ಸಾಂಕೇತಿಕ ಚಿತ್ರ ಬಂಗಾಳದಲ್ಲಿ ಹಿಲ್ಸಾ ಇಲ್ಲವೇ ಇಲಿಶ್ (Ilish) ಎಂದು ಕರೆಯಿಸಿಕೊಳ್ಳುವ ಮೀನಿಗೆ ಬೇಡಿಕೆ ತುಸು ಅಧಿಕವಾಗಿರುತ್ತದೆ. ಮನೆ, ಹೋಟೆಲ್ ರೆಸ್ಟಾರೆಂಟ್‌ಗಳಲ್ಲಿ ಕೂಡ ಹಿಲ್ಸಾ ಮೀನಿನ ಒಂದಲ್ಲಾ ಒಂದು ಡಿಶ್ ಇದ್ದೇ ಇರುತ್ತದೆ. ಬಹುಶಃ ಬಂಗಾಳಿಗರಿಗೆ ಈ ಮೀನಿನ ಖಾದ್ಯವಿಲ್ಲದೆ ಊಟವೇ ಸೇರದು ಎಂಬುವಷ್ಟರ ಮಟ್ಟಿಗೆ ಈ ಮೀನಿನೊಂದಿಗೆ ನಿಕಟತೆಯನ್ನು ಹೊಂದಿದ್ದಾರೆ. ಮಾನ್ಸೂನ್ ಸಮಯವೆಂದರೆ ಅದು ಹಿಲ್ಸಾ ಋತು ಎಂಬುವಷ್ಟರ ಮಟ್ಟಿಗೆ ಬಂಗಾಳದಲ್ಲಿ ಹಿಲ್ಸಾ ಮೀನಿನ ತರೇಹವಾರಿ ಖಾದ್ಯಗಳು (Fish Curry) ದೊರೆಯುತ್ತವೆ. ಬಂಗಾಳಿಗರ ಪ್ರಮುಖ ಖಾದ್ಯವಾದ ಹಿಲ್ಸಾ ಇಲ್ಲವೇ ಇಲಿಶ್ ಮೀನಿನಿಂದ ತಯಾರಿಸಲಾಗುವ ಐದು ಪ್ರಮುಖ ಖಾದ್ಯಗಳ ವಿವರಗಳನ್ನು ಇಂದಿಲ್ಲಿ ನೀಡುತ್ತಿದ್ದು, ನೀವು ಒಮ್ಮೆ ಟ್ರೈ ಮಾಡಬಹುದು. ಇದನ್ನೂ ಓದಿ: ಇಲಿಶ್ ಇಲ್ಲವೇ ಹಿಲ್ಸಾ ಪುಲಾವ್ ಬೇಕಾದ ಸಾಮಾಗ್ರಿಗಳು ಬಾಸ್ಮತಿ ಅಕ್ಕಿ 500 ಗ್ರಾಮ್ ಹಿಲ್ಸಾ 600-700 ಗ್ರಾಮ್ ಹಿಲ್ಸಾ ತಲೆ – 3 ಸಾಸಿವೆ ಎಣ್ಣೆ – 300 ಎಮ್‌ಎಲ್ ಈರುಳ್ಳಿ – 3 ಬೆಳ್ಳುಳ್ಳಿ ಪೇಸ್ಟ್ – 1 ½ ಚಮಚ ಮೆಣಸಿನ ಹುಡಿ – 1 ½ ಚಮಚ ಅರಶಿನ ಹುಡಿ – 2 ಚಮಚ ಉಪ್ಪು – ರುಚಿಗೆ ತಕ್ಕಷ್ಟು ಸಕ್ಕರೆ – 2 ಚಮಚ ಹಸಿಮೆಣಸಿನ ಪೇಸ್ಟ್ – 1 ಚಮಚ ಸಾಸಿವೆ ಪೇಸ್ಟ್ 1 ಚಮಚ ಮಾಡುವ ವಿಧಾನ ಮೊದಲಿಗೆ ಮೀನಿನ ತಲೆಯನ್ನು ಅರಶಿನ, ಉಪ್ಪು ಹಾಕಿ ಮ್ಯಾರಿನೇಟ್ ಮಾಡಬೇಕು ನಂತರ ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು. ಎಣ್ಣೆ ಹಾಗೂ ಮೀನಿನ ತಲೆಯನ್ನು ಪ್ರತ್ಯೇಕವಾಗಿ ಇರಿಸಿ. ಹಿಲ್ಸಾ ತಲೆಯನ್ನು 1 ಲೀಟರ್ ನೀರಿನಲ್ಲಿರಿಸಿ ಹಾಗೂ ಸ್ಟಾಕ್ ತಯಾರಿಸಲು ಅದನ್ನು 20 ನಿಮಿಷ ಬೇಯಿಸಿ. ಮೀನಿನ ತಲೆಯನ್ನು ತೆಗೆದು ಸ್ಟಾಕ್ ಅನ್ನು ಸಣ್ಣ ಉರಿಯಲ್ಲಿ ಕುದಿಸಿ. ಈರುಳ್ಳಿಯನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಹಿಲ್ಸಾ ತುಂಡುಗಳನ್ನು ಅರಶಿನ, ಉಪ್ಪಿನಲ್ಲಿ ಮ್ಯಾರಿನೇಟ್ ಮಾಡಿ ಹಾಗೂ ಮೀನಿನ ತಲೆಯನ್ನು ಹುರಿದ ಅದೇ ಎಣ್ಣೆಯಲ್ಲಿ ಹುರಿದುಕೊಳ್ಳಿ. ಅದೇ ಎಣ್ಣೆಗೆ ಬೆಳ್ಳುಳ್ಳಿ ಪೇಸ್ಟ್, ಸಾಸಿವೆ ಪೇಸ್ಟ್, ಮೆಣಸಿನ ಹುಡಿ, ಅರಶಿನ ಹಾಕಿ ಬೇಯಿಸಿ. ಇದಕ್ಕೆ ಹಿಲ್ಸಾ ಸ್ಟಾಕ್ (ತಲೆ ಬೇಯಿಸಿದ ನೀರು) ಹಾಕಿ ಕುದಿಸಿಕೊಳ್ಳಿ ದಪ್ಪ ತಳದ ಪಾತ್ರೆಯಲ್ಲಿ ಬೇ ಲೀಫ್ ಹಾಗೂ ಉಪ್ಪು ಹಾಕಿ ಅನ್ನವನ್ನು ಮುಕ್ಕಾಲು ಭಾಗ ಬೇಯಿಸಿ. ಇದೀಗ ದಪ್ಪ ತಳದ ತಾಮ್ರದ ಪಾತ್ರೆಯನ್ನು ತೆಗೆದುಕೊಂಡು ಅರ್ಧ ಬೆಂದ ಅನ್ನ ಹಾಗೂ ಹಿಲ್ಸಾ ಸ್ಟಾಕ್ ಅನ್ನು ಪದರದಂತೆ ಹಾಕಿ. ಇದಾದ ಮೇಲೆ ಹಿಲ್ಸಾ ತುಂಡು, ½ ಸಾಸಿವೆ ಎಣ್ಣೆ ಹಾಗೂ ಹುರಿದ ಈರುಳ್ಳಿಯನ್ನು ಹಾಕಿ. ಉಳಿದ ಅನ್ನವನ್ನು ಇದರ ಮೇಲೆ ಹಾಕಿ ಹಾಗೂ ಇನ್ನುಳಿದ ಪದಾರ್ಥಗಳನ್ನು ಹೀಗೆಯೇ ಮಾಡಿ. ಮುಚ್ಚಳವಿರುವ ಪಾತ್ರೆಯಿಂದ ಮುಚ್ಚಿ ಹಾಗೂ ಪಾತ್ರೆಯ ಅಂಚನ್ನು ಹಿಟ್ಟಿನಿಂದ ದಮ್ ಮಾಡಿ. ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ನಲ್ಲಿರಿಸಿ 30 ನಿಮಿಷ ಪುಲಾವ್ ಬೇಯಿಸಿ. ಬಿಸಿ ಬಿಸಿಯಾಗಿ ಬಡಿಸಿ ಬದನೆಕಾಯಿ ಮತ್ತು ಕೆಂಪು ಕುಂಬಳಕಾಯಿಯೊಂದಿಗೆ ಹಿಲ್ಸಾ ಕರಿ ಬೇಕಾಗುವ ಸಾಮಾಗ್ರಿಗಳು ಹಿಲ್ಸಾ - 800 ಗ್ರಾಂ ಬದನೆ - 6-8 ತುಂಡುಗಳು ಕೆಂಪು ಕುಂಬಳಕಾಯಿ – 4-5 ತುಂಡು ನಿಗೆಲ್ಲಾ ಬೀಜ – 1 ಚಮಚ ಹಸಿಮೆಣಸಿನ ಕಾಯಿ 3,4 ಸಾಸಿವೆ ಎಣ್ಣೆ – 150 ಎಮ್‌ಎಲ್ ಅರಶಿನ ಪುಡಿ 1 ½ ಚಮಚ ಉಪ್ಪು – ರುಚಿಗೆ ತಕ್ಕಷ್ಟು ಮಾಡುವ ವಿಧಾನ ಹಿಲ್ಸಾವನ್ನು ಸ್ವಚ್ಛಗೊಳಿಸಿ ನಂತರ ತೊಳೆದು ಒಣಗಿಸಿ. ½ ಟೀಸ್ಪೂನ್ ಅರಿಶಿನ ಪುಡಿ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಿ. ಕಡಾಯಿಯಲ್ಲಿ ಸಾಸಿವೆ ಎಣ್ಣೆ ಹಾಕಿ ಬಿಸಿಯಾದೊಡನೆ ಹಿಲ್ಸಾ, ಬದನೆ, ಕುಂಬಳ ಕಾಯಿಯನ್ನು ಒಂದಾದ ಮೇಲೆ ಒಂದರಂತೆ ಹುರಿದುಕೊಳ್ಳಿ. ಉಳಿದ ಎಣ್ಣೆಯಲ್ಲಿ, ನಿಗೆಲ್ಲ ಬೀಜಗಳು ಮತ್ತು ಹಸಿರು ಮೆಣಸಿನಕಾಯಿ ಹುರಿದುಕೊಳ್ಳಿ. ಹುರಿದ ಬೀಜ ಹಾಗೂ ಮೆಣಸನ್ನು ಅರೆದುಕೊಳ್ಳಿ. ಉಳಿದ ಅರಿಶಿನವನ್ನು ನೀರಿನಲ್ಲಿ ಕರಗಿಸಿ ಎಣ್ಣೆಗೆ ಸೇರಿಸಿ, ಅರಿಶಿನದ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಇದಕ್ಕೆ 2 ಕಪ್ ನೀರು ಹಾಕಿ. ಸಾರು ಕುದಿ ಬಂದ ನಂತರ ಬದನೆಕಾಯಿ, ಕುಂಬಳಕಾಯಿ ಮತ್ತು ಹಿಲ್ಸಾ ಸೇರಿಸಿ ಮತ್ತು ಮುಚ್ಚಳವನ್ನು ಹಾಕಿ 5-8 ನಿಮಿಷ ಬೇಯಿಸಿ. ಹಿಲ್ಸಾ ಟ್ರಾಮ್ಫ್ರಾಡೊ ರೆಸಿಪಿ ಬೇಕಾದ ಸಾಮಾಗ್ರಿಗಳು ಇಲಿಶ್ - 800 ಗ್ರಾಂ ಈರುಳ್ಳಿ ಪೇಸ್ಟ್ - 3 ಚಮಚ ಅರಿಶಿನ ಪುಡಿ - 1 ಚಮಚ ಕೆಂಪು ಮೆಣಸಿನ ಪುಡಿ - 2/3 ಚಮಚ ತೆಂಗಿನ ಹಾಲು - 100 ಎಮ್‌ಎಲ್ ಗಂಧೋರಾಜ್ ನಿಂಬೆ ಎಲೆಗಳು 4 ತುಂಡು ತಾಜಾ ಗಂಧೋರಾಜ್ ನಿಂಬೆ ರಸ - 3 ಚಮಚ ಶುಂಠಿ ಮತ್ತು ಜೀರಿಗೆ ಪೇಸ್ಟ್ - 2 ಚಮಚ ಸಾಸಿವೆ ಎಣ್ಣೆ - 200 ಮಿಲಿ ಉಪ್ಪು – ರುಚಿಗೆ ತಕ್ಕಷ್ಟು ಮಾಡುವ ವಿಧಾನ ಹಿಲ್ಸಾವನ್ನು ಉಪ್ಪು ಅರಶಿನ ಹಾಕಿ ಮ್ಯಾರಿನೇಟ್ ಮಾಡಿ. ನಂತರ ಮೀನನ್ನು ಎರಡೂ ಬದಿ ಫ್ರೈ ಮಾಡಿ. ಸಾಸಿವೆ ಎಣ್ಣೆಯನ್ನು ಕಡಾಯಿಗೆ ಹಾಕಿ ಇದಕ್ಕೆ ಈರುಳ್ಳಿ ಪೇಸ್ಟ್ ಸೇರಿಸಿ ಹಾಗೂ ಈರುಳ್ಳಿ ಕೆಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಶುಂಠಿ ಜೀರಿಗೆ ಪೇಸ್ಟ್, ಅರಿಶಿನ, ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಕರಗಿಸಿ ಕಡಾಯಿಗೆ ಹಾಕಿ. 200 ಎಮ್‌ಎಲ್ ನೀರು ಹಾಕಿ ಲಿಂಬೆ ಎಲೆ ಹಾಕಿ ಕುದಿಯಲು ಬಿಡಿ. ತೆಂಗಿನ ಹಾಲು, ನಿಂಬೆ ರಸ ಮತ್ತು ಉಪ್ಪು ಹಾಕಿದರೆ ಹಿಲ್ಸಾ ಕರ್ರಿ ತಯಾರು. ಕುಂಬಳಕಾಯಿ ಮತ್ತು ಮೆಣಸಿನಕಾಯಿ ಉಪ್ಪಿನಕಾಯಿಯೊಂದಿಗೆ ಹಿಲ್ಸಾ ರೆಸಿಪಿ ಬೇಕಾದ ಸಾಮಾಗ್ರಿಗಳು ಹಿಲ್ಸಾ - 800 ಗ್ರಾಂ (5-6 ತುಂಡುಗಳು) ಉಪ್ಪಿನಕಾಯಿ - 3 ಚಮಚ ಶುಂಠಿ - 1 ಚಮಚ ಜೀರಿಗೆ ಪೇಸ್ಟ್ - 1 ಚಮಚ ಸಾಸಿವೆ ಎಣ್ಣೆ - 100 ಮಿಲಿ ಅರಿಶಿನ ಪುಡಿ - 1 ಚಮಚ ಎಳೆ ಕುಂಬಳಕಾಯಿ ಕಾಂಡಗಳು - 10-12 ತುಂಡುಗಳು ಉಪ್ಪಿನಕಾಯಿ ಮಾಡಲು ಹಸಿ ಮೆಣಸಿನಕಾಯಿ - 200 ಗ್ರಾಂ ಮಾಡುವ ವಿಧಾನ ಹಸಿಮೆಣಸು, ಬೆಳ್ಳುಳ್ಳಿ ಹಾಗೂ ಶುಂಠಿ ತುಂಡರಿಸಿ ವಿನೇಗರ್‌ನಲ್ಲಿ ಹಾಕಿಡಿ. ಎಲ್ಲಾ ಇತರ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಗಾಜಿನ ಜಾರ್‌ನಲ್ಲಿ 1-2 ದಿನಗಳವರೆಗೆ ಸಂಗ್ರಹಿಸಿ. ಹಿಲ್ಸಾವನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಮ್ಯಾರಿನೇಟ್ ಮಾಡಿ, ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಮೀನನ್ನು ಫ್ರೈ ಮಾಡಿ. ಒಂದು ಕಡಾಯಿಯಲ್ಲಿ, ಶುಂಠಿ, ಜೀರಿಗೆ ಪೇಸ್ಟ್, ಅರಿಶಿನ ಸೇರಿಸಿ, ಸ್ವಲ್ಪ ನೀರು ಸೇರಿಸಿ ಮತ್ತು ಕುಂಬಳಕಾಯಿ ಕಾಂಡಗಳನ್ನು ಸೇರಿಸಿ. ಇದಕ್ಕೆ ಮೀನು ಸೇರಿಸಿ. ಉಪ್ಪಿನ ಕಾಯಿ ಸೇರಿಸಿ ನಂತರ ಮೀನು ಬೇಯುವವರೆಗೆ ಕುದಿಸಿ ಡೋಯಿ ಇಲಿಶ್ ರೆಸಿಪಿ ಬೇಕಾದ ಸಾಮಾಗ್ರಿಗಳು ಹಿಲ್ಸಾ ಮೀನು - 800 ಗ್ರಾಂ ಸಾಸಿವೆ ಎಣ್ಣೆ - 200 ಮಿಲಿ ಮೊಸರು - 150 ಗ್ರಾಂ ಹಸಿಮೆಣಸು - 3-4 ತುಂಡುಗಳು ಗಸಗಸೆ ಬೀಜಗಳನ್ನು ಹಸಿ ಮೆಣಸಿನೊಂದಿಗೆ ನೀರಿನಲ್ಲಿ ನೆನೆಸಿ ಮತ್ತು ಪೇಸ್ಟ್ ಮಾಡಿ - 1 ½ ಚಮಚ ಹಸಿ ಮೆಣಸು ಮತ್ತು ಉಪ್ಪಿನೊಂದಿಗೆ ನೀರಿನಲ್ಲಿ ನೆನೆಸಿದ ಕಪ್ಪು ಸಾಸಿವೆ ಬೀಜಗಳು - 1 ½ ಚಮಚ ಉಪ್ಪು - ರುಚಿಗೆ ನಿಗೆಲ್ಲ ಬೀಜಗಳು - ½ ಚಮಚ ಕಾರ್ನ್ ಹಿಟ್ಟು - 1 ½ ಚಮಚ ಮಾಡುವ ವಿಧಾನ ಮೀನನ್ನು ಸ್ವಚ್ಛಗೊಳಿಸಿ, ತೊಳೆಯಿರಿ ಮತ್ತು ಒಣಗಿಸಿ. ಒಣಗಿದ ಮೀನನ್ನು ಸ್ವಲ್ಪ ಕಾರ್ನ್ ಫ್ಲೋರ್ ಮತ್ತು ಉಪ್ಪಿನೊಂದಿಗೆ ನೆನೆಸಿ. ಒಂದು ಕಡಾಯಿಯನ್ನು ತೆಗೆದುಕೊಂಡು, ಸಾಸಿವೆ ಎಣ್ಣೆಯನ್ನು ಹಾಕಿ ಮತ್ತು ಮೀನನ್ನು ಚೆನ್ನಾಗಿ ಹುರಿಯಿರಿ. ಅದೇ ಎಣ್ಣೆಯಲ್ಲಿ, ನಿಗೆಲ್ಲ ಬೀಜಗಳು ಮತ್ತು ಸೀಳಿದ ಹಸಿ ಮೆಣಸಿನ ಕಾಯಿಯ ಒಗ್ಗರಣೆ ಸಿದ್ಧಪಡಿಸಿ ಗಸಗಸೆ ಪೇಸ್ಟ್ ಮತ್ತು ಕಪ್ಪು ಸಾಸಿವೆ ಪೇಸ್ಟ್ ಸೇರಿಸಿ. ಗ್ರೇವಿಗೆ ಮೀನು ಸೇರಿಸಿ, ಮಸಾಲೆ ರುಚಿ ನೋಡಿ, ಬೇಯಿಸಿದ ಅನ್ನದೊಂದಿಗೆ ಬಿಸಿಯಾಗಿ ಬಡಿಸಿ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.