂತ ನಿರ್ದೇಶಕ ಬಾಲ ಹೇಳಿದ್ರು. ಅದಕ್ಕಾಗಿಯೇ ಅವರು ಕಣ್ಣಿಗೆ ಆಪರೇಷನ್ ಮಾಡಿಸಿದ್ರು. ದೃಷ್ಟಿ ಬದಲಾಯಿಸಲು, ಕಣ್ಣಿನ ಗುಡ್ಡೆಗಳನ್ನು ಎಳೆದು ಹೊಲಿಗೆ ಹಾಕಿದ್ರು ಎಂದು ವಿಡಿಯೋದಲ್ಲಿ ವ್ಯಕ್ತಿ ವಿವರಿಸಿದ್ದಾರೆ. Sad Truth - Vishal!! #AvanIvan pic.twitter.com/Kygkrty845 ಈ ಸಿನಿಮಾ ಶೂಟಿಂಗ್ ಮುಗಿದ ಬಳಿಕ ‘ಅವನ್ ಇವನ್’ ಡಬ್ಬಿಂಗ್ ವೇಳೆ ವಿಶಾಲ್ ದೃಷ್ಟಿ ಸರಿಯಾಗಿದ್ದರೂ ಅವರ ದೃಷ್ಟಿ ತಾನಾಗಿಯೇ ಬದಲಾಗುತ್ತಿತ್ತು ಅಂತ ಬಾಲಾ ಅವರೇ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರಂತೆ. ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ರು ವಿಶಾಲ್​ ಅದೇ ಹೊತ್ತಿಗೆ ವಿಶಾಲ್‌ ಅವರಿಗೆ ಆರೋಗ್ಯ ಸಮಸ್ಯೆಯೂ ಶುರುವಾಯಿತು. ಅವರು ಆಗಾಗ್ಗೆ ಮೈಗ್ರೇನ್ ಹೊಂದಿದ್ದರು. ಹಲವು ಚಿಕಿತ್ಸೆಗಳನ್ನು ತೆಗೆದುಕೊಂಡರೂ ಪರಿಹಾರ ಸಿಗಲಿಲ್ಲ. ಕೆಲವು ಕೆಟ್ಟ ಚಟಗಳಿಗೆ ಬಿದ್ದಿದ್ದರು. ಇದರ ಪರಿಣಾಮ ಇಂದು ವಿಶಾಲ್ ಈ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಈ ವಿಡಿಯೋದಲ್ಲಿ ಎಷ್ಟು ಸತ್ಯಾಂತವಿದೆ ಅನ್ನೋದು ತಿಳಿದಿಲ್ಲ. ಕೈ ನಡುಗುತ್ತಿದೆ, ಮಾತು ತೊದಲುತ್ತಿದೆ! ತಮಿಳು ನಟ ವಿಶಾಲ್ ಅವರ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕುರಿತು ಮಾತಾಡಲು ಮೈಕ್​ ಹಿಡಿದ ನಟ ವಿಶಾಲ್​ ಕೈ ನಡುಗುತ್ತಿತ್ತು. ದೊಡ್ಡ ದೊಡ್ಡ ಡೈಲಾಗ್​ ಹೇಳ್ತಾ, ಚಟ-ಪಟ ಮಾತಾಡ್ತಿದ್ದ ನಟ ವಿಶಾಲ್​​, ಯಾಕೋ ಇವತ್ತಿನ ಕಾರ್ಯಕ್ರಮದಲ್ಲಿ ತೊದಲುತ್ತಿದ್ರು. ವಿಶಾಲ್ ಲುಕ್ ಬದಲಾಗಿತ್ತು. ವಿಶಾಲ್​ ನೋಡಿ ಶಾಕ್ ಆದ ಅಭಿಮಾನಿಗಳು ನಿಜಕ್ಕೂ ನಟನಿಗೆ ಏನಾಗಿದೆ ಅಂತ ಕಂಗಾಲಾಗಿದ್ದಾರೆ. ವೈದ್ಯರು ಕೊಟ್ಟ ಸ್ಪಷ್ಟನೆ ಏನು? ತಮ್ಮ ನೆಚ್ಚಿನ ನಾಯಕನಿಗೆ ಏನಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಟ ವಿಶಾಲ್ ಅವರು ತೀವ್ರ ಚಳಿ, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ವೈರಲ್​ ಫೀವರ್ ಅವರನ್ನ ಕಾಡ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ವಿಶಾಲ್​ ಆರೋಗ್ಯ ಕುರಿತ ಹೆಲ್ತ್ ಬುಲೆಟಿನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.