ಸಾಂದರ್ಭಿಕ ಚಿತ್ರ ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದತ್ತ ಹೆಚ್ಚೆಚ್ಚು ಒಲವು ಬೆಳೆಸಿಕೊಳ್ಳುತ್ತಿದ್ದು ತಮ್ಮ ತೂಕ ನಷ್ಟ (Weight Loss) ಪ್ರಯಾಣವನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ ಈ ಮೂಲಕ ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ. ಫಿಟ್‌ನೆಸ್ (Fitness) ತರಬೇತುದಾರ ಯತಿನೇಶ್ ನಿರ್ಭವ್ನೆ ಕೂಡ ತಮ್ಮ ಕ್ಲೈಂಟ್ ಟ್ರಾನ್ಸ್‌ಫಾರ್ಮೇಶನ್ ಜರ್ನಿಯನ್ನು ಸಾಮಾಜಿಕ ತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಾರೆ ಈ ಮೂಲಕ ತೂಕ ಇಳಿಸಿಕೊಳ್ಳುವವರಿಗೆ ಹೊಸ ಉಮೇದು ಹುಮ್ಮಸ್ಸು ಬರಿಸುತ್ತಾರೆ. 100 ದಿನಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಒಮರ್ ಇತ್ತೀಚಿನ ತಮ್ಮ ಪೋಸ್ಟ್‌ನಲ್ಲಿ 100 ದಿನಗಳಲ್ಲಿ 23 ಕೆಜಿ ಇಳಿಸಿಕೊಂಡ ತಮ್ಮ ಕ್ಲೈಂಟ್ ಒಮರ್ ತೂಕ ನಷ್ಟ ಮಾಹಿತಿಯನ್ನು ಹಂಚಿಕೊಂಡಿದ್ದು, ನಮ್ಮಿಂದ ತೂಕ ಇಳಿಸಲು ಸಾಧ್ಯವಿಲ್ಲ ಎಂಬುವವರಿಗೆ ಇದೊಂದು ಸ್ಫೂರ್ತಿಯಾಗಿದೆ. ತಮ್ಮ ತೂಕ ಇಳಿಕೆಯಲ್ಲಿ ಮಹತ್ವದ ಪ್ರಭಾವ ಬೀರಿರುವ ಫ್ಯಾಟ್ ಲೋಸ್ ಮೀಲ್‌ಗಳನ್ನು ತಿಳಿಸಿದ್ದು, ಅದೇನು ಎಂಬುದನ್ನು ನೋಡೋಣ. ಇದನ್ನೂ ಓದಿ: ಚಳಿಗಾಲದಲ್ಲಿ ವೆಜ್ ತಿನ್ನೋಕೆ ಬೋರ್ ಆಗಿದೆಯಾ? ಈ ಹೈದ್ರಾಬಾದಿ ಎಗ್ ರೆಸಿಪಿ ಟ್ರೈ ಮಾಡಿ ನೋಡಿ ಫ್ಯಾಟ್ ಲಾಸ್ ಮೀಲ್ ಆಪ್ಶನ್ಸ್ ಫಿಟ್‌ನೆಸ್ ಕೋಚ್ ಯತಿನೇಶ್ ಹೇಳುವಂತೆ ಒಮರ್, 95 ಕೆಜಿ ತೂಕವಿದ್ದರು. ಫ್ಯಾಟ್ ಲೋಸ್ ಡಯೆಟ್ ಅನುಸರಿಸಿ 120 ದಿನಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಅಂದರೆ ಬರೋಬ್ಬರಿ 4 ತಿಂಗಳು ಕಟ್ಟುನಿಟ್ಟಾಗಿ, ಪಟ್ಟುಬಿಡದೆ ತೂಕ ನಷ್ಟ ಪ್ರಯಾಣದಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರ ತೂಕ 68 ಕೆಜಿಯಾಗಿದ್ದು ಎರಡು ಸೆಟ್‌ಗಳ ಫ್ಯಾಟ್ ಲೋಸ್ ಡಯೆಟ್ ಅನ್ನು ಕೋಚ್ ತಿಳಿಸಿದ್ದು ಅದರಲ್ಲಿ ಮೂರು ಮೀಲ್ ಆಯ್ಕೆಗಳನ್ನು ಮುಂದಿಟ್ಟಿದ್ದಾರೆ. ಹೊಸ ವರ್ಷದ ರೆಸಲ್ಯೂಶನ್‌ನಲ್ಲಿ ವೇಟ್ ಲಾಸ್ ನಿಮ್ಮ ಮುಖ್ಯ ಗೋಲ್ ಆಗಿದ್ದರೆ ಈ ಡಯೆಟ್ ಅನ್ನು ಫಾಲೋ ಮಾಡಬಹುದು. ಸಕ್ಕರೆ ಪೂರ್ತಿ ತ್ಯಜಿಸಿದ್ದ ಒಮರ್ ಬೇಯಿಸಿದ ಎಗ್ ವೈಟ್ಸ್, ಸೇಬಿನ ತುಂಡು, ನೆನೆಸಿದ ಬಾದಾಮಿ ರೋಟಿ, ಕರಿ, ಮೊಸರು, ಪಲ್ಯ ಹಾಗೂ ಬೇಳೆಕಾಳು ಪನೀರ್, ರೋಟಿ, ಪಲ್ಯ, ಸೌತೆಕಾಯಿ ಎರಡನೇ ಮೀಲ್ ಪ್ಲ್ಯಾನ್‌ನಲ್ಲಿ ಯತಿನೇಶ್ ಹೇಳುವಂತೆ ಒಮರ್ 4 ತಿಂಗಳ ಕಾಲ ಸಕ್ಕರೆಯನ್ನು ತ್ಯಜಿಸಿದರು. ಡಯೆಟ್ ಪ್ಲ್ಯಾನ್ ಪ್ರಕಾರ ಬೆಚ್ಚಗಿನ ಜೀರಿಗೆ ನೀರನ್ನು ಬೆಳಗ್ಗೆದ್ದೊಡನೆ ಸೇವಿಸುತ್ತಿದ್ದರು. ಮೀಲ್ 1 ರಲ್ಲಿ 50 ಗ್ರಾಮ್ ಮಸಾಲೆ ಓಟ್ಸ್, ರೋಸ್ಟೆಡ್ ಪೀನಟ್ಸ್ ಹಾಗೂ ಸೌತೆಕಾಯಿ ಹೋಳು ಸೇವಿಸುತ್ತಿದ್ದರು. ಮೀಲ್ 2 ನಲ್ಲಿ 2 ಮಧ್ಯಮ ಗಾತ್ರದ ರೋಟಿ, ಸೋಯಾ ಚಂಕ್ಸ್ ಹಾಗೂ ಕಪ್ಪು ಚನ್ನಾ ಪಲ್ಯ, 1 ಸೌತೆಕಾಯಿ ತೆಗೆದುಕೊಳ್ಳುತ್ತಿದ್ದರು. ಮೀಲ್ 3 ಯಲ್ಲಿ 1 ಮಧ್ಯಮ ಗಾತ್ರದ ಪಚ್ಚೆಹೆಸರು ಪಲ್ಯ, 15 ಗ್ರಾಮ್ ಬೇಯಿಸಿದ ಅನ್ನ, ಸಲಾಡ್ ಸೇವಿಸುತ್ತಿದ್ದರು. ಡಯೆಟ್‌ನಲ್ಲಿ ಪ್ರೊಟೀನ್ ಸೇರ್ಪಡೆ ಪ್ರತಿ ಮೀಲ್‌ನಲ್ಲಿ ಒಮರ್ ಪ್ರೊಟೀನ್ ತೆಗೆದುಕೊಳ್ಳುವುದನ್ನು ಮಿಸ್ ಮಾಡುತ್ತಿರಲಿಲ್ಲ. ಆರೋಗ್ಯಕರ ಡಯೆಟ್‌ಗಾಗಿ ಹಾಗೂ ತೂಕ ನಷ್ಟಕ್ಕೆ ಪ್ರೊಟೀನ್ ಸೇವನೆ ಅತ್ಯಗತ್ಯವಾದುದು. ಹಿರಿಯ ನ್ಯೂಟ್ರಿಶಿಯನಿಸ್ಟ್ ಸೀಮಾ ಪುರಿ ಹೇಳುವಂತೆ ಪ್ರೋಟೀನ್ ಕಿಣ್ವಗಳು, ಹಾರ್ಮೋನುಗಳು ಮತ್ತು ಹಿಮೋಗ್ಲೋಬಿನ್‌ನಂತಹ ರಕ್ತದ ಘಟಕಗಳ ಪ್ರಮುಖ ಅಂಶವಾಗಿದೆ ಹಾಗೂ ದೇಹದಲ್ಲಿ ಬೇರೆ ಬೇರೆ ಕ್ರಿಯೆಗಳನ್ನು ನಡೆಸಲು ಪ್ರೊಟೀನ್ ಬೇಕು ಎಂದಿದ್ದಾರೆ. ನಮ್ಮ ದೇಹಕ್ಕೆ ಪ್ರೊಟೀನ್ ಏಕೆ ಬೇಕು? ಸೀಮಾ ಹೇಳುವಂತೆ ಐಸಿಎಮ್‌ಆರ್ ಶಿಫಾರಸು ಮಾಡಿರುವಂತೆ ನಮ್ಮ ದೇಹದ ತೂಕಕ್ಕೆ ಅನುಗುಣವಾಗಿ 0.66ಗ್ರಾಮ್/ಕೆಜಿ ಗೆ ತಕ್ಕಂತೆ ಪ್ರೊಟೀನ್ ಸೇವನೆ ಮುಖ್ಯ ಎಂಬುದು ಅವರ ಸಲಹೆಯಾಗಿದೆ. ಲಿಂಗ ಹಾಗೂ ನಿಮ್ಮ ಚಟುವಟಿಕೆ ಯಾವುದೇ ಆಗಿರಲಿ ದೇಹದ ತೂಕಕ್ಕೆ ಅನುಗುಣವಾಗಿ ಪ್ರೊಟೀನ್ ಸೇವನೆ ಮುಖ್ಯ ಎಂದು ತಿಳಿಸಿದ್ದಾರೆ. ಪ್ರೊಟೀನ್ ಎಂಬುದು ಸಮತೋಲಿತ ಆಹಾರ ಪದ್ಧತಿಯಿಂದ ಬರುವುದು ಮುಖ್ಯವಾಗಿದೆ ಎಂದು ಸೀಮಾ ಸೂಚಿಸಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.