NEWS

SP Balasubrahmanyam: ಎಸ್​ಪಿಬಿ ಆಡಿ ಬೆಳೆದ ಮನೆಗೆ ಇದೆಂಥಾ ಸ್ಥಿತಿ ಬಂತು? ಗಾನ ಗಂಧರ್ವ ಬಾಲಸುಬ್ರಹ್ಮಣ್ಯಂ ಅಭಿಮಾನಿಗಳು ಬೇಸರ ಹೊರಹಾಕಿದ್ದು ಯಾಕೆ?

ಖ್ಯಾತ ಗಾಯಕ ಎಸ್​ ಪಿ ಬಾಲಸುಬ್ರಮಣ್ಯಂ (SP Balasubrahmanyam) ನಮ್ಮನ್ನು ಅಗಲಿ ವರ್ಷಗಳೆ ಕಳೆದು ಹೋಗಿದ್ರು. ಅವರ ಸುಮಧುರ ಹಾಡುಗಳಿಂದ ಎಸ್​ಪಿಬಿ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿದ್ದಾರೆ. ಬಾಲಸುಬ್ರಮಣ್ಯಂ ಗಾಯಕನಾಗಿ (Singer SPB) ಪಯಣ ಶುರು ಮಾಡಿದಾಗ ನಾನಾ ಕಷ್ಟಗಳನ್ನು ಎದುರಿಸಿಯೇ ಗೆಲುವಿನ ಶಿಖರ ಏರಿದ್ರು. ಇಂದಿಗೂ ಕನ್ನಡಿಗರು ಅವರ ಹಾಡುಗಳನ್ನು (SPB Songs) ಗುನುಗುತ್ತಲೇ ಇರುತ್ತಾರೆ. ಆದ್ರೆ ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ್ದು, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ (Nelluru), ತಿಪ್ಪರಾಜುವಾರಿ ಬೀದಿಯಲ್ಲಿರುವ ತಮ್ಮ ನಿವಾಸ ಈಗ ಎಂಥಾ ಸ್ಥಿತಿಯಲ್ಲಿದೆ ಗೊತ್ತಾ? ಎಸ್​ಪಿಬಿ ಹಾಡಿ ಬೆಳೆದ ಮನೆ ಈಗ ಹೇಗಿದೆ? ನೆಲ್ಲೂರು ಜಿಲ್ಲೆಯವಾದ ಎಸ್‌ಪಿ ಬಾಲ ಸುಬ್ರಹ್ಮಣ್ಯಂ ಸಿನಿಮಾಗಳಲ್ಲಿ ಹಾಡಿ ಜನಪ್ರಿಯತೆ ಪಡೆದ ಬಳಿನ್ನು ನೆಲ್ಲೂರನ್ನು ತೊರೆದು ತಮಿಳುನಾಡಿನಲ್ಲಿ ನೆಲೆಸಿದ್ರು. ತಿಪ್ಪರಾಜುವಾರಿ ಬೀದಿಯಲ್ಲಿ ಎಸ್‌ಪಿ ಬಾಲು ಅವರ ಸ್ವಂತ ಮನೆ ಇದೆ. ಎಸ್‌ಪಿ ಬಾಲು ಚೆನ್ನೈನಲ್ಲಿ ನೆಲೆಸಿದ್ದರೂ, ಅವ್ರ ಪೋಷಕರು ಈ ಮನೆಯಲ್ಲೇ ವಾಸಿಸುತ್ತಿದ್ದರು. ಕಂಚಿ ಪೀಠಕ್ಕೆ ಹಸ್ತಾಂತರ ಎಸ್‌ಪಿಬಿ ಪೋಷಕರ ನಿಧನದ ನಂತರ, ಈ ಮನೆಯನ್ನು 2020ರಲ್ಲಿ ವೇದ ಪಾಠಶಾಲೆ ಸ್ಥಾಪಿಸಲು ಕಂಚಿ ಪೀಠಕ್ಕೆ ಹಸ್ತಾಂತರಿಸಿದ್ದಾರೆ. ಕಂಚಿ ಪೀಠಾಧಿಪತಿಗಳ ಸಲಹೆಯಂತೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು 10 ಲಕ್ಷ ಖರ್ಚು ಮಾಡಿ ಶಾಲೆಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಟ್ಟಿದ್ರು. ಆದ್ರೆ ಈ ಮನೆ ಈಗ ಏನಾಗಿದೆ. 5 ವರ್ಷ ಕಳೆದ್ರೂ ಶುರುವಾಗಲಿಲ್ಲ ಶಾಲೆ ಬಾಲಸುಬ್ರಹ್ಮಣ್ಯಂ ಈ ಮನೆಯಲ್ಲಿ ‘ವೇದ-ನಾದ’ ಅಭಿಯಾನವನ್ನು ಮುಂದುವರಿಸುವಂತೆ ಹೇಳದ್ರು. ಎಸ್​ಪಿಬಿ ಅವರ ನಿಧನದ ನಂತರವೂ ಅವ್ರು ನೀಡಿದ ನಿವಾಸ ಬಳಕೆಯಾಗದೆ ಉಳಿದಿದೆ. 5 ವರ್ಷ ಕಳೆದ್ರೂ ಪೂರ್ಣ ಪ್ರಮಾಣದ ವೇದ ಪಾಠಶಾಲೆ ಸ್ಥಾಪನೆಯಾಗಿಲ್ಲ. ಕೊಟ್ಟ ಭರವಸೆ ಈಡೇರಿಸಲಿಲ್ಲ ನೆಲ್ಲೂರಿನಲ್ಲಿ ನಡೆದ ಸಮಾರಂಭದಲ್ಲಿ ಕಂಚಿ ಪೀಠದ ಮುಖ್ಯಸ್ಥರು ‘ವೇದ-ನಾದ’ ಪದ್ಧತಿ ಪ್ರಚಾರಕ್ಕೆ ಮನೆಯನ್ನು ಬಳಸಿಕೊಳ್ಳುವುದಾಗಿ ಭರವಸೆ ನೀಡಿದ್ರು. ಆದರೆ, ಐದು ವರ್ಷ ಕಳೆದರೂ ಭರವಸೆ ನೀಡಿದ ಕಾರ್ಯಕ್ರಮಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ದಿವಂಗತ ಗಾಯಕನ ಮನೆ ಪಾಳುಬಿದ್ದ ಬಂಗಲೆಯಾಗ್ತಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. 1 ಕೋಟಿ ಬೆಲೆ ಬಾಳೋ ಮನೆ ಒಂದು ಕಾಲದಲ್ಲಿ ಮನೆ ತುಂಬಾ ಜನ, ಮಕ್ಕಳು ಓಡಾಡ್ತಿದ್ದ ಈ ನಿವಾಸ ಈಗ ಕತ್ತಲೆಯಲ್ಲಿ ಮುಳುಗಿದೆ. ಪಾಳುಬಿದ್ದ ಬಂಗಲೆಯಂತೆ ಆಗಿದೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು 2020ರಲ್ಲಿ ಕೋವಿಡ್‌ನಿಂದ ನಿಧನರಾದರು. ನೆಲ್ಲೂರಿನಲ್ಲಿರುವ ಎಸ್​ಪಿಬಿ ಹುಟ್ಟಿ ಬೆಳೆದ ಮನೆ ಸುಮಾರು 1 ಕೋಟಿಗೂ ಅಧಿಕವಾಗಿ ಬೆಲೆ ಹೊಂದಿದೆ. ಗಾನ ಗಂಧರ್ವ ಎಸ್​ಬಿಪಿ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಗಾಯಕರಲ್ಲಿ ಒಬ್ಬರು ಎಸ್‍ಪಿ ಬಾಲಸುಬ್ರಮಣ್ಯಂ. ಅವರು ಪ್ರಧಾನವಾಗಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಒಟ್ಟು 16 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದ್ದು. ಬಾಲಸುಬ್ರಹ್ಮಣ್ಯಂ ಅವರು 15 ಡಿಸೆಂಬರ್ 1966 ರಂದು ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಲನಚಿತ್ರಕ್ಕಾಗಿ ‘ಎಮಿಯೀ ವಿಂತಾ ಮೋಹಮ್’ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು. ಇದನ್ನೂ ಓದಿ: Nayanthara: ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಯನತಾರಾ! 5 ಕೋಟಿಗೆ ಬೇಡಿಕೆ ಇಟ್ಟ ನಿರ್ಮಾಪಕ! ಕಾರಣ ಏನು? ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ನಾಲ್ಕು ಭಾಷೆಗಳಲ್ಲಿ ತಮ್ಮ ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 25 ತೆಲುಗು ಸಿನಿಮಾದಲ್ಲಿನ ಅವರ ಕೆಲಸಕ್ಕಾಗಿ ಆಂಧ್ರಪ್ರದೇಶ ರಾಜ್ಯದ ನಂದಿ ಪ್ರಶಸ್ತಿ, ಮತ್ತು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಹಲವಾರು ಇತರ ರಾಜ್ಯ ಪ್ರಶಸ್ತಿಗಳು, ಇನ್ನೂ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.