NEWS

Bengaluru: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್; ಬಂದೇ ಬಿಡ್ತು ಯೆಲ್ಲೋ ಲೈನ್ ಮೊದಲ ರೈಲು!

News ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Metro Yellow line) ಮೊದಲ ರೈಲು ಸೇರ್ಪಡೆಯಾಗಿದೆ. ಬಿಎಂಆರ್‌ಸಿಎಲ್​​ಗೆ (BMRCL) ಒಪ್ಪಂದದಂತೆ ಟಿಟಾಘರ್ ರೈಲು ಸಿಸ್ಟಮ್ ಮೊದಲ ಟ್ರೇನ್ ಹಸ್ತಾಂತರ ಮಾಡಿದ್ದು, ಈ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (MP Tejasvi Surya) ಉಪಸ್ಥಿತಿದ್ದರು. ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್ ಗೆ ಮೊದಲ ಮೆಟ್ರೋ ರೈಲನ್ನು ಪಶ್ಚಿಮ ಬಂಗಾಳದಲ್ಲಿರುವ ಟಿಟಾಘರ್ ರೈಲು ಸಿಸ್ಟಮ್ ಪೂರೈಕೆ ಮಾಡಿದೆ. ಅಂದಹಾಗೆ ಮೆಟ್ರೋ ರೈಲು ಪೂರೈಕೆ ಮಾಡಲು ಬಿಎಂಆರ್​​​ಸಿಎಲ್ ಚೀನಾದ ಕಂಪನಿಗೆ ಗುತ್ತಿಗೆ ನೀಡಿತ್ತು. ಚೀನಾ ಕಂಪನಿಯ ಭಾರತದ ಪಶ್ಚಿಮ ಬಂಗಾಳದ ಟಿಟಾಘರ್ ರೈಲು ಸಿಸ್ಟಮ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದರಂತೆ ಇಂದು ಹಳದಿ ಮಾರ್ಗದ ಮೊದಲ ರೈಲನ್ನು ನೀಡಲಾಗಿದೆ. ಶೀಘ್ರವೇ ಮೆಟ್ರೋ ಸಂಚಾರ ಆರಂಭ ನಿರೀಕ್ಷೆ ಅಂದಹಾಗೇ, ಬೆಂಗಳೂರಿನ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿಮೀ ದೂರ ಯೆಲ್ಲೋ ಲೇನ್ ಮೆಟ್ರೋ ಸಂಚಾರ ನಡೆಯಲಿದೆ. ಆದರೆ ಈಗಾಗಲೇ ಯೆಲ್ಲೋ ಲೇನ್ ಕಾಮಗಾರಿ ಮುಗಿದಿದ್ದರೂ, ಮೆಟ್ರೋ ಟ್ರೇನ್ ಇಲ್ಲದೇ, ಸಂಚಾರ ಆರಂಭವಾಗಿಲ್ಲ. ಈಗ ಟಿಟಾಘರ್ ರೈಲು ಸಿಸ್ಟಮ್ ಕಂಪನಿ ಮೊದಲ ಮೆಟ್ರೋ ಟ್ರೇನ್ ಪೂರೈಸಿದ್ದು, ಶೀಘ್ರವೇ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: Sadak Suraksha Abhiyan: ಡಿಗ್ರಿ ವಿದ್ಯಾರ್ಥಿಗಳಿಗೆ ಡ್ರೈವಿಂಗ್ ಲೈಸ್ಸೆನ್ಸ್, ರೋಡ್ ಸೇಫ್ಟಿ ಬಗ್ಗೆ ಅವೇರ್‌ನೆಸ್! ಸರ್ಕಾರಿ ಕಾಲೇಜ್‌ನಿಂದ ಮಾದರಿ ಅಭಿಯಾನ ಬೆಂಗಳೂರಿಗೆ ಆಗಮಿಸಿದ ನಂತರ, ಹೊಸದಾಗಿ ಸ್ವೀಕರಿಸಿದ ರೈಲು ಸಾರ್ವಜನಿಕ ಸೇವೆಗೆ ಅದರ ಸಿದ್ಧತೆಗೂ ಮುನ್ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಯೆಲ್ಲೋಲೈನ್ ಗೆ 2ನೇ ಮತ್ತು 3ನೇ ರೈಲು ಬರುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ ವೇಳೆಗೆ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಸಂಸದರಿಗೆ ಕೇಂದ್ರ ಸಚಿವರ ಮೆಚ್ಚುಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಸಂಚಾರ ದಟ್ಟಣೆಯ ನಿಯಂತ್ರಣಕ್ಕೆ ಹಳದಿ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ. ಕೋಲ್ಕತ್ತಾದಿಂದ ಶೀಘ್ರವೇ ಬೆಂಗಳೂರಿಗೆ ರೈಲು ತಲುಪಲಿದ್ದು, ಮಾರ್ಚ್ ಮತ್ತು ಏಪ್ರಿಲ್ ಬಳಿಕ ರೈಲಿಗೆ ಪ್ರತಿ ತಿಂಗಳು ಎರಡು ಬೋಗಿಗಳು ಬರಲಿದೆ ಎಂದು ವಿವರಿಸಿದ್ದಾರೆ. ಇನ್ನು ಸಂಸದರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ತೇಜಸ್ವಿ ಅವರನ್ನು ಮೆಟ್ರೋ ಮಿತ್ರ ಎಂದು ಕರೆದಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.